Film News : ಅದು ಕೆಂಗೇರಿಯ ಚಿತ್ರಮಂದಿರವೊಂದರಲ್ಲಿ ಕೇಳಿ ಬಂದ ಹಿಂದಿ ಹಾಡು ಈ ಹಾಡಿಗೆ ಕುಣಿದು ಕುಪ್ಪಳಿಸಿದ್ದು ಮಾತ್ರ ಆ ಸ್ಟಾರ್ ಜೋಡಿ . ಹೌದು ದಚ್ಚು ತನ್ನ ಮಡದಿಯೊಂದಿಗೆ ಮೈಮರೆತು ಕುಣಿದ ವೀಡೀಯೋ ಸದ್ಯ ವೈರಲ್ ಆಗುತ್ತಿದೆ. ಹಾಗಿದ್ರೆ ದಚ್ಚು ದಂಪತಿ ಖುಷಿಗೆ ಕಾರಣವೇನು ಯಾಕೀ ನೃತ್ಯ ಹೇಳ್ತೀವಿ ಈ ಸ್ಟೋರಿಯಲ್ಲಿ…..
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಇತ್ತೀಚೆಗೆ ಅಭಿಮಾನಿಗಳ ಪ್ರೀತಿಯ ದಾಸ ಚಿತ್ರರಂಗದಲ್ಲಿ 26 ವರ್ಷ ಪೂರೈಸಿದ್ದರು. ಸ್ಪೆಷಲ್ ಸಿಡಿಪಿ ಟ್ರೆಂಡ್ ಮಾಡಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದರು. ಇದೇ ಸಂಭ್ರಮದಲ್ಲಿ ಸೂಪರ್ ಹಿಟ್ ‘ಮೆಜೆಸ್ಟಿಕ್’ ಚಿತ್ರವನ್ನು ಅಭಿಮಾನಿಗಳು ರೀ-ರಿಲೀಸ್ ಮಾಡಿ ಖುಷಿಪಟ್ಟಿದ್ದಾರೆ.
ಅಭಿಮಾನಿಗಳಿಗಂತಲೇ ಕೆಂಗೇರಿಯ ರಾಬಿನ್ ಚಿತ್ರಮಂದಿರದಲ್ಲಿ ‘ಮೆಜೆಸ್ಟಿಕ್’ ಚಿತ್ರದ ಸ್ಪೆಷಲ್ ಶೋ ಏರ್ಪಡಿಸಲಾಗಿತ್ತು. ಬ್ಯಾನರ್ ಕಟ್ಟಿ, ಪಟಾಕಿ ಸಿಡಿಸಿ, ಜೈಕಾರ ಹಾಕಿ ದಾಸನನ್ನು ಕೊಂಡಾಡಿದ್ದಾರೆ. ಇದೆಲ್ಲದರ ನಡುವೆ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಹೆಜ್ಜೆ ಹಾಕಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ದರ್ಶನ್- ವಿಜಯಲಕ್ಷ್ಮಿ ದಂಪತಿ ಡ್ಯಾನ್ಸ್ ಮಾಡಿದ್ದಾರೆ.
‘ಆಶಿಕಿ- 2’ ಚಿತ್ರದ ‘ಹಮ್ ತೇರೆ ಬಿನ್ ಅಬ್ ರೆಹ್ ನಹೀ ಸಕ್ತೆ’ ಹಾಡಿಗೆ ರೊಮ್ಯಾಂಟಿಕ್ ಮೂಡ್‌ನಲ್ಲಿ ದರ್ಶನ್- ವಿಜಯಲಕ್ಷ್ಮಿ ಸಿಂಪಲ್ ಸ್ಟೆಪ್ಸ್ ಹಾಕಿ ರಂಗೇರಿಸಿದ್ದಾರೆ. ಸುತ್ತ ಇದ್ದವರು ಚಪ್ಪಾಳೆ ತಟ್ಟಿ ಚಿಯರ್ ಅಪ್ ಮಾಡಿದ್ದಾರೆ. ದರ್ಶನ್ ಅಂತೂ ಬ್ಲ್ಯಾಕ್ ಟೀ-ಶರ್ಟ್ ಹಾಗೂ ಬ್ಲೂ ಡೆನಿಮ್‌ನಲ್ಲಿ ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ್ದಾರೆ. ಸದ್ಯ ಈ ಸಣ್ಣ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. ಅಭಿಮಾನಿಗಳ ವಾಟ್ಸಪ್ ಸ್ಟೇಟಸ್, ಇನ್‌ಸ್ಟಾ, ಎಫ್‌ಬಿ ಸ್ಟೋರಿಯಲ್ಲಿ ರಾರಾಜಿಸ್ತಿದೆ.
ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ವಿಜಯಲಕ್ಷ್ಮಿ ಕೆಮಿಕಲ್ಇಂಜಿನಿಯರ್ ಪದವೀಧರೆ. ದೂರದ ಸಂಬಂಧಿಕರೆ ಆದರೆ ವಿಜಯಲಕ್ಷ್ಮಿ ಅವರನ್ನು ಬರ್ತ್‌ಡೇ ಪಾರ್ಟಿಯಲ್ಲಿ ನೋಡಿ ದರ್ಶನ್ ಇಷ್ಟಪಟ್ಟಿದ್ದರು. ಬಳಿಕ ಇಬ್ಬರೂ ಪೋಷಕರ ಒಪ್ಪಿಗೆ ಪಡೆದು ಧರ್ಮಸ್ಥಳದಲ್ಲಿ ಮದುವೆ ಆಗಿದ್ದರು. ದಂಪತಿಗೆ ವಿನೀಶ್ ಎಂಬ ಮಗ ಕೂಡ ಇದ್ದಾನೆ. ‘ಐರಾವತ’ ಹಾಗೂ ‘ಯಜಮಾನ’ ಸಿನಿಮಾಗಳ ಸಣ್ಣ ಝಲಕ್‌ನಲ್ಲಿ ವಿನೀಶ್ ಸಹ ಕಾಣಿಸಿಕೊಂಡಿದ್ದಾನೆ.
BOSS and Attige grooving to a Song in a Party😍♥️#DBoss #Kaatera @dasadarshan pic.twitter.com/oqkj7BG2fM
— Darshan Trends™ (@DBossTrends) August 12, 2023
Sunny Leone : ಭಾರತದಲ್ಲಿ ಕಳೆದು ಕೊಂಡರಂತೆ ಸನ್ನಿಲಿಯೋನ್ ಮೂರು ಕಾರು..?!
Hostel Boys : ಕನ್ನಡದಲ್ಲಿ ಗೆದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ತೆಲುಗಿಗೆ ಡಬ್…!