- Advertisement -
Dharwad News: ಧಾರವಾಡ: ಪ್ಲಾಸ್ಟರ್ ಆಫ್ ಪ್ಯಾರೀಸ್ನಿಂದ ಮಾಡಿದ 105 ಗಣೇಶನ ಮೂರ್ತಿಗಳನ್ನು ಮಾಲಿನ್ಯ ನಿಯಂತ್ರಣಾಧಿಕಾರಿಗಳು ಸೀಜ್ ಮಾಡಿದ್ದಾರೆ.
ಧಾರವಾಡದ ಗಾಂಧಿಚೌಕ್ ಹತ್ತಿರದ ಹೆಬ್ಬಳ್ಳಿ ಅಗಸಿ ರಸ್ತೆಯಲ್ಲಿ ಲಕ್ಷ್ಮಣರಾವ್ ಮೋರೆ ಎಂಬ ಗಣೇಶ ಮೂರ್ತಿ ಮಾರಾಟಗಾರ ಚಿತ್ಪಾವನ ಬ್ರಾಹ್ಮಣ ಸಂಘದ ಕಟ್ಟಡದಲ್ಲಿ ಪಿಓಪಿಯಿಂದ ಮಾಡಿದ ಗಣೇಶನ ಮೂರ್ತಿಗಳನ್ನು ಮಾರಾಟಕ್ಕಿಟ್ಟಿದ್ದರು.
ಖಚಿತ ಮಾಹಿತಿ ಮೇರೆಗೆ ಮಾಲಿನ್ಯ ನಿಯಂತ್ರಣ ಅಧಿಕಾರಿ ಐ.ಎಚ್.ಜಗದೀಶ, ಪಾಲಿಕೆ ವಲಯ ಆಯುಕ್ತ ಮಹೇಶ ಹಾಲಗಿ, ಪರಿಸರ ಅಭಿಯಂತರ ಅವಿನಾಶ ದಾಳಿ ನಡೆಸಿ ತಪಾಸಣೆ ಮಾಡಿದಾಗ ಪಿಓಪಿಯಿಂದ
ಮಾಡಿದ 105 ಗಣೇಶನ ಮೂರ್ತಿಗಳು ಪತ್ತೆಯಾಗಿವೆ.
ನಂತರ ಅಧಿಕಾರಿಗಳು ಅವುಗಳನ್ನು ಸೀಜ್ ಮಾಡಿದ್ದಾರೆ.ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾಯ್ದೆ ಅಡಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
- Advertisement -