ಗಂಗಾರತಿ ಮಾದರಿಯಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ, ಕರ್ನಾಟಕದ ಶ್ರೀರಂಗಪಟ್ಟಣದಲ್ಲಿ ಕಾವೇರಿ ಆರತಿ ವಿಜೃಂಬಣೆಯಿಂದ ನೆರವೇರಿದೆ. ಈ ಮೂಲಕ ಹೊಸ ಸಂಪ್ರದಾಯಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಮುನ್ನುಡಿ ಬರೆದಿದ್ದಾರೆ.
ಕೆಆರ್‌ಎಸ್ ಅಣೆಕಟ್ಟೆ ಬಳಿ ದೋಣಿ ವಿಹಾರ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಕಾವೇರಿ ಮೂರ್ತಿಗೆ, ಡಿಕೆಶಿ ಆರತಿ ಬೆಳಗೆ ಚಾಲನೆ ನೀಡಿದ್ರು. ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ 50ಕ್ಕೂ ಹೆಚ್ಚು ವೈದಿಕರ ತಂಡ ಮಂತ್ರಘೋಷ ಮೊಳಗಿಸಿದ್ರು. ಶಂಖನಾದ, ಡೊಳ್ಳು ನಗಾರಿ ಸದ್ದಿನೊಂದಿಗೆ, 1 ಗಂಟೆಗಳ ಕಾಲ ಕಾವೇರಿ ಆರತಿಯನ್ನು ನೆರವೇರಿಸಲಾಯ್ತು.
ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ, ಹೊರ ರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸಿದ್ದು, ಕಾವೇರಿ ಆರತಿ ಕಣ್ತುಂಬಿಕೊಂಡಿದ್ದಾರೆ. ಅಕ್ಟೋಬರ್ 2ರವರೆಗೆ ಪ್ರತಿದಿನ ಸಂಜೆ ಕಾವೇರಿ ಆರತಿ ನೆರವೇರಲಿದ್ದು, ಮೈಸೂರು ದಸರಾಗೆ ಮತ್ತಷ್ಟು ಮೆರಗು ತಂದುಕೊಟ್ಟಿದೆ.
ಕಾವೇರಿ ಆರತಿಗೆ ಚಾಲನೆ ನೀಡಿ ಮಾತನಾಡಿದ ಡಿಕೆಶಿ, ಪ್ರಾರ್ಥನೆ ಯಾರ ಮನೆಯ ಸ್ವತ್ತೂ ಅಲ್ಲ. ಪ್ರಯತ್ನ ವಿಫಲ ಆಗಬಹುದು. ಆದರೆ, ಪ್ರಾರ್ಥನೆ ಎಂದಿಗೂ ವಿಫಲ ಆಗುವುದಿಲ್ಲ ಎಂದ್ರು. ಈ ಮೂಲಕ ಸಿಎಂ ಆಗುವ ಕನಸನ್ನ ಹೊರಹಾಕಿದ್ದಾರೆ.
ಕಾವೇರಿ ಆರತಿ ವಿರೋಧಿಸಿ ಪ್ರತಿಭಟನೆಗಿಳಿದಿದ್ದ ಹಲವು ಸಂಘಟನೆಗಳ ನೂರಾರು ಜನರನ್ನು, ಕೆಆರ್‌ಎಸ್ ಅಣೆಕಟ್ಟೆಯ ಸೌಥ್‌ಗೇಟ್ ಬಳಿ ಪೊಲೀಸರು ಬಂಧಿಸಿದ ಘಟನೆಯೂ ನಡೆದಿದೆ.