Saturday, January 11, 2025

Latest Posts

Dharshan : ಐತಿಹಾಸಿಕ ಸಿನಿಮಾ ಮಾಡ್ತಾರಾ ದರ್ಶನ್..?! ಏನಿದು ಪೋಸ್ಟರ್..?!

- Advertisement -

Film News : ಸ್ಯಾಂಡಲ್ ವುಡ್ ನಲ್ಲಿ ಕಾಟೇರ ಆರ್ಭಟ ಶುರುವಾಗಿದೆ. ಗಣೇಶ ಹಬ್ಬಕ್ಕೆ ಟೀಸರ್ ಕೂಡ ರಿಲೀಸ್ ಆಗಲಿದೆ ಎನ್ನಲಾಗ್ತಿದೆ. ಇದೆಲ್ಲದರ ಮಧ್ಯೆ ದಚ್ಚು ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ . ಅದೇನಂತೀರಾ ನೀವೇ ನೋಡಿ…..

ಸ್ಯಾಂಡಲ್‌ವುಡ್‌ನಲ್ಲಿ ‘ಕಾಟೇರ’ನ ಆರ್ಭಟ ಶುರುವಾಗುತ್ತಿದೆ. ಗಣೇಶ ಹಬ್ಬಕ್ಕೆ ಸಿನಿಮಾ ಟೀಸರ್ ರಿಲೀಸ್ ಆಗುತ್ತದೆ ಎನ್ನಲಾಗ್ತಿದೆ. ‘ಕಾಟೇರ’ ಬಳಿಕ ದರ್ಶನ್ ಮತ್ತೆರಡು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೆಲ್ಲದರ ನಡುವೆ ದಚ್ಚು ಹೊಸ ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದ್ದಾರೆ.
ಹೌದು ದಚ್ಚು ಇಮ್ಮಡಿ ಪುಲಿಕೇಶಿ ಲುಕ್‌ನಲ್ಲಿ ಸ್ಪೆಷಲ್ ಪೋಸ್ಟರ್ ವೈರಲ್ ಆಗ್ತಿದೆ.

ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪೌರಾಣಿಕ, ಐತಿಹಾಸಿಕ ಪಾತ್ರಗಳಿಗೆ ದರ್ಶನ್ ಹೆಸರು ಮೊದಲು ಕೇಳಿಬರುತ್ತಿದೆ. ದುರ್ಯೋಧನನಾಗಿ, ಸಂಗೊಳ್ಳಿ ರಾಯಣ್ಣನಾಗಿ ದರ್ಶನ್ ದರ್ಬಾರ್ ನೋಡಿದ ಸಿನಿರಸಿಕರು ಫಿದಾ ಆಗಿದ್ದರು. ಇನ್ನು ಡಿ. ರಾಜೇಂದ್ರ ಸಿಂಗ್‌ಬಾಬು ನಿರ್ದೇಶನದ ‘ರಾಜಾ ವೀರಮದಕರಿ ನಾಯಕ’ ಚಿತ್ರದಲ್ಲೂ ದರ್ಶನ್ ನಟಿಸಬೇಕಿತ್ತು. ಒಂದು ವಾರ ಚಿತ್ರೀಕರಣದ ಬಳಿಕ ಸಿನಿಮಾ ನಿಂತಿತ್ತು.

ಚಾಲುಕ್ಯ ವಂಶದ ಪ್ರಸಿದ್ದ ರಾಜ ಇಮ್ಮಡಿ ಪುಲಿಕೇಶಿ ಲುಕ್‌ನಲ್ಲಿ ದರ್ಶನ ಕಾಣಿಸಿಕೊಂಡಿರುವ ಪೋಸ್ಟರ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. ಅಭಿಮಾನಿಗಳು ಈ ಫೋಟೊವನ್ನು ಸಿಕ್ಕಾಪಟ್ಟೆ ಶೇರ್ ಮಾಡುತ್ತಿದ್ದಾರೆ.

ಒಟ್ಟಾರೆ ಈ ಪೋಸ್ಟರನ್ನು ಅಭಿಮಾನಿಗಳೇ ಕ್ರಿಯೇಟ್ ಮಾಡಿದ್ದು ದಚ್ಚು ಅಭಿಮಾನಿಗಳೇ ಪೋಸ್ಟರ್ ವೈರಲ್ ಮಾಡುತ್ತಿದ್ದಾರೆ. ದರ್ಶನ್ ಐತಿಹಾಸಿಕ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಅನ್ನೋ ಮನದಾಸೆಯನ್ನು ಈ ರೀತಿಯಾಗಿ ವ್ಯಕ್ತಪಡಿಸುತ್ತಿದ್ದಾರೆ. ಅವರ ಬಯಕೆ ಈಡೇರಲಿ ಅನ್ನೋದೇ ಕನ್ನಡ ಸಿನಿ ಅಭಿಮಾನಿಗಳ ಆಸೆ ಕೂಡ.

- Advertisement -

Latest Posts

Don't Miss