Tuesday, October 14, 2025

Latest Posts

HD Devegowda :ಶ್ರಾವಣ ಮಾಸದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿದ ದೇವೇಗೌಡ ಕುಟುಂಬ:

- Advertisement -

ಹಾಸನ: ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡರ ಕುಟುಂಬ ಶ್ರಾವಣ ಮಾಸದ ಪ್ರಯುಕ್ತ ಹಾಸನದ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷವಾದ ಪೂಜೆ ಸಲ್ಲಿಸಿದರು.

ಇನ್ನು ಈ ಪೂಜೆಯಲ್ಲಿ ದೇವೇಗೌಡರ ಕುಟುಂಬದ ಸದಸ್ಯರಾದ ಚೆನ್ನಮ್ಮ ದೇವೇಗೌಡ, ಪುತ್ರ ಮಾಜಿ ಸಚಿವ ಹೆಚ್.ಡಿ ರೇವಣ್ಣ, ಸೊಸೆ ಭವಾನಿ ರೇವಣ್ಣ, ಮೊಮ್ಮಗ ವಿಧಾನಪರಿಷತ್ ಸದಸ್ಯರಾದ ಸೂರಜ್ ರೇವಣ್ಣ ಭಾಗಿಯಾಗಿದ್ದರು. ಆದರೆ ಪ್ರಜ್ವಲ್ ರೇವಣ್ಣ ಗೈರಾಗಿದ್ದರು.

ಇನ್ನು ಪೂಜೆಗೆ ಗೈರಾಗಿರುವ ಪ್ರಜ್ವಲ್ ರೇವಣ್ಣ ಅವರು ಸಂಸದ ಸ್ಥಾನದಿಂದ ಅನರ್ಹವಾಗಿರುವ ವಿಚಾರದಲ್ಲಿ ಟೆಂಗ್ಶನ್ ಆಗಿರುವ ಕಾರಣ ಬೆಂಗಳೂರಿಗೆ ವಕೀಲರೊಂದಿಗೆ ಸಂಪರ್ಕ ಮಾಡುವುದಕ್ಕೆ ಹೋಗಿದ್ದಾರೆ ಎಂಬ ಮಾಹಿತಿ ಇದೆ.

ವಿಶೇಷವೆಂದರೆ ಪತ್ನಿ ಭವಾನಿ ರೇವಣ್ಣ ದೇವಸ್ಥಾನಕ್ಕೆ ರಂಗನಾಥ ಸ್ವಾಮಿಗೆ ಪ್ರಿಯವಾದ  ತಾವರೆ ಹೂವಿನ ಗುಚ್ಚ ಹಿಡಿದುಕೊಂಡು ಬಂದು ರೇವಣ್ಣನವರಿಗೆ ನೀಡಿದರು.  ಮಗನ ಸಂಸತ್ ಸದಸ್ಯ ಸ್ಥಾನ ಅಸಿಂಧು ಹಿನ್ನೆಲೆ ಸುಪ್ರಿಂನಲ್ಲಿ ಜಯ ಸಿಗುವಂತೆ  ಪ್ರಾರ್ಥನೆ ಸಲ್ಲಿಸಿದರು.

ISRO: ಕಿರು ನಾಟಕದ ಮೂಲಕ ಇಸ್ರೋ ವಿಜ್ಞಾನಿಗಳಿಗೆ ಶುಭ ಹಾರೈಸಿದ ಶಾಲಾ ಮಕ್ಕಳು:

Asia cup: ಕ್ರಿಕೆಟ್ ಹಾಗೂ ಸೂರ್ಯಯಾನಕ್ಕೆ ಶುಭ ಹಾರೈಸಿದ ರಜತ್

Marata reservation: ಕರ್ನಾಟಕ ಬಸ್ಸಿಗೆ ಬೆಂಕಿ; ಕ್ರೌರ್ಯಕ್ಕೆ ಕ್ರೌರ್ಯದಿಂದಲೇ ಉತ್ತರವೆಂದ ಕರವೇ..!

- Advertisement -

Latest Posts

Don't Miss