Thursday, November 27, 2025

Latest Posts

ದರ್ಶನ್ ಪತ್ನಿಗೆ ಪವಿತ್ರಾ ಟಾಂಗ್ ಕೊಟ್ರಾ? ವಿಜಯಲಕ್ಷ್ಮಿ–ಪವಿತ್ರಾ ಸ್ಟೋರಿ ವಾರ್!

- Advertisement -

ಸ್ಯಾಂಡಲ್‌ವುಡ್ ನಟಿ ರಮ್ಯಾ ಹಾಗೂ ದರ್ಶನ್ ಫ್ಯಾನ್ಸ್ ವಾರ್ ಇನ್ನೂ ತಣ್ಣಗಾಗಿಲ್ಲ. ದರ್ಶನ್ ಅಭಿಮಾನಿಗಳ ವಿರುದ್ಧ ರಮ್ಯಾ ದೂರು ಕೊಟ್ಟ ಮೇಲೆ ತನಿಖೆಯೂ ನಡೆಯುತ್ತಿದೆ. ತಮ್ಮ ಅಭಿಮಾನಿಗಳಿಗೆ ದರ್ಶನ್ ತಿಳಿ ಹೇಳಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ ಅನ್ನೋದು ರಮ್ಯಾ ಅವರ ವಾದ. ಇಷ್ಟೇಲ್ಲಾ ಆದರೂ ನಟ ದರ್ಶನ್ ಮಾತ್ರ ಪ್ರತಿಕ್ರಿಯೆ ಕೊಡುತ್ತಿಲ್ಲ. ಮೌನಕ್ಕೆ ಶರಣಾಗಿದ್ದಾರೆ.

ನಟಿ ರಮ್ಯಾ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಆಕ್ಷೇಪಾರ್ಹ ಸಂದೇಶಗಳನ್ನು ಶೇರ್ ಮಾಡಿ, ಇವು ದರ್ಶನ್ ಅಭಿಮಾನಿಗಳಿಂದ ಬಂದಿದೆ’ ಎಂದು ಆರೋಪಿಸಿದ್ದರು. ಈ ಮೆಸೇಜ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಕೂಡ ಅವರು ಬಹಿರಂಗಗೊಳಿಸಿದ್ದರು. ಈ ಸಂದೇಶಗಳು ನಿಜಕ್ಕೂ ದರ್ಶನ್ ಫ್ಯಾನ್ಸ್ ಕಡೆಯಿಂದ ಬಂದದ್ದಾ? ಅದಕ್ಕೆ ಏನು ಆಧಾರ? ಅಂತ ದರ್ಶನ್ ಬೆಂಬಲಿಗರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಈ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ದೂರು ನೀಡಲು ಮುಂದಾಗಿದ್ದಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಆದರೆ ಅದು ನಿಜವಾಗಲಿಲ್ಲ.

ಇಷ್ಟೆಲ್ಲಾ ಆದ್ರೂ ಕೂಡ ದರ್ಶನ್ ಮಾತ್ರ ಮೌನಕ್ಕೆ ಜಾರಿದ್ದಾರೆ. ಪತ್ನಿ ಜೊತೆ ಅಸ್ಸಾಂನಲ್ಲಿರುವ ಕಾಮಕ್ಯಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಸಿಕ್ಕ ಅಭಿಮಾನಿಗಳ ಜೊತೆ ಕ್ಲಿಕ್ಕಿಸಿಕೊಂಡಿದ್ದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಎಲ್ಲಾ ಬೆಳವಣಿಗೆ ಮಧ್ಯೆ ವಿಜಯಲಕ್ಷ್ಮಿ ದರ್ಶನ್ ಅವರು ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಕಾಮಕ್ಯಾ ದೇವಿ ಆಲಯದಲ್ಲಿ ಪತಿ ಜೊತೆ ತೆಗೆದುಕೊಂಡ ಫೋಟೋವನ್ನು ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಇದರ ಜೊತೆಗೆ ಎಷ್ಟೇ ಜನ ನಿಮ್ಮನ್ನು ಕೆಳಗೆ ಬೀಳಿಸಲು ಪ್ರಯತ್ನಿಸಿದರೂ, ದೇವರು ನಿಮ್ಮ ಕೈ ಬಿಡಲ್ಲ ಎಂದು ಬರೆದಿದ್ದಾರೆ.

ಇನ್ನೊಂದು ಸಂಗತಿ ಏನಂದ್ರೆ ಇದರ ಬೆನ್ನಲ್ಲೇ ಪವಿತ್ರಾ ಗೌಡ ಕೂಡ ಗುರುವಾರವೇ ಒಂದು ಇನ್​ಸ್ಟಾಗ್ರಾಮ್ ಸ್ಟೋರಿ ಹಾಕಿದ್ದಾರೆ. ಮನುಷ್ಯರು ಬಣ್ಣ ಬದಲಾಯಿಸಿದರೇನು? ರಾಯರು ನಮ್ಮ ಜೀವನವನ್ನೇ ಬದಲಾಯಿಸುತ್ತಾರೆ” ಎಂದು ಬರೆದಿದ್ದಾರೆ. ಇದು ವಿಜಯಲಕ್ಷ್ಮಿಗೆ, ಪವಿತ್ರಗೌಡ ಟಾಂಗ್ ಕೊಟ್ಟ ಮೆಸೇಜ್ ಇರಬಹುದಾ ಅನ್ನೋ ಮಾತು ಕೇಳಿ ಬಂದಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ದೇವರು ನಿಮ್ಮ ಕೈ ಬಿಡಲ್ಲ ಎಂದ್ರೆ ಪವಿತ್ರಾ ಗೌಡ ಅವರು ಮನುಷ್ಯರು ಬಣ್ಣ ಬದಲಿಸಿದ್ದಾರೆ ಅನ್ನೋ ಮೂಲಕ ಕುತೂಹಲ ಕೆರಳಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss