Saturday, May 25, 2024

Latest Posts

ವಿಭಿನ್ನವಾಗಿ ತಬಲಾ ವಾದ್ಯ ನುಡಿಸೋ ಶಿಕ್ಷಕಿ…!

- Advertisement -

www.karnatakatv.net :ಧಾರವಾಡ: ತಬಲಾ ವಾದ್ಯ ನುಡಿಸುತ್ತಿರೊ ಇವರು ವೃತಿಯಲ್ಲಿ ಶಿಕ್ಷಕರು. ಹುಬ್ಬಳ್ಳಿ ತಾಲೂಕಿನ ರೇವಡಿಹಳ ಸರ್ಕಾರ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ತಬಲಾ ಮುಖಾಂತರ ವಿವಿಧ ಟ್ಯೂನ್ ಬಾರಿಸಿ ಸಾಧನೆ ಮಾಡಿದ್ದಾರೆ. ಶಿಕ್ಷಕ ವೃಂದದಲ್ಲಿ ಜರುಗುವ ಜಿಲ್ಲಾ ಮಟ್ಟ, ರಾಜ್ಯ ಮಟ್ಟ, ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದಾರೆ. ವೀರಗಾಸೆ, ಕತ್ತಿ ವರಸೆ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮೆಚ್ಚುಗೆ ಪಡೆದಿದ್ದಾರೆ. ಜೊತೆಗೆ ಕೊರೋನ ವೇಳೆ ಮಕ್ಕಳಿಗೆ ವಿದ್ಯಾಭ್ಯಾಸ ಕುಂಟಿತವಾಗಬಾರದು ಎಂದು ಮನೆ ಮನೆಗೆ ತೆರಳಿ ಪಾಠ ಮಾಡುವ ಮೂಲಕ ವಿದ್ಯಾರ್ಥಿಗಳಿಗೂ ಅಚ್ಚು ಮೆಚ್ಚಿನ ಶಿಕ್ಷಕಿಯಾಗಿ ಗುರುತಿಸಿಕೊಂಡಿದ್ದಾರೆ.

ಇವರ ಹೆಸರು ಕಮಲಾ ನರಸರಿ ಮೂಲತಃ ಇಂಗಳಹಳ್ಳಿ ಗ್ರಾಮದವರು. ಚಿಕ್ಕಂದಿನಿಂದಲೇ ತಬಲಾ ವಾದ್ಯ ಕಡೆ ಹೆಚ್ಚು ಒಲವು ತೋರಿ ತಬಲಾ ಬಾರಿಸಲು ಕಲಿತೆ ಎನ್ನುತ್ತಾರೆ, ಚಿಕ್ಕವಳಿದ್ದಾಗ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಜಾನಪದ ಹಾಡುತ್ತಾ ಚರ್ಮ ವಾದ್ಯ ನುಡಿಸೋರನ್ನ ನೋಡುತ್ತಾ ನನಗೂ ಈ ತಬಲಾ ನುಡಸೋದನ್ನ ಕಲಿಯಬೇಕು ಎಂಬ ಅಸೆ ಹುಟ್ಟಿ ಕಲಿತಿದ್ದೇನೆ. ನಾನು ಪದವಿ ವ್ಯಾಸಂಗ ಮಾಡಬೇಕಾದ್ರೆ ಸಂಗೀತ ವಿಷಯವನ್ನು ಅಧ್ಯಯನ ವಿಷಯವಾಗಿ ತೆಗೆದೇಕೊಂಡು ಸಂಗೀತವನ್ನು ಅಭ್ಯಾಸ ಮಾಡಿದ್ದೇನೆ ಎನ್ನುತ್ತಾರೆ ಶಿಕ್ಷಕ್ರು.

ಇನ್ನೂ ತಾವು ಕಲಿಸುವಂತಹ ಮಕ್ಕಳಿಗೂ ಸಹ ಅವರಿಗೆ ಯಾವ ವಿಷಯದಲ್ಲಿ ಆಸಕ್ತಿ ಇರುತ್ತೋ ಅದೇ ವಿಷಯದ ಬಗ್ಗೆ ಒಲವು ಮೂಡಿಸುವ ಕೆಲಸ ಮಾಡ್ತಿದೀನಿ. ನನ್ನ ಶಾಲಾ ವಿಭಾಗದ ಮಕ್ಕಳಲ್ಲಿಯೂ ಸಹ ಯಾವ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ತೋರುತ್ತಾರೋ ಅವರಿಗೆ ಅದೇ ವಿಷಯವನ್ನು ಆಯ್ಕೆ ಮಾಡಿಕೊಳ್ಳುವಂತೆ ಅವರ ಪಾಲಕರೊಂದಿಗೆ ಚರ್ಚಿಸಿ ತಿಳಿಸುತ್ತೇನೆ ಎನ್ನುತ್ತಾರೆ.

ಇನ್ನೂ ಹೊಸ ರಾಷ್ಟೀಯ ಶಿಕ್ಷಣ ನೀತಿ ಸಹ ಕಲಿಕೆಗೆ ಒಂದೊಳ್ಳೆ ವೇದಿಕೆ ಕಲ್ಪಿಸುತ್ತದೆ. ವಿದ್ಯಾರ್ಥಿಗಳ ಅಭಿರುಚಿಗೆ ತಕ್ಕಂತೆ ಕಲಿಕೆಗೆ ಅವಕಾಶ ನೀಡುತ್ತದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಹೊಸ ರಾಷ್ಟೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಿದೆ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು.

ಕರ್ನಾಟಕ ಟಿವಿ- ಹುಬ್ಬಳ್ಳಿ

- Advertisement -

Latest Posts

Don't Miss