Web News: ಕಾರ್, ಬೈಕ್, ಸೈಕಲ್, ಮನೆ, ಜುವೆಲ್ಲರಿ ಸೇರಿ ಹಲವು ವಸ್ತುಗಳನ್ನು ಬಾಡಿಗೆಗೆ ನೀಡಲಾಗುತ್ತದೆ. ಅದನ್ನು ಬಾಡಿಗೆಗೆ ತೆಗೆದುಕೊಂಡವರು, ಆ ವಸ್ತುವನ್ನು ಬಳಸಿ ಮನೆಗ ಹಿಂದಿರುಗಿಸುತ್ತಾರೆ. ಬಾಡಿಗೆ ತೆಗೆದುಕೊಂಡಿದ್ದಕ್ಕಾಗಿ, ಒಂದಿಷ್ಟು ಹಣವನ್ನು ಕೂಡ ನೀಡುತ್ತಾರೆ. ಆದರೆ ಪತ್ನಿಯನ್ನು ಬಾಡಿಗೆಗೆ ಕೊಡುವ ಕರಾಳ ಸತ್ಯದ ಬಗ್ಗೆ ನಿಮಗೆ ಗೊತ್ತಾ..?
ಹೌದು ಪತ್ನಿಯನ್ನು ಸಹ ಬಾಡಿಗೆಗೆ ಕೊಡಲಾಗುತ್ತದೆ. ಮತ್ತು ಇದು ಯಾವುದೇ ದೇಶದ ಕಥೆಯಲ್ಲ. ಬದಲಾಗಿ ನಮ್ಮ ಭಾರತ ದೇಶದ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಈ ದರಿದ್ರ ಪದ್ಧತಿ ಇನ್ನೂ ಜಾರಿಯಲ್ಲಿದೆ. ಈ ವಿಷಯ ಗೊತ್ತಿದ್ದರೂ, ಸರ್ಕಾರವಾಗಿ, ಸ್ಥಳೀಯ ಪೊಲೀಸರಾಗಲಿ ಇನ್ನೂವರೆಗೂ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.
ಪತ್ನಿಯನ್ನು ಬಾಡಿಗೆಗೆ ಕೊಡಲು ಆಕೆಗೆ ಒಪ್ಪಿಗೆ ಇರದಿದ್ದರೂ, ಪತಿಗೆ ಮತ್ತು ಅವಳನ್ನು ಬಾಾಡಿಗೆಗೆ ಪಡೆಯುವವನಿಗೆ ಒಪ್ಪಿಗೆ ಇರಬೇಕು. ಇಬ್ಬರೂ ಅಗ್ರಿಮೆಂಟ್ಗೆ ಸಹಿ ಹಾಕಿ, ಪತ್ನಿಯನ್ನು 1 ವಾರಕ್ಕೆ ಅಥವಾ ವರ್ಷಕ್ಕೆ, ಹೀಗೆ ಎಷ್ಟು ದಿನ ಬೇಕೋ ಅಷ್ಟು ವರ್ಷ ಬಾಡಿಗೆಗೆ ಕೊಡಲಾಗುತ್ತದೆ. ಇದ್ಕಕೂ ದರಿದ್ರ ವಿಷಯ ಏನೆಂದರೆ, ಈ ಅಗ್ರಿಮೆಂಟ್ಗೆ ಸರ್ಕಾರದ ಸ್ಟ್ಯಾಂಪ್ ಬಳಸಲಾಗುತ್ತದೆ. ಮಹಿಳೆಯನ್ನು ಬಾಾಡಿಗೆಗೆ ಕೊಡುವವನು ಆಕೆಗೆ ರೇಟ್ ಫಿಕ್ಸ್ ಮಾಡಿರುತ್ತಾನೆ. ಮತ್ತು ಬಾಡಿಗೆ ಪಡೆಯುವವನು ಅಷ್ಟು ದಡ್ಡು ಕೊಟ್ಟು, ಮಹಿಳೆಯನ್ನು ಬಾಡಿಗೆಗೆ ತೆಗೆದುಕೊಂಡು ಹೋಗುತ್ತಾನೆ. ಇಲ್ಲಿ ಬರೀ ಪತಿಯಷ್ಟೇ ಅಲ್ಲ, ಕೆಲವು ಅಪ್ಪಂದಿರು ಸಹ ತಮ್ಮ ಹೆಣ್ಣು ಮಕ್ಕಳನ್ನು ಬಾಡಿಗೆಗೆ ನೀಡುತ್ತಾರೆ ಎಂಬುದು ವಿಪರ್ಯಾಸದ ಸಂಗತಿ.