Film News:
ದರ್ಶನ್ ಅಂದ್ರೆ ಕರುನಾಡಿನ ಜನತೆಗೆ ಅದೇನೋ ಗೌರವದ ಅಭಿಮಾನ ದಚ್ಚು ಕೂಡಾ ಹಾಗೆನೇ ಅಭಿಮಾನಿಗಳನನ್ನು ತುಂಬಾ ಪ್ರೀತಿಸೋ ಗುಣ ಅವರದ್ದು. ಹೊಸ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಪ್ರಚಾರದಲ್ಲಿ ಬ್ಯುಸಿಯಾಗಿರೋ ದರ್ಶನ್ ಇದೀಗ ಒಂದು ಹುಡುಗಿಯ ಹುಟ್ಟುಹಬ್ಬ ಆಚರಿಸಿ ಸುದ್ದಿಯಾಗಿದ್ದಾರೆ. ಫ್ಯಾನ್ಸ್ ಗೆ ಯಾರೀ ಹುಡುಗಿ ಎಂಬ ಪ್ರಶ್ನೆ ಮೂಡಿದೆ. ಹಾಗಿದ್ರೆ ಯಾರೀ ಹುಡುಗಿ ದರ್ಶನ್ ಹುಟ್ಟು ಹಬ್ಬ ಸೆಲೆಬ್ರೇಟ್ ಮಾಡಿದ್ಯಾಕೆ ..? ನೀವೇ ನೋಡಿ
ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಸದ್ಯ ಹೊಸ ಸಿನಿಮಾ ನೀಡೋ ಭರದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ದೇಶ ವಿದೇಶದಲ್ಲಿ ಸಿನಿಮಾ ವಿಚಾರವಾಗಿ ಸುತ್ತಾಡುತ್ತಿದ್ದಾರೆ. ಹೀಗಿದ್ರೂ ಅವರು ಒಂದು ಹುಡುಗಿಯ ಬರ್ತ್ ಡೇ ಆಚರಿಸಿ ಸುದ್ದಿಯಾಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳನ್ನು ದೇವರೆಂಬಂತೆಯೇ ಕಾಣುವವರು ಅಭಿಮಾನಿಗಳೊಂದಿಗೆ ಉತ್ತಮ ಒಡನಾಟವನ್ನು ಹೊಂದಿರುವ ದಚ್ಚು ತನ್ನ ಬಿಗ್ ಫ್ಯಾನ್ ಬರ್ತ್ ಡೇ ಯನ್ನು ಆಚರಿಸಿದ ಫೋಟೋವೊಂದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಪ್ರಚಾರ ಅಭಿಮಾನಿಗಳಿಂದಲೇ ಭರ್ಜರಿ ಪ್ರಚಾರ ಕಾರ್ಯ ನಡೆಯುತ್ತಿದೆ. ಇದೇ ಕ್ರಾಂತಿ ಪ್ರಚಾರ ಕಾರ್ಯದಲ್ಲಿ ಬರ್ತ್ ಡೇ ಆಚರಿಸಿಕೊಂಡ ಕ್ಯೂಟ್ ಹುಡುಗಿ ಇಶಿತಾ ಕೂಡಾ ಒಬ್ಬರು. ಆ ಒಂದು ದಿನ ಒಂದು ಬಸ್ ನಲ್ಲಿ ಅಭಿಮಾನಿಗಳೆಲ್ಲಾ ಒಂದೊಂದು ಜಿಲ್ಲೆಯಲ್ಲಿ ಕ್ರಾಂತಿ ಪ್ರಚಾರ ಮಾಡುವ ಅಭಿಯಾನ ಹಮ್ಮಿಕೊಂಡಿದ್ರು,ಅದರಲ್ಲಿ ಇಶಿತಾ ಕೂಡಾ ಇದ್ರು. ಆದರೆ ನಂತರ ಆಕೆ ಬೇರೆ ಕೆಲಸದ ಅನ್ವಯ ಬೇರೆಡೆಗೆ ಹೋಗಿದ್ದರು. ಅದೇ ವೇಳೆಗೆ ಪ್ರಚಾರದಲ್ಲಿ ನಿರತರಾಗಿದ್ದ ಅಭಿಮಾನಿಗಳನ್ನು ದರ್ಶನ್ ಮಾತನಾಡಿಸಲು ಬಂದಿದ್ರು. ಆದರೆ ಇಶಿತಾ ಬರೋ ವೇಳೆಗೆ ದರ್ಶನ್ ಡಿ.56 ಚಿತ್ರದ ಶೂಟಿಂಗ್ ಗೆ ಹೊರಟಿದ್ರು. ಇಶಿತಾ ಬರೋ ಹೊತ್ತಿಗೆ ದರ್ಶನ್ ಹೋಗಿ ಆಗಿತ್ತು. ಇದರಿಂದ ಇಶಿತಾ ಬೇಜಾರು ಮಾಡಿಕೊಂಡಿದ್ರು. ಈ ವಿಚಾರ ತಿಳಿದ ದರ್ಶನ್ ಇಶಿತಾ ಅವರ ಹುಟ್ಟು ಹಬ್ಬದ ದಿನ ಅವರ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ಇದರಿಂದ ಇಶಿತಾ ಫುಲ್ ಖುಷಿಯಾಗಿದ್ದಾರೆ.
ಇಶಿತಾ ನಟಿ ಕೂಡಾ ಹೌದು. ಸಿನಿಮಾದಲ್ಲಿ ನಟಿಸುತ್ತಾ ನಿರೂಪಣೆ ಕೂಡಾ ಮಾಡುತ್ತಾರೆ ಎನ್ನಲಾಗಿದೆ. ಜೊತೆಗೆ ದರ್ಶನ್ ಅವರ ದೊಡ್ಡ ಫ್ಯಾನ್ ಕೂಡಾ ಹೌದು. ಒಟ್ಟಾರೆ ತನ್ನ ಅಭಿಮಾನಿಯ ಜೊತೆ ದಚ್ಚು ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದು ಇತರ ಫ್ಯಾನ್ಸ್ ಗೂ ಖುಷಿ ಕೊಟ್ಟಿದೆ.ಈ ಫೋಟೋ ಸದ್ಯ ವೈರಲ್ ಆಗುತ್ತಿದೆ.
ಮಕ್ಕಳಿಗೆ 6 ತಿಂಗಳು ತುಂಬಿದ ಖುಷಿಗೆ ಹೊಸ ಫೋಟೋ ಶೇರ್ ಮಾಡಿದ ಅಮೂಲ್ಯಾ..