Saturday, July 27, 2024

Latest Posts

Dharwad News: ಇಳಕಲ್ ಸೀರೆ, ಶರ್ಟು ಪಂಚೆಯಲ್ಲಿ ಮಿಂಚಿದ ಕಾಲೇಜು ವಿದ್ಯಾರ್ಥಿಗಳು

- Advertisement -

Dharwad News: ಶಾಲೆ, ಕಾಲೇಜು ಅಂದ ಕೂಡಲೇ ಓದು, ಆಟ, ಶಿಸ್ತು ಇರಬೇಕಾಗಿದ್ದೇ. ಇದೆಲ್ಲದರ ಜೊತೆಗೆ ವಿದ್ಯಾರ್ಥಿಗಳಿಗೆ ಬೇರೆ ಬೇರೆಯ ಚಟುವಟಿಕೆಗಳೂ ಇರಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳು ಖುಷಿಯಿಂದ ಕಾಲೇಜಿಗೆ ಬರುತ್ತಾರೆ. ಇದೇ ಕಾರಣಕ್ಕೆ ಧಾರವಾಡದ ಒಂದು ಕಾಲೇಜಿನಲ್ಲಿ ಒಂದು ವಾರದವರೆಗೆ ಫನ್ ವೀಕ್ ಅಂತಾ ಆಚರಿಸಲಾಯಿತು. ಈ ವಾರದ ಕೊನೆಯ ದಿನ ಸಾಂಪ್ರದಾಯಿಕ ದಿನ ಆಚರಿಸೋ ಮೂಲಕ ಶಾಲೆಯ ಆವರಣದಲ್ಲಿ ಹೊಸ ಜಗತ್ತನ್ನೇ ನಿರ್ಮಾಣ ಮಾಡಲಾಗಿತ್ತು.

ಇಳಕಲ್ ಸೀರೆ, ಸೊಂಟಕ್ಕೆ ಡಾಬು, ತಲೆ ತುಂಬ ಸೆರಗು, ಮೂಗಿಗೆ ಫಳ ಫಳ ಹೊಳೆಯೋ ಮೂಗುತಿ, ಕವಿಯಲ್ಲಿ ನೇತಾಡುತ್ತಿರೋ ಬೆಂಡೋಲಿ – ಇಲ್ಲಿ ಯಾವುದೋ ಸೌಂದರ್ಯ ಸ್ಪರ್ಧೆ ಅಥವಾ ಉಡುಗೆ ಸ್ಪರ್ಧೆ ನಡೆದಿಲ್ಲ. ಇದೆಲ್ಲ ನಡೆದಿದ್ದ ಧಾರವಾಡದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಕಾಲೇಜಿನ ಆವರಣದಲ್ಲಿ. ಈ ಕಾಲೇಜಿನ ಪದವಿ ವಿದ್ಯಾರ್ಥಿ-ವಿದ್ಯಾರ್ಥಿಗಳಿಗಾಗಿ ಉಪನ್ಯಾಸಕರು ಒಂದು ವಾರದವರೆಗೆ ಫನ್ ಡೇ ಆಚರಿಸಿದ್ದರು. ನಿತ್ಯವೂ ಒಂದೊಂದು ಬಗೆಯ ಬಟ್ಟೆ ಧರಿಸಿ ಬಂದಿದ್ದ ವಿದ್ಯಾರ್ಥಿಗಳಿಗೆ ಕೊನೆಯ ದಿನದಂದು ಸಾಂಪ್ರದಾಯಿ ಉಡುಗೆ ಧರಿಸಲು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶರ್ಟ್, ಲುಂಗಿ ಧರಿಸಿ ಬಂದಿದ್ದರೆ, ವಿದ್ಯಾರ್ಥಿನಿಯರು ಇಳಕಲ್ ಸೀರೆ ಉಟ್ಟುಕೊಂಡು ಬಂದು ಸಂಭ್ರಮಿಸಿದರು.

ಕಾಲೇಜಿಗೆ ಟ್ರ್ಯಾಕ್ಟರ್ ಹಾಗೂ ಚಕ್ಕಡಿಗಳಲ್ಲಿ ಬಂದಿದ್ದ ವಿದ್ಯಾರ್ಥಿಗಳು, ಸಂಭ್ರಮದ ವಾತಾವರಣ ನಿರ್ಮಾಣ ಮಾಡಿದ್ದರು. ಬಳಿಕ ಕಾಲೇಜಿನ ಆವರಣದಲ್ಲಿ ಚಕ್ಕಡಿಯಲ್ಲಿ ಸುತ್ತಾಡಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮದುವೆ ದಿಬ್ಬಣದ ವಾತಾವರಣ ನಿರ್ಮಾಣ ಮಾಡಿದರು. ವಿದ್ಯಾರ್ಥಿಗಳು ಶರ್ಟ್, ಲುಂಗಿ ಧರಿಸಿ ಬಂದಿದ್ದರೆ, ವಿದ್ಯಾರ್ಥಿನಿಯರು ಮಾತ್ರ ಸಾಂಪ್ರದಾಯಿಕ ಶೈಲಿಯಲ್ಲಿ ಶೃಂಗರಿಸಿಕೊಂಡು ಬಂದಿದ್ದರು. ಥೇಟ್ ಹಳ್ಳಿ ಮಹಿಳೆಯರಂತೆ ಕಾಣುತ್ತಿದ್ದ ವಿದ್ಯಾರ್ಥಿನಿಯರು ಆವರಣದ ತುಂಬೆಲ್ಲಾ ಓಡಾಡಿ ಸಂಭ್ರಮಿಸಿದರು. ಬಗೆ ಬಗೆಯ ಮುತ್ತುಗಳನ್ನು ಹೊಂದಿರೋ ನತ್ತು, ಕಿವಿಗೆ ದೊಡ್ಡ ದೊಡ್ಡ ಬೆಂಡೋಲೆ, ಕೈಗೆ ಬಗೆ ಬಗೆಯ ಬಳೆ, ಕೊರಳಲ್ಲಿ ಕಾಸಿನ ಸರ ಧರಿಸಿದ್ದ ವಿದ್ಯಾರ್ಥಿನಿಯರ ಸಂಭ್ರಮ ಹೇಳತೀರದು. ನಿತ್ಯವೂ ಪಾಠ-ಪ್ರವಚನ ಅಂತಾ ಕಾಲ ಕಳೆಯೋ ವಿದ್ಯಾರ್ಥಿಗಳಿಗೆ ಇಂಥ ಕಾರ್ಯಕ್ರಮ ಒಂದು ಹೊಸ ಬಗೆಯ ಅನುಭವ ನೀಡಿತ್ತು.

ಆಧುನಿಕ ದಿನಗಳಲ್ಲಿ ಸಾಂಪ್ರದಾಯಿಕ ಉಡುಗೆ ತೊಡುಗೆಗಳು ಮರೆಯಾಗುತ್ತಿವೆ. ನಮ್ಮ ಸಾಂಪ್ರದಾಯಿಕ ಉಡುಗೆಯನ್ನು ಮತ್ತು ಆಭರಣಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸಬೇಕಾಗಿದ್ದು ಅನಿವಾರ್ಯ. ಇದೇ ಕಾರಣಕ್ಕೆ ಈ ಕಾಲೇಜಿನಲ್ಲಿ ಆಯೋಜಿಸಿದ್ದ ಈ ಸಾಂಪ್ರದಾಯಿಕ ದಿನ ಎಲ್ಲ ವಿದ್ಯಾರ್ಥಿಗಳಿಗೆ ಒಂದು ಹೊಸ ಅನುಭವ ನೀಡಿದ್ದಂತೂ ಸತ್ಯ.

ಲೋಕಸಭಾ ಚುನಾವಣೆ ಫಲಿತಾಂಶ ಬಂದ ಬಳಿಕ, ತಾಲೂಕು,ಜಿಲ್ಲಾ,ಬಿಬಿಎಂಪಿ ಚುನಾವಣೆ ನಡೆಸಲಾಗುವುದು: ಸಿಎಂ

ಆರ್‌ಸಿಬಿಯನ್ನು ಅಣಕಿಸಿದ್ದಕ್ಕೆ ನಟಿಗೆ ಖಡಕ್ ರಿಪ್ಲೈ ಕೊಟ್ಟ ಫ್ಯಾನ್ಸ್..

ಮೈಸೂರಿನ ಮೈಲಾರಿ ಹೊಟೇಲ್‌ನಲ್ಲಿ ತಿಂಡಿ ತಿನ್ನುತ್ತ ಕಾಲೇಜ್ ಡೇಸ್ ಮೆಲುಕು ಹಾಕಿದ ಸಿಎಂ

- Advertisement -

Latest Posts

Don't Miss