ಡೊನಾಲ್ಡ್ ಟ್ರಂಪ್ ತಮ್ಮ ತಂದೆಯ ಆಲ್ಝೈಮರ್ ಕಾಯಿಲೆ ಕುರಿತು ಮಾತನಾಡುವ ವೇಳೆ ಅದೇ ರೋಗದ ಹೆಸರನ್ನು ಮರೆತ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ನ್ಯೂಯಾರ್ಕ್ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ತಮ್ಮ ತಂದೆ ಫ್ರೆಡ್ ಟ್ರಂಪ್ ಅವರಿಗೆ ಇದ್ದ ಕಾಯಿಲೆ ಬಗ್ಗೆ ಮಾತನಾಡುತ್ತಿದ್ದರು.
ಈ ವೇಳೆ ನನಗೆ ಆ ಕಾಯಿಲೆ ಇಲ್ಲ ಎಂದು ಆತ್ಮವಿಶ್ವಾಸದಿಂದ ಹೇಳಿಕೊಂಡರೂ, ಕೊನೆವರೆಗೂ ಆ ಕಾಯಿಲೆಯ ಹೆಸರನ್ನು ಉಚ್ಚರಿಸಲು ಅವರಿಗೆ ಸಾಧ್ಯವಾಗಲಿಲ್ಲ. ನ್ಯೂಯಾರ್ಕ್ನ ಮ್ಯಾಗಜೀನ್‌ಗೆ ನೀಡಿದ್ದ ಸಂದರ್ಶನವೊಂದರಲ್ಲಿ ಟ್ರಂಪ್ ತಮ್ಮ ತಂದೆಗೆ ಇದ್ದ ರೋಗ ಆಲ್ಝೈಮರ್ ಬಗ್ಗೆ ಚರ್ಚಿಸುತ್ತಿದ್ದರು. ಆ ವೇಳೆ ತನಗೆ ಆ ಕಾಯಿಲೆ ಇಲ್ಲ ಎಂದು ಹೇಳಿಕೊಂಡರು.
ಆದರೆ ಕೊನೆವರೆಗೂ ಅದ್ಯಾವ ಕಾಯಿಲೆ ಎಂದು ಹೇಳಲು ಅವರಿಗೆ ಸಾಧ್ಯವಾಗಲಿಲ್ಲ. ಅದಕ್ಕೂ ಸ್ವಲ್ಪ ಮುನ್ನ ಟ್ರಂಪ್ ದಾವೋಸ್‌ನಲ್ಲಿ ಮಾಡಿದ ಭಾಷಣದ ಸಮಯದಲ್ಲಿ ಗ್ರೀನ್‌ಲ್ಯಾಂಡ್ ಅನ್ನು ಐಲ್ಯಾಂಡ್ನೊಂದಿಗೆ ಸೇರಿಸಿದ್ದ ಘಟನೆಯೂ ನಡೆದಿತ್ತು. ನನಗಂತೂ ಆ ಕಾಯಿಲೆ ಇಲ್ಲ ಎನ್ನುತ್ತಾ ‘ಆಲ್ಝೈಮರ್’ ಹೆಸರನ್ನೇ ಡೊನಾಲ್ಡ್ ಟ್ರಂಪ್ ಮರೆತ ಘಟನೆ ನಡೆದಿದೆ.
ನ್ಯೂಯಾರ್ಕ್ನ ಮ್ಯಾಗಜೀನ್‌ಗೆ ನೀಡಿದ್ದ ಸಂದರ್ಶನವೊಂದರಲ್ಲಿ ಟ್ರಂಪ್ ತಮ್ಮ ತಂದೆಗೆ ಇದ್ದ ರೋಗ ಆಲ್ಝೈಮರ್ ಬಗ್ಗೆ ಚರ್ಚಿಸುತ್ತಿದ್ದರು. ಆ ವೇಳೆ ತನಗೆ ಆ ಕಾಯಿಲೆ ಇಲ್ಲ ಎಂದು ಹೇಳಿಕೊಂಡರು. ಆದರೆ ಕೊನೆವರೆಗೂ ಅದ್ಯಾವ ಕಾಯಿಲೆ ಎಂದು ಹೇಳಲು ಅವರಿಗೆ ಸಾಧ್ಯವಾಗಲಿಲ್ಲ. ಅದಕ್ಕೂ ಸ್ವಲ್ಪ ಮುನ್ನ ಟ್ರಂಪ್ ದಾವೋಸ್‌ನಲ್ಲಿ ಮಾಡಿದ ಭಾಷಣದ ಸಮಯದಲ್ಲಿ ಗ್ರೀನ್‌ಲ್ಯಾಂಡ್ ಅನ್ನು ಐಲ್ಯಾಂಡ್ನೊಂದಿಗೆ ಸೇರಿಸಿದ್ದ ಘಟನೆಯೂ ನಡೆದಿತ್ತು.
ಸುಮಾರು 86, 87 ವರ್ಷ ವಯಸ್ಸಿನಲ್ಲಿ ಅವರಿಗೊಂದು ಸಮಸ್ಯೆ ಕಾಣಿಸಿಕೊಂಡಿತ್ತು, ಅದಕ್ಕೇನೆಂದು ಕರೀತಾರೆ ಎಂದು ಟ್ರಂಪ್ ತಲೆ ಕೆಡಿಸಿಕೊಂಡು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಕಡೆಗೆ ನೋಡುತ್ತಾ ಕೇಳಿದ್ದಾರೆ ಅದಕ್ಕೆ ಲೀವಿಟ್ ಆಲ್ಝೈಮರ್ ಎಂದು ಉತ್ತರಿಸಿದರು.ಅದು ನನಗೆ ಇಲ್ಲ ಎಂದು ಟ್ರಂಪ್ ಉತ್ತರಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ




