Dharwad News: ಧಾರವಾಡ: ಧಾರವಾಡದ ನವಲಗುಂದ ತಾಲೂಕಿನಲ್ಲಿ ಡಿಸಿ ಜನಸ್ಪಂದನಾ ಕಾರ್ಯಕ್ರಮ ನಡೆದಿದ್ದು, ಧಾರವಾಡ ಡಿಸಿ ದಿವ್ಯಪ್ರಭು ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿದೆ.
ಈ ಕಾರ್ಯಕ್ರಮ ನವಲಗುಂದದ ಶಿಕ್ಷಕರ ಸಹಕಾರಿ ಕಲ್ಯಾಣ ಕೇಂದ್ರದಲ್ಲಿ ನಡೆದಿದ್ದು, ನವಲಗುಂದ ಶಾಸಕ ಎನ್.ಎಚ್.ಕೋನರೆಡ್ಡಿ ಭಾಗಿಯಾಗಿದ್ದರು.ಇನ್ನು ಸಭೆಯಲ್ಲಿ ಡೆಂಗ್ಯೂ ಜ್ವರ ನಿಯಂತ್ರಣ ಕುರಿತಾದ ಭಿತ್ತಿಪತ್ರ ಬಿಡುಗಡೆಯಾಗಿದೆ. ಈ ವೇಳೆ ಸಭೆಯಲ್ಲಿ ಒಟ್ಟು 174 ಅರ್ಜಿಗಳು ಸ್ವೀಕರಿಸಲಾಗಿದೆ. ನವಲಗುಂದ ತಾಲೂಕು- 110, ಅಣ್ಣಿಗೇರಿ- 46, ಹುಬ್ಬಳ್ಳಿ- 18 ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಶಾಲಾ ಕಟ್ಟಡ ದುರಸ್ತಿ, ಅನುಕಂಪ ಆಧಾರದ ಉದ್ಯೋಗ ನೀಡುವಿಕೆ, ಬೆಳೆ ವಿಮೆ ಪರಿಹಾರ, ವಸತಿ ನಿರ್ಮಾಣ, ಕುಡಿಯುವ ನೀರು, ಶಿಥಿಲ ಶಾಲಾ ಕಟ್ಟಡ, ರಸ್ತೆ ನಿರ್ಮಾಣ, ಶೌಚಾಲಯ, ಒಳ ಚರಂಡಿ ದುರಸ್ತಿ ಸೇರಿ ಹಲವು ಸಮಸ್ಯೆಗಳ ಬಗ್ಗೆ ಅರ್ಜಿ ತೆಗೆದುಕೊಳ್ಳಲಾಗಿದೆ. ಅಲ್ಲದೇ, ಕೆಲವು ಸಮಸ್ಯೆಗಳಿಗೆ ಶಾಸಕರು, ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಪರಿಹಾರ ಒದಗಿಸಿದರು.
ಬಾಹ್ಯಾಕಾಶದಲ್ಲಿ ಸಿಲುಕಿದ ಸುನೀತಾ ವಿಲಿಯನ್ಸ್; ಬಾಹ್ಯಾಕಾಶದಲ್ಲಿ ಏನಾಗ್ತಿದೆ ಗೊತ್ತಾ?