Film News: ಒಂದೆಡೆ ಮಲೆನಾಡಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ಮಳೆಗೆ ಪ್ರಯಾಣ ಪ್ರಯಾಸವಾಗುತ್ತೆ ಆದರೆ ಡಿ ಬಾಸ್ ಇದೇ ಸಮಯದಲ್ಲಿ ಗ್ಯಾಂಗ್ ಕರಕೊಂಡು ಟ್ರಿಪ್ ಗೆ ಹೊರಟಿದ್ದಾರೆ….ಅಷ್ಟೇ ಅಲ್ಲ ಗುಡ್ಡಗಾಡು ಪ್ರದೇಶದಲ್ಲಿ ಕಾರ್ ಡ್ರಿಫ್ಟಿಂಗ್ ಕೂಡಾ ಮಾಡಿದ್ದಾರೆ. ನಿಜವಾಗ್ಲೂ ಗಜಪಡೆ ಗ್ಯಾಂಗ್ ಟೂರ್ ಮನಮೋಹಕವೇ ಆಗಿತ್ತು. ಆ ಟ್ರಿಪ್ ನ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ…..
ದರ್ಶನ್ ಅರಣ್ಯ ಇಲಾಖೆಯ ರಾಯಭಾರಿ ಅನ್ನೋದು ಗೊತ್ತೇ ಇದೆ. ಇಷ್ಟೇ ಅಲ್ಲದೆ ಕಾಡು-ಮೇಡು, ಪ್ರಾಣಿ-ಪಕ್ಷಿಗಳು ಅಂದರೆ ಬಲು ಇಷ್ಟು. ಅದಕ್ಕೆ ಬಿಡುವು ಸಿಕ್ಕಾಗ ಹೀಗೆ ಆಫ್ ರೋಡ್ ಟ್ರಿಪ್ ಹೋಗೋದು ದರ್ಶನ್‌ಗೆ ಹೊಸದೇನಲ್ಲ. ಆದರೆ, ಈ ಮಳೆಯಲ್ಲಿ ಆಫ್ ರೋಡ್ ಟ್ರಿಪ್ ವಿರಳ.
ಆಗಾಗ ದರ್ಶನ್ ಟ್ರಿಪ್‌ಗೆ ಅಂತ ಹೋಗುತ್ತಲೇ ಇರುತ್ತಾರೆ. ಈ ಬಾರಿ ಟ್ರಿಪ್‌ನಲ್ಲಿ ಅಡ್ವೆಂಚರ್ ಮಾಡಿದ್ದಾರೆ. ಸಕಲೇಶಪುರದಲ್ಲಿ ಮಳೆ ಜೋರಿದೆ. ಹೀಗಾಗಿ ಕಾಡಿನ ರಸ್ತೆಗಳೆಲ್ಲ ನದಿಯಂತೆ ಹರಿಯುತ್ತಿವೆ. ಕಾರು ಬಂದರೆ, ಚಕ್ರಗಳೆಲ್ಲ ಹೂತು ಹೋಗುವತ್ತವೆ. ಇಂತಹ ದಾರಿಗಳಲ್ಲೇ ಬೆಟ್ಟ ಹತ್ತಿದ್ದಾರೆ. ಕಾಡು ಸುತ್ತಿದ್ದಾರೆ. ಈ ವಿಡಿಯೋ ನೋಡುವುದಕ್ಕೆ ರೋಮಾಂಚನಕಾರಿಯಾಗಿದೆ.
ಧರೆಗೆ ಉರುಳುತ್ತಿದ್ದ ದರ್ಶನ್ ಕಾರು ಆಫ್ ರೋಡ್ ಟ್ರಿಪ್ ಅಡ್ವಂಚರ್ ಅನ್ನೋದೇ ಇದಕ್ಕೆ. ಮಲೆನಾಡು ಭಾಗದಲ್ಲಿ ಬಿಡದಂತೆ ಮಳೆ ಸುರಿಯುತ್ತೆ. ಇಂತಹ ಮಳೆಯಲ್ಲಿ ವಾಹನಗಳ ಪ್ರಯಾಣವೇ ಪ್ರಯಾಸ ತರುತ್ತೆ. ಅತ್ಯಂತ ಜಾಗರೂಕರಾಗಿ ಕಾರನ್ನು ಚಾಲಾಯಿಸಬೇಕು. ಒಂದು ಚೂರು ಯಾಮಾರಿದರೂ ಅಪಾಯ ತಪ್ಪಿದ್ದಲ್ಲ. ಸಕಲೇಶಪುರ ಟ್ರಿಪ್‌ನಲ್ಲೂ ಹೀಗೆ ಹಾಗಿತ್ತು.
ದರ್ಶನ್ ಪ್ರಯಾಣಿಸುತ್ತಿದ್ದ ಕಾರು ಬೆಟ್ಟದಿಂದ ಇಳಿಯುವಾಗ ಮಣ್ಣು ಸಡಿಲಗೊಂಡಿದ್ದರಿಂದ ಜಾರಿ ರಸ್ತೆಯ ಪಕ್ಕದಲ್ಲಿ ಸಿಕ್ಕಿಕೊಂಡಿತ್ತು. ಸ್ವಲ್ಪ ಯಾಮಾರಿದ್ದರೂ ಪಾತಾಳಕ್ಕೆ ಹೋಗುತ್ತಿತ್ತು. ಹೀಗೆ ಸಿಕ್ಕಿಕೊಂಡಿದ್ದ ಕಾರನ್ನು ಮತ್ತೆ ಎಳೆದು ರಸ್ತೆಗೆ ತಂದಿದ್ದೇ ರೋಚಕ. ದರ್ಶನ್ ಕಾರು ಡಿಫ್ಟಿಂಗ್ ಹೈಲೈಟ್ ಕಾರು ಡಿಫ್ಟಿಂಗ್ ಮಾಡೋದು ಒಂದು ಟ್ಯಾಲೆಂಟ್. ಕಾರು ಓಡಿಸೋರೆಲ್ಲರಿಗೂ ಇದು ಅಸಾಧ್ಯ? ಆದರೆ, ಸ್ಲಿಪರಿಯಾಗಿದ್ದ ಜಾಗದಲ್ಲಿ ದರ್ಶನ್ ಜೀಪ್ ಅನ್ನು ಡ್ರಿಪ್ಟಿಂಗ್ ಮಾಡಿದ್ದು ಮೈ ರೋಮಾಂಚನಗೊಳಿಸುವಂತೆ ಇದೆ.
KTVA : ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸಹಯೋಗದ ‘ಟಿವಿ ಠೀವಿ’ ಪತ್ರಿಕೆ ಬಿಡುಗಡೆ