- Advertisement -
www.karnatakatv.net: ಬಾಲಿವುಡ್ : ದೆಹಲಿ: ದಿಲೀಪ್ ಕುಮಾರ್ ಭಾರತೀಯ ಚಿತ್ರರಂಗದ ಖ್ಯಾತ ಹಿರಿಯ ನಟ ದಿಲೀಪ್ ಕುಮಾರ್ ಇಹಲೋಕ ತ್ಯಜಿಸಿದ್ದಾರೆ. ಚಿತ್ರರಂಗದ ಶ್ರೇಷ್ಟ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ಪುರಸ್ರುತರಾಗಿದ್ದ ಇವರು ರಾಜ್ಯಸಭೆ ಸದಸ್ಯರೂ ಆಗಿದ್ದರು. 1944ರಲ್ಲಿ ಸಿನಿ ಜರ್ನಿ ಆರಂಭಿಸಿದ ಇವರು ದಶಕಗಳ ಕಾಲ ಬಾಲಿವುಡ್ ನ ಆಳಿದ್ದರು. ಖ್ಯಾತ ನಾಮಾಂಕಿತರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದರು. ಭಾರತೀಯ ಚಿತ್ರರಂಗದ ದಂತ ಕತೆ ಎಂದೇ ಹೇಳಲಾಗುತ್ತಿದ್ದ ದಿಲೀಪ್ ಕುಮಾರ್ ಫಿಲ್ಮ್ ಫೇರ್ ಪ್ರಶಸ್ತಿ ಆರಂಭವಾದಾಗ ಅದನ್ನು ಪಡೆದ ಮೊದಲಿಗರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದಿಲೀಪ್ ಕುಮಾರ್ ತಮ್ಮ 98ನೇ ವಯಸ್ಸಿನಲ್ಲಿ ಇಂದು ಮುಂಜಾನೆ ಇಹ ಲೋಕ ತ್ಯಜಿಸಿದ್ದಾರೆ.
- Advertisement -