Sunday, December 22, 2024

Latest Posts

ಪೊಗರು ಪೋರನ ‘ದುಬಾರಿ’ ಶೂಟಿಂಗ್ ಗೆ ಡೇಟ್ ಫಿಕ್ಸ್…! ಈ ದಿನವೇ ‘ದುಬಾರಿ’ ಅಡ್ಡಕ್ಕೆ ಧ್ರುವ ಎಂಟ್ರಿ…!

- Advertisement -

ಅದ್ಧೂರಿ ಹುಡ್ಗ ಭರ್ಜರಿಯಾಗಿ ಮೂರು ವರ್ಷದ ಬಳಿಕ ತೆರೆಮೇಲೆ ಪೊಗರಿಸಂ ತೋರಿಸ್ತಿದ್ದಾರೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಗತ್ತು, ಪೊಗರಿಗೆ ಪ್ರೇಕ್ಷಕ‌ ಊಘೇ ಉಘೇ ಎನ್ನುತ್ತಿದ್ದಾರೆ. ಬಾಕ್ಸ್ ಆಫೀಸ್ ಲೂಟಿ ಮಾಡ್ತಿರುವ ಪೊಗರು ಸಿನಿಮಾ ಸಕ್ಸಸ್ ಗೆ ಕಾರಣರಾದ ಧ್ರುವ ಅಭಿಮಾನಿ ಬಳಗಕ್ಕೆ ವಂದಿಸುತ್ತಾ, ದುಬಾರಿ ಅಖಾಡಕ್ಕೆ ಜಿಗಿಯೋದಿಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

ಈ ಗ್ಯಾಪ್ ನಲ್ಲಿಯೇ ಆ್ಯಕ್ಷನ್ ಪ್ರಿನ್ಸ್ ಧ್ರುವ ಪತ್ನಿ ಜೊತೆ ಗೋವಾ ಟ್ರಿಪ್ ಮುಗಿಸಿ ಮನೆ ಮಂದಿ ಜೊತೆ ಸ್ವಲ್ಪ ಟೈಮ್ ಸ್ಪೆಂಡ್ ಮಾಡಿ ದುಬಾರಿ ಸಿನಿಮಾ ಅಖಾಡಕ್ಕೆ ಎಂಟ್ರಿ ಕೊಡ್ತಿದ್ದಾರೆ. ಏಪ್ರಿಲ್ ನಲ್ಲಿ ದುಬಾರಿ ಶೂಟಿಂಗ್ ನಡೆಯಲಿದ್ದು, ಅದಕ್ಕೆ ಬೇಕಾದ ಸಕಲ ಸಿದ್ಧತೆ ಮಾಡಿಕೊಳ್ತಿದ್ದಾರೆ ನಿರ್ದೇಶಕ ನಂದಕಿಶೋರ್.

ಸ್ಕ್ರೀಪ್ಟ್ ವರ್ಕ್ ಮುಗಿಸಿದ್ದಂತೆ ಏಪ್ರಿಲ್ ಗೆ ಶೂಟಿಂಗ್ ಮಾಡೋದಿಕ್ಕೆ ಚಿತ್ರತಂಡ ಯೋಜನೆ ಹಾಕಿಕೊಂಡಿದ್ದ ದುಬಾರಿ ಹುಡ್ಗನ ಮನದರಸಿಯಾಗಿ ಭರಾಟೆ ಬೆಡಗಿ ಶ್ರೀಲೀಲಾ ನಟಿಸ್ತಿದ್ದು, ಉದಯ್ ಮೆಹ್ತಾ ಬಂಡವಾಳ ಹೂಡಿದ್ದಾರೆ.

- Advertisement -

Latest Posts

Don't Miss