ಬಿಗ್ ಬಾಸ್ ಕನ್ನಡ 12 ಸ್ಟಾರ್ಟ್ ಆದ ಮೇಲೆ ಗಿಲ್ಲಿ ನಟ ಮತ್ತು ಕಾವ್ಯ ಶೈವ ನಡುವೆ ಒಳ್ಳೆ ಸ್ನೇಹ ಬೆಳೆದಿತ್ತು. ಗಿಲ್ಲಿಗೇ ಸರಿ–ತಪ್ಪು ಹೇಳೋದು, ಸಲಹೆ ಕೊಡುವುದು—ಇವೆಲ್ಲಾ ಕಾವ್ಯ ಮಾಡ್ತಿದ್ದರೆ. ಆದರೆ ಇತ್ತೀಚಿನ ಸೂಪರ್ ಸಂಡೇ ವಿತ್ ಸುದೀಪ್ ಎಪಿಸೋಡ್‌ನಲ್ಲಿ ಕಾವ್ಯ ಕೊಟ್ಟ ಕಾಮೆಂಟ್‌ಗಳು ವೀಕ್ಷಕರಿಗೆ ಜಾಸ್ತಿ ಇಷ್ಟವಾಗಲಿಲ್ಲ.
ಸುದೀಪ್ ಫನ್ ಟಾಸ್ಕ್ ಕೊಡೋದ್ರಲ್ಲಿ—ಯಾರಾದರೂ ಸ್ಪರ್ಧಿಯ ಮನೆಗೆ ಫೋನ್ ಮಾಡಿ
ದ ಹಾಗೆ ನಟಿಸಬೇಕು. ರಜತ್, ಚೈತ್ರಾ ಕುಂದಾಪುರ, ಗಿಲ್ಲಿ ನಟ ಟಾಸ್ಕ್ ಮಾಡಿದರು. ನಂತರ ಕಾವ್ಯಗೂ ಅವಕಾಶ ಬಂತು. ಆಗ ಅವಳು ಗಿಲ್ಲಿ ನಟನ ‘ಅಮ್ಮ’ ಜೊತೆ ಮಾತನಾಡಿದಂತೆ ನಟಿಸಿ, “ನಿಮ್ಮ ಮಗ ತುಂಬಾ ಟಾರ್ಚರ್ ಕೊಡ್ತಿದ್ದಾನೆ, ಹೇಳಿದ ಮಾತು ಕೇಳ್ತಿಲ್ಲ… ರಾಖಿ ಕಟ್ಟಿದ್ರೆ ದುಡ್ಡು ಕೊಡ್ಲಿಲ್ಲ… ಹೊರಗೆ ಬಂದ್ಮೇಲೆ ಈಸ್ಕೊಳ್ತೀನಿ ಎಂದು ಹೇಳಿದ್ರು.
ಅಷ್ಟೇ ಅಲ್ಲ, “ಹೊರಗೆ ಹೆಣ್ಣು ನೋಡ್ತೀರಂತೆ? ಯಾವ ತರಹ ಹುಡುಗಿ ಬೇಕು?” ಅಂತ ಕೇಳಿದಾಗ, ಗಿಲ್ಲಿ “ನಿನ್ನ ತರಹ ಬೇಕು” ಅಂತ ಕೂಲ್ ಕೌಂಟರ್ ಕೊಟ್ಟ. ಆದರೆ ಕಾವ್ಯ ಅದನ್ನ ಮುಂದುವರಿಸಿ, “ನನ್ನ ತರಹ ಮಗಳು ಸಾಕಂತೆ… ನಿಮಗೆ ನೀನೇ ಬೇಕು ಅಂತೆ” ಅಂತ ಹೇಳಿ ಗಿಲ್ಲಿಯ ಮಾತನ್ನ ತಿರುಗಿಸಿದರು.
ಇಷ್ಟರಲ್ಲಿ ಕಾವ್ಯ ಮತ್ತಷ್ಟು ಮುಂದೆ ಹೋಗಿ, “ಹೆಣ್ಣು ಮಕ್ಕಳೇ ಹೇಗೆ ಟ್ರೀಟ್ ಮಾಡಬೇಕು ಗೊತ್ತಿಲ್ಲ… ಲಿಮಿಟ್ ಕ್ರಾಸ್ ಮಾಡ್ತಾನೆ… ಮನೆಯಲ್ಲಿ ಹೆಣ್ಮಕ್ಕಳ ಜೊತೆ ಬೆಳೆದಿದಿಯಾ? ಅಕ್ಕ ಇದ್ದಾರೆ? ಆದರೂ ಲೈನ್ ಕ್ರಾಸ್ ಮಾಡ್ತಾನೆ” ಅಂತ ಗಿಲ್ಲಿಯ ಮೇಲೆ ಸಟಾಕೆ ಹೊಡೆದ್ರು. ಈ ಭಾಗವೇ ಜಾಸ್ತಿ ಟ್ರಿಗರ್ ಆಯ್ತು—ವೀಕ್ಷಕರು ಇದು ಒವರ್, unnecessary ಎಂದು ಕಮೆಂಟ್ ಮಾಡ್ತಿದ್ದಾರೆ.
ಮತ್ತೊಂದು ಟಾಸ್ಕ್‌ನಲ್ಲಿ ಕಾವ್ಯ ಗಿಲ್ಲಿಗೆ ಎಮ್ಮೆ ಫೋಟೋ ಹಾಕಿ, “ಎಷ್ಟೋ ವಿಷಯಗಳಲ್ಲಿ ಗೈಡ್ ಮಾಡ್ತಿದ್ದೇನೆ, ಇನ್ನು ಸ್ಟಾಪ್… ಏನೂ ಚೇಂಜ್ ಇಲ್ಲ” ಎಂದರು. ಗಿಲ್ಲಿ ಬಗ್ಗೆ ಕಾವ್ಯ ಮಾಡಿದ ಈ ರೀತಿಯ ಮಾತುಗಳನ್ನು ಫ್ಯಾನ್ಸ್ “ಅವಳಿಗೂ ಗಿಲ್ಲಿಗೂ ಇರೋ ಬಾಂಡ್ ಅನ್ನು ಪಬ್ಲಿಕ್ ಆಗಿ ಕೆಡಿಸಿದ್ದಾಳೆ”, “ಟಾಸ್ಕ್ ಅಂದ್ರೆ ಟಾಸ್ಕ್, character assassination ಬೇಡ” ಅಂತ ಕ್ರಿಟಿಸೈಸ್ ಮಾಡುತ್ತಿದ್ದಾರೆ.
ಒಟ್ಟಾರೆ, BBK12 ಪ್ರೇಕ್ಷಕರ ಮಾತು—ಕೇವಲ ಟಾಸ್ಕ್‌ಗಾಗಿ ಗಿಲ್ಲಿಯನ್ನು ಡೌನ್ ಮಾಡೋದಾ? ಪ್ರೆಂಡ್ ಶಿಪ್ ನಲ್ಲಿ ಇನ್ಸಲ್ಟ್ ಮಾಡೋದಾ? ಕಾವ್ಯ ಹೇಳಿದ ಒಂದು–ಎರಡು ಲೈನ್‌ಗಳು ಮನರಂಜನೆ ಮೀರಿ ಪರ್ಸನಲ್ ಗೆ ಹೋಗಿವೆ ಎನ್ನೋದು ಸೋಷಿಯಲ್ ಮೀಡಿಯಾದ ಮಾತುಕಥೆಗಳಾಗಿವೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

