- Advertisement -

ಕರ್ನಾಟಕ ಟಿವಿ : ಡಿಂಪಲ್ ಕ್ವೀನ್ ರಚಿತಾ ರಾಮ್ ಮನೆಗೆ ದುಬಾರಿ ಗೆಳೆಯನನ್ನ ಕರೆತಂದಿದ್ದಾರೆ.. ತನ್ನ ನೆಚ್ಚಿನ ಮರ್ಸಿಡಿಸ್ ಬೆಂಜ್ ಜಿಎಲ್ಎಸ್ ಸೀರಿಸ್ ಕಾರನ್ನ ಗುಳಿಕೆನ್ನೆ ಚಲುವೆ ರಚಿತಾ ರಾಮ್ ಖರೀದಿದ್ದಾರೆ. ಈ ಕಾರಿನ ಷೋ ರೂಂ ಬೆಲೆ 88 ಲಕ್ಷವಿದ್ದು ಆರ್ಟಿಓ, ರೋಡ್ ಟ್ಯಾಕ್ಸ್, ಇನ್ಶುರೆನ್ಸ್ ಸೇರಿ ಇದರ ಬೆಲೆ ಕೋಟಿ ದಾಟಲಿದೆ.. ಕಸ್ತೂರ್ ಬಾ ರಸ್ತೆಯ ಮರ್ಸಿಡಿಸ್ ಬೆಂಜ್ ಸುಂದರಂ ಮೋಟರ್ಸ್ ನಲ್ಲಿ ರಚಿತಾ ರಾಮ್ ಕಾರು ಖರೀದಿ ಮಾಡಿದ್ದಾರೆ.. ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಕಾರು ಹಸ್ತಾಂತರಿಸುವ ವೇಳೆ ಕೇಕ್ ಕಟ್ ಮಾಡಿಸಿದ ಶೋ ರೂಂ ಸಿಬ್ಬಂದಿ ರಚಿತಾಗೆ ಶಾಕು ಹೊದಿಸಿ ಸನ್ಮಾನ ಮಾಡಿದ್ದಾರೆ.. ಈ ವೇಳೆ ಶೋ ರೂಂ ಸಿಬ್ಬಂದಿ ಜೊತೆ ರಚಿತಾ ಫೋಟೋಸ್ ತೆಗೆಸಿಕೊಂಡಿದ್ದಾರೆ.. ಶೋ ರೂಂ ನ ಫೆಸ್ ಬುಕ್ ಫೋಸ್ಟ್ ನಲ್ಲಿ ರಚಿತಾ ಕಾರು ಖರೀದಿಸಿರುವ ಬಗ್ಗೆ ಫೋಟೋ ಪೋಸ್ಟ್ ಮಾಡಿದ್ದಾರೆ…




- Advertisement -