ಎಂಗೇಜ್ ಆದ ನಿರ್ದೇಶಕ ಚೇತನ್ ಕುಮಾರ್….!

ಬಹದ್ದೂರ್, ಭರಾಟೆಯಂತಹ ಸೂಪರ್ ಹಿಟ್ ಸಿನಿಮಾಗಳನ್ನ‌ ಕೊಟ್ಟ ನಿರ್ದೇಶಕ ಚೇತನ್ ಕುಮಾರ್ ಸದ್ಯ ಬಹುಕಾಲದ ಗೆಳೆತಿ ಜೊತೆ ಎಂಗೇಜ್ ಆಗಿದ್ದಾರೆ.

ನಿನ್ನೆ ಮೈಸೂರಿನಲ್ಲಿ ಸರಳವಾಗಿ ಪ್ರೀತಿಸಿದ ಹುಡುಗಿಗೆ ಚೇತನ್ ರಿಂಗ್ ತೊಡಿಸಿ ಎಂಗೇಜ್ ಆಗಿದ್ದಾರೆ.

ಇತ್ತೀಚೆಗೆಷ್ಟೇ ಪವರ್ ಸ್ಟಾರ್ ಪುನೀತ್ ನಟನೆಯ ಜೇಮ್ಸ್ ಸಿನಿಮಾದ ಶೂಟಿಂಗ್ ಗೆ ಕಾಶ್ಮೀರಕ್ಕೆ ತೆರಳಿದ್ದ ಚೇತನ್, ಅಲ್ಲಿಂದ ಮರಳಿದ ಬಳಿಕ‌ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಇಬ್ಬರು ಕುಟುಂಬಸ್ಥರಷ್ಟೇ ಭಾಗಿಯಾಗಿದ್ರು.

About The Author