Tuesday, August 5, 2025

Latest Posts

ಒಂದೇ ವೇದಿಕೆಯಲ್ಲಿ ಡಿ ಬಾಸ್ ತಮ್ಮ ದಿನಕರ್ ತೂಗುದೀಪ ಮತ್ತು ಕಿಚ್ಚ ಸುದೀಪ್

- Advertisement -

ಒಂದೇ ವೇದಿಕೆಯಲ್ಲಿ ಡಿ ಬಾಸ್ ತಮ್ಮ ದಿನಕರ್ ತೂಗುದೀಪ ಮತ್ತು ಕಿಚ್ಚ ಸುದೀಪ್

ಕಳೆದ ಸೀಸನ್‌ನಲ್ಲಿ ದಿನಕರ್ ತೂಗುದೀಪ ಗೈರಾಗಿದ್ದರು. ಆದರೆ, ಈ ಬಾರಿ ಮೆಂಟರ್‌ ಕಮ್ ಪ್ಲೇಯರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೇಳೆ ವೇದಿಕೆ ಮೇಲಿದ್ದ ದಿನಕರ್ ಮಾತಾಡಲು ಸಮಯ ತೆಗೆದುಕೊಂಡಾಗ, ಕಿಚ್ಚ ಸುದೀಪ್ ಮಧ್ಯೆ ಪ್ರವೇಶಿಸಿದ್ದರು.

ಸ್ಯಾಂಡಲ್‌ವುಡ್ ಕುಚಿಕುಗಳು ಒಂದಾಗಿಬಿಟ್ರು ಅಂತ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣದ ಬಳಿಕ ಸುದೀಪ್ ಬಗ್ಗೆ ಪತ್ರಕ್ಕೆ ದರ್ಶನ್ ಕೂಡ ಪ್ರತಿಕ್ರಿಯೆ ನೀಡಿದ್ದರು. ಈ ಬೆಳವಣಿಗೆಯ ಬಳಿಕ ಸುದೀಪ್ ಜೊತೆ ದಿನಕರ್ ತೂಗುದೀಪ ಕಾಣಿಸಿಕೊಂಡಿದ್ದಾರೆ.

ಫಸ್ಟ್ ಸೀಸನ್‌ನಲ್ಲಿ ಪ್ಲೇಯರ್ ಆಗಿದ್ದೆ. ಮೂರನೇ ಸೀಸನ್‌ನಲ್ಲಿ ಮೆಂಟರ್‌ ಕಮ್ ಪ್ಲೇಯರ್ ಆಗಿ ಆಡುತ್ತಿದ್ದೇನೆ. ಲೈಫ್‌ನಲ್ಲಿ ಇಷ್ಟ ಆಗೋದು ಎರಡೇ. ಒಂದು ಸಿನಿಮಾ. ಇನ್ನೊಂದು ಎಂಟರ್‌ಟೈನ್ಮೆಂಟ್. ಸಿನಿಮಾಗೆ ಪ್ರಡ್ಯೂಸರ್ ಇದ್ದಾರೆ . ಕ್ರಿಕೆಟ್ ಖುಷಿ ಕೊಡೋಕೆ ಸುದೀಪ್ ಸರ್ ಇದ್ದಾರೆ.” ಎಂದರು.

- Advertisement -

Latest Posts

Don't Miss