Health Tips: ನಮ್ಮ ದೇಹದಲ್ಲಿರುವ ಸೈಲೆಂಟ್ ಕಿಲ್ಲರ್ ರೋಗ ಅಂದ್ರೆ ಅದು ಮುದಮೇಹ ಇಲ್ಲ ಸಕ್ಕರೆ ಖಾಯಿಲೆ ರೋಗ. ಈಗ ಮಳೆಗಾಲ ಬೇರೆ ಆದ್ರೆ ಮಳೆಗಾಲದಲ್ಲಿ ಸಾಮಾನ್ಯವಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಯಾಗುವುದು ಕಾಮನ್ ಆದ್ರೆ ಈಗ ಚಿಂತೆ ಬೇಡ, ಮದುಮೇಹಿಗಳು ಮಳೆಗಾಲದಲ್ಲಿ ಸೇವಿಸಬೇಕಾದ ಟೀ ಗಳ ಬಗ್ಗೆ ನಾವು ಇವತ್ತು ನಿಮಗೆ ತಿಳಿಸ್ತೇವೆ.
ಮಳೆಗಾಲದಲ್ಲಿಸಾಮಾನ್ಯವಾಗಿ ಆರೋಗ್ಯವನ್ನು ಅಂಗೈನಲ್ಲಿ ಇಟ್ಟು ಕಾಪಾಡಿಕೊಳ್ಳಬೇಕಾಗುತ್ತದೆ. ಇನ್ನೂ ಧಾರಾಕಾರ ಮಳೆ ಇದ್ದರೆ ಅನೇಕರು ಮನೆಯಲ್ಲಿಯೇ ಉಳಿದು ಬಿಡುತ್ತಾರೆ. ಮನೆಯಲ್ಲೇ ಇದ್ದಾಗ ಅದು ಇದು ತಿನ್ನಬೇಕು ಅನ್ನೋದು ಬಯಕೆಯಾಗುತ್ತೆ. ಇನ್ನು ಮದುಮೇಹಿಗಳಿಗಂತೂ ರೂಲ್ಸ್ ಬ್ರೇಕ್ ಮಾಡೋಕೆ ಕಾಯ್ತಾ ಇರ್ತಾರೆ. ಹಾಗೆನೇ ಚಹಾ ಕುಡಿಯೋ ಬಯಕೆನೂ ಹೇರಳವಾಗಿರುತ್ತೆ. ಆದ್ರೆ ಶುಗರ್ ಅನ್ನೋದು ಅಡ್ಡಗಾಲಾಗಿರುತ್ತೆ. ಆದ್ರೆ ಆ ಚಿಂತೆ ಬೇಡ ಈಗ ನಾವು ಹೇಳುವ ಟೀ ನ ಧಾರಾಳ ಕುಡಿಯಿರಿ…….
1.ಗ್ರೀನ್ ಟೀ: ಮಧುಮೇಹ ಇರುವವರು ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಗ್ರೀನ್ ಟೀ ಸೇವಿಸಬೇಕು ಎಂದು ಆರೋಗ್ಯ ತಜ್ಞರು ಶಿಫಾರಸ್ಸು ಮಾಡುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಕೂಡ, ಈ ಪಾನೀಯಕ್ಕೆ ಸಕ್ಕರೆ, ಹಾಲು ಅಥವಾ ಯಾವುದೇ ಬಗೆಯ ಕ್ರೀಂ ಅನ್ನು ಸೇರಿಸದೆ ಸೇವಿಸಬೇಕು.
2.ದಾಸವಾಳ ಚಹಾ: ಆಂಟಿ ಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿರುವ ದಾಸವಾಳ ಚಹಾ, ಕುಡಿಯುವ ಅಭ್ಯಾಸ ಮಾಡಿಕೊಳ್ಳುವು ದರಿಂದ, ಅಧಿಕ ರಕ್ತದೊತ್ತಡದ ಸಮಸ್ಯೆ, ಕೆಟ್ಟ ಕೊಲೆಸ್ಟ್ರಾಲ್ ಅಂಶಗಳನ್ನು ಕಡಿಮೆ ಮಾಡುವುದು. ಅಲ್ಲದೆ ಮಧುಮೇಹ ಕಾಯಿಲೆಯಿಂದ ಬಳಲು ತ್ತಿರುವ ಜನರ ಆರೋಗ್ಯವನ್ನು ರಕ್ಷಣೆ ಮಾಡುತ್ತದೆ.
3.ದಾಸವಾಳ ಚಹಾ ತಯಾರು ಮಾಡುವ ವಿಧಾನ: ಮೊದಲಿಗೆ ಒಂದು ಲೋಟ ಕುದಿಯುವ ನೀರಿನಲ್ಲಿ ದಾಸ ವಾಳ ಹೂವಿನ ದಳಗಳನ್ನು ಹಾಕಿ ಸುಮಾರು 5 ರಿಂದ 10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ, ಆಬಳಿಕ ಇನ್ನೊಂದು ಪಾತ್ರೆಗೆ ಸೋಸಿಕೊಂಡು, ದಿನಕ್ಕೆ ಒಂದು ಕಪ್ ಕುಡಿಯ ಬೇಕು.
4.ಬ್ಲಾಕ್ ಟೀ :ಕಪ್ಪು ಚಹಾ ಅಥವಾ ಬ್ಲ್ಯಾಕ್ ಟೀಯಲ್ಲಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಹಾಗೂ ಪ್ರಬಲ ಆಕ್ಸಿ ಡೆಂಟುಗಳು ಕಂಡು ಬರುತ್ತವೆ. ಸಕ್ಕರೆಕಾಯಿಲೆಯಿಂದ ಬಳಲುತ್ತಿರುವವರು, ಪ್ರತಿದಿನ ಒಂದು ಕಪ್ ಬ್ಲ್ಯಾಕ್ ಟೀ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ರಕ್ತದಲ್ಲಿನ ಗ್ಲುಕೋಸ್ ಮಟ್ಟಗಳನ್ನು ನಿಯಂತ್ರಿಸಲು ನೆರವಾ ಗುತ್ತವೆ.
5.ದಾಲ್ಚಿನ್ನಿ ಟೀ: ಈಗಾಗಲೇ ಸಕ್ಕರೆಕಾಯಿಲೆಯಿಂದ ಬಳಲುತ್ತಿರುವವರು ದಿನಾ ಒಂದು ಕಪ್, ದಾಲ್ಚಿನ್ನಿ ಚಹಾವನನ್ನು ಸೇವನೆ ಮಾಡುವುದರಿಂದ, ದೇಹದಲ್ಲಿ ಕೆಟ್ಟ ಕೊಲೆ ಸ್ಟಾಲ್ ಮಟ್ಟ ಹಾಗೂ ರಕ್ತದಲ್ಲಿ ಗ್ಲುಕೋಸ್ ಮಟ್ಟ ಗಳನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ. ಅಷ್ಟೇ ಅಲ್ಲದೆ ಮಧುಮೇಹದ ಕಾಯಿಲೆಯಿಂದಾಗಿ ಮುಂದಿನ ದಿನಗಳಲ್ಲಿ ಎದುರಾಗಬಹುದಾಗಿದ್ದ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ದೂರವಾಗುತ್ತವೆ.
5.ಲೆಮನ್ ಟೀ : ನಿಂಬೆ ಹಣ್ಣಿನ ರಸವನ್ನು ಹಿಂಡಿ ಮಾಡುವ ಈ ಲೆಮನ್ ಟೀಯಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿ ಕಂಡು ಬರುತ್ತದೆ. ಇದು ಪ್ರಬಲ ಆಂಟಿ ಆಕ್ಸಿಡೆಂಟ್ ಆಗಿದ್ದು, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ. ಮಧುಮೇಹ ಕಾಯಿಲೆಯಿಂದ ಬಳಲುತ್ತಿರು ವವರು, ಪ್ರತಿ ದಿನ ಒಂದು ಕಪ್ ಲೆಮನ್ ಟೀ ಸೇವನೆ ಮಾಡಿದರೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿ ಸುವಲ್ಲಿ ಪರಿಣಾಮವಾಗಿ, ಕಾರ್ಯ ನಿರ್ವಹಿಸಲಾಗುತ್ತದೆ.
ಹಾಗೆಯೇ ಅತಿಯಾದರೆ ಅಮೃತವೂ ವಿಷ ಅನ್ನೋದನ್ನು ಮರೆಯಬಾರದು. ಅತಿಯಾಗಿ ಯಾವ ಸೇವನೆಯೂ ಒಳ್ಳೆಯದಲ್ಲ ಈ ಚಹಾ ಪದ್ಧತಿಯೂ ಮಿತವಾಗಿದ್ದಲ್ಲಿ ಉತ್ತಮ ಆರೋಗ್ಯ ನಿಮ್ಮದಾಗಬಹುದು.
Health Tips : ಮಳೆಗಾಲದಲ್ಲಿ ಸಾಮಾನ್ಯ ಚರ್ಮದ ಸಮಸ್ಯೆಗಳು ಯಾವುವು..?! ಅದಕ್ಕೆ ಇಲ್ಲಿವೆ ಪರಿಹಾರಕ್ರಮ..!
ಹಲಸಿನ ಹಣ್ಣಿನ ಬೀಜದ ಸೇವನೆಯ ಲಾಭವನ್ನು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ..