Film News:
ಸ್ಯಾಂಡಲ್ ವುಡ್ ನಲ್ಲಿ ಸರ್ಜಾ ಕುಟುಂಬ ತನ್ನ ಛಾಪನ್ನು ಮೂಡಿಸಿದೆ. ಇದೀಗ ಸರ್ಜಾ ಕುಟುಂಬ ಒಂದು ಸಿಹಿ ಸುದ್ದಿಯನ್ನು ಹಂಚಿಕೊಂಡಿದೆ. ಇದೀಗ ಮತ್ತೊಂದು ಕಂದನ ಆಗಮನದ ನಿರೀಕ್ಷೆಯಲ್ಲಿದೆ ಸರ್ಜಾ ಕುಟುಂಬ. ಮೇಘನಾ ರಾಜ್ ಮಗನ ತುಂಟಾಟಿಕೆಯ ಖುಷಿಯಲ್ಲಿದ್ದ ಸರ್ಜಾ ಕುಟುಂಬದಲ್ಲಿ ಈಗ ಧ್ರುವ ಸರ್ಜಾ ತಂದೆಯಾಗುತ್ತಿರುವ ಖುಷಿ ತುಂಬಿದೆ.
ಕನ್ನಡದಲ್ಲಿ ಖಡಕ್ ಡಯಲಾಗ್ ಬಾಡಿ ಬಿಲ್ಡಿಂಗ್ ಮೂಲಕವೇ ಹೆಸರುವಾಸಿಯಾಗಿರೋ ದ್ರುವ ಸರ್ಜಾ ಇದೀಗ ತಂದೆಯಾಗುತ್ತಿರುವ ವಿಷಯವನ್ನು ಹಂಚಿಕೊಂಡಿದ್ದಾರೆ. ಅದ್ದೂರಿಯಾಗಿ ಮದುವೆಯಾಗಿದ್ದ ದ್ರುವಸರ್ಜಾ ಈಗ ತಂದೆಯಾಗುತ್ತಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ತನ್ನ ಮಡದಿ ಪ್ರೇರಣಾ ಅವರೊಂದಿಗೆ ಅದ್ದೂರಿ ಬೇಬಿ ಬಂಪ್ ಫೋಟೋ ಹಂಚಿಕೊಂಡು ನಮ್ಮ ಜೀವನದ ಹೊಸ ಫೇಸ್ ಎಂಟರ್ ಆಗುತ್ತಿದ್ದೀವಿ ಶೀಘ್ರದಲ್ಲಿ ಬರುತ್ತಿರುವ ಪುಟ್ಟ ಕಂದಮ್ಮನನ್ನು ಆಶಿರ್ವದಿಸಿ ಜೈ ಹನುಮಾನ್ ಎಂದು ದ್ರುವ ಸರ್ಜಾ ಬರೆದುಕೊಂಡಿದ್ದಾರೆ. ಹಾಗೆಯೇ ಪ್ರೇರಣಾ ಕಲರ್ ಫುಲ್ ಗೌನ್ ನಲ್ಲಿ ಮಿಂಚಿದ್ರೆ ದ್ರುವ ಸೂಟ್ ನಲ್ಲಿಸಾಥ್ ನೀಡಿದ್ದಾರೆ.
ಪ್ರೇಮಕಾವ್ಯ ಹೊತ್ತು ಬಂದ ‘ಆಶಿಕಿ’ ಟ್ರೇಲರ್…ದಸರಾಗೆ ತೆರೆಗೆ ಬರಲಿದೆ ಸಿನಿಮಾ