Film News:
ಮೊದಲಿಂದನೂ ಡಿ ಬಾಸ್ ಪ್ರಾಣಿ ಪ್ರೇಮಿ. ತನ್ನ ಬಿಡುವಿನ ಸಮಯವನ್ನು ಸಾಕು ಪ್ರಾಣಿಗಳ ಜೊತೆ ಕಾಲ ಕಳೆಯುವುದು ಅವರಿಗೆ ಅಭ್ಯಾಸ ಇದೀಗ ದಚ್ಚು ಝೂ ಗೆ ಹೊಸ ಪ್ರಾಣಿ ಪಕ್ಷಿಗಳು ಸೇರ್ಪಡೆಯಾಗಿವೆಯಂತೆ ಹಾಗಿದ್ರೆ ಎಲ್ಲಿಂದೆಲ್ಲಾ ಹೊಸ ಪ್ರಾಣಿಗಳ ಬಂದಿವೆ ಗೊತ್ತಾ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಮೈಸೂರಿನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಡೆತನದ ತೂಗುದೀಪ ಫಾರ್ಮ್‌ಹೌಸ್ ಬಗ್ಗೆ ಗೊತ್ತೇಯಿದೆ. ನಟ ದರ್ಶನ್ ತಮ್ಮ ಬಿಡುವಿನ ಬಹುತೇಕ ಸಮಯವನ್ನು ಅಲ್ಲೇ ಕಳೆಯುತ್ತಾರೆ. ಪ್ರಾಣಿ-ಪಕ್ಷಿ ಪ್ರೇಮಿಯಾಗಿರುವ ದರ್ಶನ್ ತಮ್ಮ ಫಾರ್ಮ್‌ಹೌಸ್‌ನಲ್ಲಿ ದೇಶ ವಿದೇಶದ ವಿವಿಧ ಪ್ರಭೇದಗಳ ಪ್ರಾಣಿ- ಪಕ್ಷಿಗಳನ್ನು ಸಾಕುತ್ತಿದ್ದಾರೆ.ಪ್ರಾಣಿ ಪಕ್ಷಿ ಇಷ್ಟ ಎಂದು ದುಡ್ಡು ಕೊಟ್ಟು ತಂದು ಸಾಕುವವರಲ್ಲ ದರ್ಶನ್. ಅವುಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ದರ್ಶನ್ ತಿಳಿದುಕೊಂಡಿದ್ದಾರೆ. ಸದಾ ಇಂತಹ ವಿಚಾರಗಳನ್ನು ತಿಳಿದುಕೊಳ್ಳಲು ಹಾತೊರೆಯುತ್ತಿರುತ್ತಾರೆ. ಇನ್ನು ದರ್ಶನ್ ಫಾರ್ಮ್‌ಹೌಸ್‌ನಲ್ಲಿ ವಿವಿಧ ತಳಿಯ ನಾಯಿಗಳು ಇವೆ. ಸ್ನೇಹಿತರ ಜೊತೆ ದರ್ಶನ್ ಇದೇ ಫಾರ್ಮ್ ಹೌಸ್‌ನಲ್ಲಿ ಬಿಡುವಿನ ಸಮಯ ಕಳೆಯುತ್ತಾರೆ. ದನದ ಕೊಟ್ಟಿಗೆ ಪಕ್ಕದಲ್ಲೇ ಲ್ಯಾಂಬೋರ್ಗಿನಿ ಕಾರ್ ತಂದು ನಿಲ್ಲಿಸಿದ್ದಾರೆ. ಇದನ್ನು ನೋಡಿದ ಕೆಲ ಅಭಿಮಾನಿಗಳು “ಏನ್ ಬಾಸ್ ನೀವು, ಲ್ಯಾಂಗೋರ್ಗಿನಿ ತಂದು ಹೀಗೆ ನಿಲ್ಲಿಸಿಬಿಟ್ಟಿದ್ದೀರಾ?” ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಹಂಸಗಳು, ಬ್ರಹ್ಮ ಕೋಳಿಗಳು ತೂಗುದೀಪ ಫಾರ್ಮ್ ಹೌಸ್‌ನಲ್ಲಿ ಮಿನಿ ಝೂ ಇದೆ ಎಂದು ಹೇಳಬಹುದು. ಝೂ ಮಾದರಿಯಲ್ಲೇ ದೊಡ್ಡ ದೊಡ್ಡ ಪಂಜರಗಳಲ್ಲಿ ವಿವಿಧ ಬಗೆಯ ಪ್ರಾಣಿ ಪಕ್ಷಿಗಳನ್ನು ಸಾಕಲಾಗುತ್ತಿದೆ. ಅದಕ್ಕಾಗಿ ಒಂದಷ್ಟು ಕೆಲಸಗಾರರು ಇದ್ದಾರೆ. ದರ್ಶನ್ ಹೋದರೆ ತಾವೇ ಪ್ರಾಣಿ, ಪಕ್ಷಿಗಳ ಆರೈಕೆಗೆ ಇಳಿದುಬಿಡುತ್ತಾರೆ. ಇನ್ನು ಆಸ್ಟ್ರೇಲಿಯಾದ ಕಪ್ಪು ಹಂಸಗಳು ನೀರಾಟ ಆಡುತ್ತಿರುತ್ತವೆ. ಬ್ರಹ್ಮ ತಳಿಯ ಕೋಳಿಗಳನ್ನು ಕೂಡ ಸಾಕಿದ್ದಾರೆ. ಪ್ರಾಣಿ ಪಕ್ಷಿ ಸಾಕುವುದನ್ನು ವ್ಯಾಪಾರ ದೃಷ್ಟಿಯಿಂದ ನೋಡದೇ ಹವ್ಯಾಸವಾಗಿ ಮಾಡಿಕೊಂಡಿದ್ದಾರೆ. ಒಂದೇ ಒಂದು ಪ್ರಾಣಿ, ಪಕ್ಷಿ ಸತ್ತರೂ ಬಹಳ ನೊಂದು ಕೊಳ್ಳುತ್ತಾರೆ.
ಅಪರೂಪದ ಎಲೆಕ್ಟಸ್ ಗಿಣಿಗಳು ಇನ್ನು ಫಾರ್ಮ್‌ಹೌಸ್‌ನಲ್ಲಿ ವಿವಿಧ ಬಗೆಯ ಗಿಣಿಗಳನ್ನು ದರ್ಶನ್ ಸಾಕುತ್ತಿದ್ದಾರೆ. ಎಲೆಕ್ಟಸ್ ಪ್ರಭೇದದ ಪಕ್ಷಿ ಜೋಡಿ ಕೂಡ ಇದೆ. ಇದರ ವಿಶೇಷ ಏನು ಎನ್ನುವುದನ್ನು ದರ್ಶನ್ ವಿವರಿಸಿದ್ದಾರೆ. ಸಾಮಾನ್ಯವಾಗಿ ಗಿಣಿಗಳಲ್ಲಿ ಹೆಣ್ಣು – ಗಂಡಿನ ಮೈ ಬಣ್ಣ ಒಂದೇ ರೀತಿ ಇರುತ್ತದೆ. ಅಥವಾ ಕೊಂಚ ಬದಲಾವಣೆ ಇರಬಹುದು. ಆದರೆ ಎಲೆಕ್ಟಸ್ ಜಾತಿಯ ಗಿಣಿ ಆ ತರ ಅಲ್ಲ. ಗಂಡು ಪಕ್ಷಿಯ ಮೈಬಣ್ಣ ಹಸಿರಾಗಿರುತ್ತದೆ. ಆದರೆ ಹೆಣ್ಣು ಪಕ್ಷಿ ಕೆಂಪು, ನೀಲಿ, ಹಳದಿ ಮಿಶ್ರಣವಾಗಿರುತ್ತದೆ. ಇನ್ನುಳಿದಂತೆ ಬಿಳಿ, ಉದ್ದ ಜುಟ್ಟಿನ ಪಕ್ಷಿ ಹೀಗೆ ಹಲವು ಪ್ರಭೇದ ದೇಶ ವಿದೇಶದ ಪಕ್ಷಿಗಳನ್ನು ದರ್ಶನ್ ಸಾಕಿದ್ದಾರೆ. ಇನ್ನು ಒಂದಷ್ಟು ಕುದುರೆ, ಕುರಿಗಳನ್ನು ಕೂಡ ದರ್ಶನ್ ಸಾಕಿ ಸಲಹುತ್ತಿದ್ದಾರೆ.
ಕೊನೆಯ ಹಂತದ ಚಿತ್ರೀಕರಣದಲ್ಲಿ ‘ಧೀರ ಭಗತ್ ರಾಯ್’ – ಫೆಬ್ರವರಿಯಲ್ಲಿ ಚಿತ್ರದ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆ