Saturday, April 19, 2025

Latest Posts

Dharwad News: ಧಾರವಾಡದಲ್ಲಿ ಸತತ ಮಳೆಗೆ ಕೊಚ್ಚಿಹೋದ ರಾಷ್ಟ್ರೀಯ ಹೆದ್ದಾರಿ

- Advertisement -

Dharwad News: ಧಾರವಾಡ: ಧಾರವಾಡದಲ್ಲಿ ಸತತ ಮಳೆ ಸುರಿಯುತ್ತಿರುವ ಪರಿಣಾಮವಾಗಿ ರಸ್ತೆ ಕೊಚ್ಚಿ ಹೋಗಿದೆ. ರಾಷ್ಟ್ರೀಯ ಹೆದ್ದಾರಿ 4 ಮಳೆಗೆ ಕೊಚ್ಚಿಹೋಗಿದ್ದು, ಧಾರವಾಡದ ರಮ್ಯ ರೆಸಿಡೆನ್ಸಿಯ ಬಳಿ ಈ ಘಟನೆ ಸಂಭವಿಸಿದೆ.

ಹುಬ್ಬಳ್ಳಿಯಿಂದ ಧಾರವಾಡದವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಕಾಮಗಾರಿ ಕಳಪೆ ಇರುವ ಕಾರಣಕ್ಕೆ, ಅಲ್ಲಲ್ಲಿ ಈ ಅವಘಡಗಳು ಸಂಭವಿಸುತ್ತಿದೆ. ಈ ಕಾರಣಕ್ಕೆ ವಾಹನ ಸವಾರರು ಪರದಾಡಿದ್ದಾರೆ. ಕಳಪೆ ರಸ್ತೆ ಕಾಮಗಾರಿ ಮಾಡುವುದರಿಂದ, ಪ್ರತೀ ಬಾರಿ ಜೋರಾಗಿ ಮಳೆ ಬಂದಾಗ, ಈ ಕಷ್ಟವನ್ನು ಇಲ್ಲಿನ ಜನ ಅನುಭವಿಸಲೇಬೇಕಾದ ಪರಿಸ್ಥಿತಿ ಇದೆ.

ಇನ್ನೊಂದು ವಿಚಾರ ಅಂದ್ರೆ, ಈ ರಸ್ತೆಯಲ್ಲಿ ಟೋಲ್ ಇಲ್ಲದ ಕಾರಣಕ್ಕೆ ವಾಹನ ಸವಾರರು ಬೇಕಾದ ಹಾಗೆ ಪ್ರಯಾಣಿಸುತ್ತಿದ್ದಾರೆ. ಅಲ್ಲದೇ, ಈ ರಸ್ತೆಯಲ್ಲಿ ಪೊಲೀಸರು ಕೂಡ ಇಲ್ಲ. ನಂದಿ ಹೈವೆ ಅವರು ಸದ್ಯ ಟೋಲ್ ಶುಲ್ಕವನ್ನ ಸ್ಥಗಿತ ಗೊಳಿಸಿದ ಹಿನ್ನೆಲೆ ವಾಹನ ಸವಾರರು ಮನಸ್ಸಿಗೆ ಬಂದಂತೆ ತಿರುಗಾಡುತ್ತಿದ್ದಾರೆ. ಹೀಗಾಗಿ ಅಪಘಾತಗಳು ಕೂಡ ಹೆಚ್ಚು ಸಂಭವಿಸುತ್ತಿದೆ.

- Advertisement -

Latest Posts

Don't Miss