Saturday, April 19, 2025

Latest Posts

ದಿಯಾ ಹೀರೋ ಪೃಥ್ವಿ ಅಂಬರ್ ಈಗ ಸಿಂಗರ್….!

- Advertisement -

ದಿಯಾ.. ಕನ್ನಡ ಸಿನಿಮಾ ಇಂಡಸ್ಟ್ರೀಯ ಪ್ರೇಕ್ಷಕರ ಮನಸ್ಸನ್ನು ಹಚ್ಚೊತ್ತಿದ ಸಿನಿಮಾ. ತ್ರಿಕೋನ ಪ್ರೇಮಕಥಾಹಂದರ ಹೊಂದಿದ್ದ ಈ ಸಿನಿಮಾದ ಪ್ರತಿಯೊಂದು ಪಾತ್ರವೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದ್ರಲ್ಲೂ ಆದಿ‌ ಪಾತ್ರ ಸಖತ್ ಹೈಲೈಟ್ ಆಗಿತ್ತು. ಆದಿ ಪಾತ್ರದ ಮೂಲಕ ಇಡೀ‌ ಕರುನಾಡಿನ ಮನೆ‌ ಮನಸು ಗೆದ್ದಿದ್ದ ಪೃಥ್ವಿ ಅಂಬರ್ ಈಗ ಬ್ಯೂಸಿಯೆಸ್ಟ್ ಹೀರೋ.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಹಾಕಿರೋ ಪೃಥ್ವಿ ಕೈಯಲ್ಲಿ ನಾಲ್ಕೈದು‌ ಸಿನಿಮಾಗಳಿವೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸ್ತಿರೋ ಶಿವಪ್ಪ ಸಿನಿಮಾದ ಜೊತೆಗೆ ಫಾರ್ Regn, ಲೈಫ್ ಈಸ್ ಬ್ಯೂಟಿಫುಲ್ ಸಿನಿಮಾಗಳಿಗೂ ಬಣ್ಣ ಹಚ್ಚಿರೋ ಕರಾವಳಿ ಹುಡ್ಗ ಪೃಥ್ವಿ, ಈಗ ಸಿಂಗರ್ ಕೂಡ ಆಗಿದ್ದಾರೆ.

ಪೃಥ್ವಿ ನಟಿಸ್ತಿರೋ ಅವರದ್ದೇ ಸಿನಿಮಾ ಲೈಫ್ ಈಸ್ ಬ್ಯೂಟಿಫುಲ್ ಚಿತ್ರಕ್ಕೆ ಹಾಡು ಹಾಡಿದ್ದಾರೆ. ಈ‌ ಮೂಲಕ ಸಿಂಗರ್ ಆಗಿ‌ ಹೊರಹೊಮ್ಮಿದ್ದಾರೆ. ನೊಬಿನ್ ಪೌಲ್ ಸಂಗೀತ ಸಂಯೋಜಿಸಿರುವ ಹಾಡಿಗೆ ಸ್ವತಃ ಸಾಹಿತ್ಯ ಬರೆದು ಹಾಡು ಹಾಡಿದ್ದಾರೆ ಪೃಥ್ವಿ. ಒಟ್ನಲ್ಲಿ ಪೃಥ್ವಿ ದಿಯಾ ಸಿನಿಮಾದ‌ ನಂತ್ರ ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಫುಲ್ ಶೈನ್ ಆಗ್ತಿರುದು ಖುಷಿ ವಿಚಾರ. ಹೀಗೆ ಸಾಗಲಿ ಅವರ ಬಣ್ಣದ ಬದುಕಿನ ಜರ್ನಿ.

-ಮೇಘ.ಎಸ್

- Advertisement -

Latest Posts

Don't Miss