Friday, April 18, 2025

Latest Posts

ಚಂದನ್ ಲಿರಿಕ್ಸು, ಮ್ಯೂಸಿಕು… ಧ್ರುವ ಸ್ಟೆಪ್ಸು… ಪೊಗರು ಟೈಟಲ್ ಟ್ರ್ಯಾಕು ಹಿಟ್ಟು….

- Advertisement -

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಪೊಗರು ಸಿನಿಮಾದ ಟೈಟಲ್ ಟ್ರ್ಯಾಕ್ ನಿನ್ನೆ ಪ್ರೇಮಿಗಳ ದಿನದಂದು ರಿಲೀಸ್ ಆಗಿದ್ದು, ಯೂಟ್ಯೂಬ್ ನಲ್ಲಿ ಸಂಚಲನ ಸೃಷ್ಟಿಸ್ತಿದೆ. ಪೊಗರು ತುಂಬಿದ‌ ಪೊಗರ್ ದಸ್ತ್ ಹುಡ್ಗನ ಜಬರ್ದಸ್ ಎಂಟ್ರಿ ಫ್ಯಾನ್ಸ್ ಸಿಳ್ಳೆ, ಚಪ್ಪಾಳಿ ಹಾಕ್ತಿದ್ದಾರೆ.

ಉದ್ದನೆಯ ಕೂದಲು ಬಿಟ್ಟು, ಕೆದರಿದ ಗಡ್ಡ ಸವರತ್ತು, ಕದಂಬಬಾಹು ಪ್ರದರ್ಶಿಸುತ್ತಾ ನಟೋರಿಯಸ್ ಅವತಾರದಲ್ಲಿ ಆ್ಯಕ್ಷನ್ ಪ್ರಿನ್ಸ್ ಕುಣಿದು ಕುಪ್ಪಳಿಸಿದ್ದಾರೆ. ಅಣ್ಣನಿಗೆ ಪೊಗರು‌ ಪೊಗರು ಅಂತಾ ಭರ್ಜರಿ ಸ್ಟೆಪ್ಸ್ ಹಾಕಿ ಅಭಿಮಾನಿಗಳನ್ನು ರಂಜಿದ್ದಾರೆ.

ಖರಾಬು ಸಾಂಗ್ ಮೂಲಕ ಕ್ರೇಜ್ ಸೃಷ್ಟಿಸಿದ್ದ ಚಂದನ್ ಶೆಟ್ಟಿ ಪೊಗರು ಟೈಟಲ್ ಟ್ರ್ಯಾಕ್ ಗೂ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಅಲ್ಲದೇ ಲಿರಿಕ್ಸ್ ಬರೆದು ಅವರೇ ಹಾಡು ಹಾಡಿದ್ದಾರೆ.

ಚಂದನ್ ಮ್ಯೂಸಿಕ್ ಲಿರಿಕ್ಸ್, ಧ್ರುವ ಸ್ಟೆಪ್ಸ್.. ಪೊಗರು ಟೈಟಲ್ ಟ್ರ್ಯಾಕು ಸೂಪರ್ ಅಂತಿದ್ದಾರೆ ಫ್ಯಾನ್ಸ್..

ವಿಶೇಷ ಅಂದ್ರೆ ಈ ಹಾಡಿನಲ್ಲಿ ನಿರ್ದೇಶಕ ನಂದಕಿಶೋರ್ ಹಾಗೂ ಕೊರಿಯೋಗ್ರಾಫರ್ ಮುರುಳಿ ಧ್ರುವ ಸರ್ಜಾ ಜೊತೆ ಹೆಜ್ಜೆ ಹಾಕಿದ್ದಾರೆ.

ಈಗಾಗ್ಲೇ ಖರಾಬು ಹಾಡು ರೆಕಾರ್ಡ್ ಕ್ರಿಯೇಟ್ ಮಾಡಿದ್ದು, ಇದೀಗ ಪೊಗರು ಟೈಟಲ್ ಟ್ರ್ಯಾಕು ಕೂಡ ಅದೇ ಹಾದಿಯಲ್ಲಿ ಸಾಗ್ತಿದೆ. ಸದ್ಯ ಟೈಟಲ್ ಟ್ರ್ಯಾಕ್ ಜೊತೆ ತಾಯಿ ಸೆಂಟಿಮೆಂಟ್ ಹಾಡು‌ ಕೂಡ ರಿಲೀಸ್ ಮಾಡಲಾಗಿದೆ.

ಇನ್ನು, ಇದೇ ಶುಕ್ರವಾರ ಸಿನಿಮಾ ಕನ್ನಡ,‌ತಮಿಳು ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಆಗಿದ್ದು, ಬಿಕೆ ಗಂಗಾಧರ್ ಬಂಡವಾಳ ಹೂಡಿದ್ದಾರೆ.

ನಿನ್ನೆಯಷ್ಟೇ ದಾವಣಗೆರೆಯಲ್ಲಿ ಅದ್ಧೂರಿಯಾಗಿ ಪೊಗರು ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಹೊನ್ನಾಳಿ ಶಾಸಕ ರೇಣುಕಾಚಾರ್ಯ, ಅರ್ಜುನ್ ಸರ್ಜಾ, ನಿರ್ದೇಶಕ ಚೇತನ್ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ರು.

- Advertisement -

Latest Posts

Don't Miss