Tuesday, December 24, 2024

Latest Posts

FRAUD : ಬೆಂಗಳೂರಿನಲ್ಲಿ ಟೆಕ್ಕಿಗೆ ದೋಖಾ , ₹11 ಕೋಟಿ ವಂಚನೆ

- Advertisement -

ಬೆಂಗಳೂರಲ್ಲಿ ದಿನೇ ದಿನೇ ಡಿಜಿಟಲ್ ಅರೆಸ್ಟ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಬಗ್ಗೆ ಜನರಿಗೆ ಏಷ್ಟೇ ಜಾಗೃತಿ ಮೂಡಿಸಿದ್ರು ಜನ ವಂಚನೆಗೆ ಒಳಗಾಗ್ತಾನೇ ಇದ್ದಾರೆ. ಸದ್ಯ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜನಿಯರ್ ಒಬ್ಬರಿಗೆ ಬರೋಬ್ಬರಿ 11 ಕೋಟಿ 83 ಲಕ್ಷ 55 ಸಾವಿರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿಜಯ್ ಕುಮಾರ್ ಕೆ.ಎಸ್ ಅನ್ನೋ ಸಾಫ್ಟ್‌ವೇರ್ ಉದ್ಯೋಗಿಗೆ ಡಿಜಿಟಲ್ ಅರೆಸ್ಟ್ ನೆಪದಲ್ಲಿ ಕೋಟಿ ‌ಕೋಟಿ ವಂಚನೆ ಮಾಡಿದ್ದಾರೆ.

ಟ್ರಾಯ್​ನಿಂದ ಕರೆ ಮಾಡುತ್ತಿರುವುದಾಗಿ ಕೇಳಿಕೊಂಡು ಆರೋಪಿಗಳು ಕರೆ ಮಾಡಿದ್ದಾರೆ. ನಂತರ ನಿಮ್ಮ ಅಧಾರ್ ಕಾರ್ಡ್ ಮನಿ ಲಾಂಡರಿಂಗ್​ನಲ್ಲಿ ಬಳಕೆಯಾಗಿದೆ ಅಂತ ಅಂದಿದ್ದಾರೆ. ನಂತರ ಆರೋಪಿಗಳು ಮುಂಬೈನ ಕೊಲಾಬಾದಲ್ಲಿ ನಿಮ್ಮ ಮೇಲೆ ಪ್ರಕರಣ ದಾಖಲಾಗಿದ್ದು, ನಾವು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಅಂತ ಬೆದರಿಕೆ ಹಾಕಿದ್ದಾರೆ. ನಿಮ್ಮ ಆಧಾರ್ ಕಾರ್ಡ್ ಬಳಸಿ ಮನಿ ಲಾಂಡರಿಂಗ್ ಆಗಿದ್ದು ಆರು ಕೋಟಿ ವಂಚನೆ ಆಗಿದೆ, ಈಗ ಕೇಸ್ ಸುಪ್ರೀಂ ಕೋರ್ಟ್ ನಲ್ಲಿ ನಡೀತಾ ಇದೆ ಅಂತಲೂ ಹೇಳಿದ್ದಾರೆ.

 

ನಂತರ ವಿಡಿಯೋ ಕಾಲ್ ಮಾಡಿ ನಿಮ್ಮನ್ನ ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಹೇಳಿದ್ದಾರೆ. ಒಂದು‌ ದಿನ ಪೂರ್ತಿ ಡಿಜಿಟಲ್ ಅರೆಸ್ಟ್ ಮಾಡಿದ್ದ ಆರೋಪಿಗಳು, ಈ ಸಮಯದಲ್ಲಿ ಹಂತ ಹಂತವಾಗಿ ಹಣ ಕಳಿಸಿಕೊಂಡಿದ್ದಾರೆ. ಹಂತ ಹಂತವಾಗಿ ಸುಮಾರು 11 ಕೋಟಿ 83 ಲಕ್ಷ ಹಣ ಹಾಕಿಸಿಕೊಂಡಿದ್ದಾರೆ. ಸದ್ಯ ಈಶಾನ್ಯ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest Posts

Don't Miss