Hubballi News : ಧಾರವಾಡದಲ್ಲಿ ವರುಣನ ಅಬ್ಬರ ಸ್ವಲ್ಪ ಶಾಂತಗೊಂಡಿದೆ. ಸತತ ಮಳೆಯಿಂದಾಗಿ ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಜಲಪಾತಗಳಿಗೆ ಜೀವಕಳೆ ಬಂದಿದೆ. ಜಲಪಾತಗಳ ವೀಕ್ಷಣೆಗೆ ಬರುತ್ತಿರುವ ಜನರು ಅವುಗಳ ಸೊಬಗನ್ನು ಆಸ್ವಾದಿಸೋದು ಬಿಟ್ಟು, ಸೆಲ್ಫಿ, ಫೋಟೋ ಗೀಳಿನಲ್ಲಿ ಅಪಾಯವನ್ನೇ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.
ಬೇಡ್ತಿ ಹಳ್ಳಕ್ಕೆ ನಿರ್ಮಿಸಲಾಗಿರೋ ಜಲಾಶಯ, ಪ್ರತಿ ಬಾರಿ ಮಳೆಗಾಲದಲ್ಲಿ ಜೀವ ಪಡೆಯುತ್ತದೆ. ಜಲಾಶಯದ ಮೇಲೆ ನೀರು ಹರಿಯುತ್ತಿದ್ದರೂ ಯುವ ಸಮುದಾಯದ ಹುಚ್ಚಾಟ ನಡೆದಿದೆ. ಜಲಾಶಯ ಕೋಡಿ ಮೇಲೆ ನೀರಿನಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವ ಹುಚ್ಚಾಟ ಮಾಡ್ತಿದ್ದಾರೆ.
ಧಾರವಾಡ ಜೊತೆ ನೆರೆ ಜಿಲ್ಲೆಗಳಿಂದಲೂ ಪ್ರವಾಸಿಗರ ಆಗಮಿಸುತ್ತಿದ್ದಾರೆ. ಆದರೆ ಕೆಲವರ ಹುಚ್ಚಾಟದಿಂದ ನೀರ ಸಾಗರದ ಬಳಿ ಆತಂಕ ಸೃಷ್ಟಿಯಾಗಿದೆ. ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಪ್ರವಾಸಿಗರ ಆಗ್ರಹಿಸಲಾಗಿದೆ. ನೀರ ಸಾಗರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸುವಂತೆ ಒತ್ತಾಯಿಸಲಾಗಿದೆ.
Shivaraj : ಗಡಿಭಾಗದ, ಗಡಿ ಹೊರಗಿನ ಕನ್ನಡಿಗರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಚಿವ ಶಿವರಾಜ್ ತಂಗಡಗಿ
Sandalwood : ಕುಂದಾಪುರ : ಅರಣ್ಯ ಅಧಿಕಾರಿಗಳ ಕಾರ್ಯಾಚರಣೆ: ಗಂಧದ ಮರದ ತುಂಡುಗಳು ವಶಕ್ಕೆ