Thursday, November 13, 2025

Latest Posts

ಬನಿಯನ್ ಹಾಕೋರು ಬಡವರಾ? ಧ್ರುವಂತ್‌ಗೆ ‘ಗಿಲ್ಲಿ’ಯ ಟಕ್ಕರ್

- Advertisement -

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ(Gilli Nata) ಬನಿಯನ್ ಮತ್ತೆ ಸೌಂಡ್ ಮಾಡಿದೆ, ಗಿಲ್ಲಿ ನಟ ಬನಿಯನ್ ಹಾಕೊಂಡು ತಾವು ಬಡವ ಅಂತ ನಟಿಸುತ್ತಿದ್ದಾರೆ, ಅವ್ರತ್ರ ಎಂಜಿ ಹೆಕ್ಟರ್ ಕಾರು ಇದೆ, 100 ಕುರಿ ಇದಾವೆ, ಸುಮ್ನೆ ಬಡವ ಅನ್ನೋ ಸಿಂಪತಿ ಕಾರ್ಡ್ ಯೂಸ್ ಮಾಡ್ಕೋತಿದಾನೇ ಅಂತ ಧ್ರುವಂತ್ ವಿವಾದ ಹುಟ್ಟಾಕಿದ್ರು, ಬಿಗ್ ಬಾಸ್​ನಲ್ಲಿ ಗಿಲ್ಲಿ ಬಡವ ಎಂದು ತೋರಿಸಿಕೊಳ್ಳುತ್ತಿದ್ದಾರೆ ಅನ್ನೋದು ಧ್ರುವಂತ್(Druvanth) ಆರೋಪ. ‘ನಾನು ಬೇರೆಯವರನ್ನು ಟೀಕೆ ಮಾಡಿ ಫೂಟೆಜ್ ತೆಗೆದುಕೊಳ್ಳುತ್ತಿಲ್ಲ. ಗಿಲ್ಲಿ ಬಡವನಂತೆ ತೋರಿಸಿಕೊಳ್ಳುತ್ತಿದ್ದಾನೆ. ಬನಿಯನ್ ಹಾಕಿ ಓಡಾಡುತ್ತಿದ್ದಾನೆ. ಚಂದ್ರಣ್ಣನಿಂದ ನನಗೆ ಒಂದು ವಿಚಾರ ಗೊತ್ತಾಗಿದೆ. ಗಿಲ್ಲಿ ನಟನ ಬಳಿ ಇರೋದು ಎಂಜಿ ಹೆಕ್ಟರ್ ಕಾರು. 100 ಕುರಿ ಕೂಡ ಇದೆ. ಆಗ ಗಿಲ್ಲಿ ನಟನ ರಿಯಲ್ ಫೇಸ್ ಗೊತ್ತಾಯ್ತು’ ಎಂದರು ಧ್ರುವಂತ್…

ಇದಕ್ಕೆ ಉತ್ತರಿಸಿದ ಗಿಲ್ಲಿ ನಟ, ‘ನಾನು ಬಡವ(Poor) ಅಂತ ನಿನಗೆ ಯಾವತ್ತಾದ್ರೂ ಹೇಳಿದ್ದೀನಾ? ಬಡವ ಮಾತ್ರ ಬನಿಯನ್ ಹಾಕಿಕೊಳ್ತಾನಾ? ಎಂಜಿ ಹೆಕ್ಟರ್​ ಇರೋದು ಹೌದು. ಅದು ಸೆಕೆಂಡ್ ಹ್ಯಾಂಡ್, 100 ಕುರಿ ತಂದು ಫಾರ್ಮ್ ಮಾಡಬೇಕು ಎಂದುಕೊಂಡಿದ್ದು ಹೌದು. ಆದರೆ, ಇನ್ನೂ ಕುರಿ ತಂದಿಲ್ಲ’ ಅಂತ ಇರೋದನ್ನ ಇದ್ದಂಗೆ ಫನ್ನಿಯಾಗಿ ಗಿಲ್ಲಿ ಉತ್ತರ ಕೊಟ್ರು.. ಒಬ್ಬ ವ್ಯಕ್ತಿ ಬಡವನೋ ಶ್ರೀಮಂತನೋ ಅನ್ನೋದನ್ನ ಬಟ್ಟೆಯಿಂದ ಅಳೆಯೋದು ಸಾಮಾನ್ಯವಾಗಿ ಎಲ್ಲರ ಮನಸ್ಥಿತಿ, ಅಂತಹವರಿಗೆ ಗಿಲ್ಲಿ ಹೇಳಿದ ಮಾತುಗಳು ಆಳವಾಗಿ ಯೋಚನೆ ಮಾಡುವಂತೆ ಮಾಡಿರುತ್ತೆ…..

ಇನ್ನು, ಧ್ರುವಂತ್ ಜೊತೆ ಯಾರೆಲ್ಲಾ ಸೇರ್ತಾರೋ ಅವರು ದೊಡ್ಮನೆಯಿಂದ ಹೊರಗೆ ಹೋಗ್ತಾರೆ ಎಂದು ಗಿಲ್ಲಿ ಆರೋಪಿಸಿದ್ದಾರೆ. ‘ಮಲ್ಲಮ್ಮ(Mallamma) ಜೊತೆ ಸೇರಿ ಅವರು ಹೋಗಬೇಕು ಎಂದು ಇಷ್ಟ ಪಟ್ಟಿರಿ ಅವರು ಮನೆ ಇಂದ ಎಲಿಮಿನೇಟ್ ಆಗಿ ಹೋದರು. ಆ ಬಳಿಕ ಚಂದ್ರಪ್ರಭನ ಇಷ್ಟ ಪಟ್ಟಿರಿ ಅವರೂ ಹೋದರು. ಮುಂದಿನ ವಾರ ಯಾರು ಹೋಗ್ತಾರೆ ನೋಡಬೇಕಿದೆ ಹುಷಾರಾಗಿರಿ ಅಂತ ಟಾಂಗ್ ಕೊಟ್ರು, ವಿಚಿತ್ರ ಏನಂದ್ರೆ ಗಿಲ್ಲಿ ಹೇಳಿದಂತೆ ನಡೆದಿರೋದು ಹೌದು. ಧ್ರುವಂತ್ ಅವರು ಮಲ್ಲಮ್ಮ, ಮಲ್ಲಮ್ಮ ಅಂತ ಸಾಕಷ್ಟು ಸುತ್ತಾಡುತ್ತಿದ್ದರು. ಅವರು ಎಲಿಮಿನೇಟ್ ಆದ ಬಳಿಕ ಚಂದ್ರಪ್ರಭ ಜೊತೆ ಅವರ ಗೆಳೆತನ ಬೆಳೆದಿತ್ತು. ಅವರು ಈ ವಾರ ಹೊರಗೆ ಬಂದ್ರು, ಇದನ್ನೆಲ್ಲಾ ನೋಡ್ತಿದ್ರೆ ಗಿಲ್ಲಿ ಹೇಳಿದ್ದು ನಿಜಾ ಅನಿಸುತ್ತಿದೆ ಅಲ್ವಾ ?

ವರದಿ : ಗಾಯತ್ರಿ ಗುಬ್ಬಿ

- Advertisement -

Latest Posts

Don't Miss