ಹಾಲಿವುಡ್ ರೇಂಜ್‌ಗಿದೆ “ವಿಕ್ರಾಂತ್ ರೋಣ” ಎಂದ ನಿರ್ದೇಶಕ ಆರ್ ಚಂದ್ರು & ಫ್ಯಾಮಿಲಿ..!
ಬಾದ್‌ಶಾ ಕಿಚ್ಚ ಸುದೀಪ್ ನಟಸಿರುವ ವಿಕ್ರಾಂತ್ ರೋಣ ಸಿನಿಮಾ ವಿಶ್ವದಾದ್ಯಂತ ರಿಲೀಸಾಗಿ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣ್ತಿದೆ. ಇದೀಗ ಅಭಿಮಾನಿಗಳಷ್ಟೇ ಅಲ್ಲದೇ, ಕಲಾವಿದರು, ತಂತ್ರಜ್ನರೆಲ್ಲರೂ ತಮ್ಮ ತಮ್ಮ ಕುಟುಂಬದ ಜೊತೆ ವಿಕ್ರಾಂತ್ ರೋಣ ಚಿತ್ರವನ್ನು ೩ಡಿ ಲಿ ನೋಡಿ ಎಂಜಾಯ್ ಮಾಡ್ತಿದ್ದಾರೆ. ಅದರಂತೆಯೇ ನಮ್ಮ ಕನ್ನಡ ಚಿತ್ರರಂಗದ ನಿರ್ದೇಶಕ ಆರ್.ಚಂದ್ರು ವಿಕ್ರಾಂತ್ ರೋಣ ಸಿನಿಮಾವನ್ನ ತಮ್ಮ ಕುಟುಂಬಜ ಜೊತೆ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ ಸಿನಿಮಾ ನೋಡಿ ಕಿಚ್ಚನಿಗೆ ಏನ್ ಹೇಳಿದ್ದಾರೆ ಗೊತ್ತಾ..?
ಹಾಲಿವುಡ್ ರೇಂಜ್‌ಗಿದೆ “ವಿಕ್ರಾಂತ್ ರೋಣ” ಎಂದ ನಿರ್ದೇಶಕ ಆರ್.ಚಂದ್ರು..
ಇಂದು ನಾನು ನನ್ನ ಫ್ಯಾಮಿಲಿಯ ಜೊತೆ ತ್ರೀಡಿಯಲ್ಲಿ “ವಿಕ್ರಾಂತ್ ರೋಣ” ಚಿತ್ರವನ್ನು ವೀಕ್ಷಿಸಿದೆ, ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಪಕರು, ಅದ್ಭುತವಾಗಿ ತಂತ್ರಜ್ಞರು, ಅಚ್ಚುಕಟ್ಟಾಗಿ ಕಲಾವಿದರು ಮತ್ತು ಅತ್ಯದ್ಭುತವಾಗಿ ಅಭಿನಯ ಚಕ್ರವರ್ತಿ “ಕಿಚ್ಚ ಸುದೀಪ್” ಅವರು ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಈ ಸಿನಿಮಾ ಒಂದು ಅದ್ಭುತ ಪ್ರಯತ್ನ. ಒಂದು ಹಾಲಿವುಡ್ ಸಿನಿಮಾವನ್ನು ನೋಡಿದ ಅನುಭವ ನನಗೆ ಆಯಿತು. ದಯವಿಟ್ಟು ಎಲ್ಲರೂ ಈ ಚಿತ್ರವನ್ನು ಫ್ಯಾಮಿಲಿ ಸಮೇತ ನೋಡಿ, ಖಂಡಿತ ಎಂಜಾಯ್ ಮಾಡುತ್ತೀರಾ. ಆಲ್ ದಿ ಬೆಸ್ಟ್ ಟೀಮ್ “ವಿಕ್ರಾಂತ್ ರೋಣ”.
ಒಟ್ಟಿನಲ್ಲಿ ವರ್ಲ್ಡ್ ವೈಡ್ ಕಿಚ್ಚನ ಫ್ಯಾನ್ಸ್ ೩ಡಿಯಲ್ಲಿ ವಿಕ್ರಾಂತ್ ರೋಣ ಸಿನಿಮಾ ಕಣ್ತುಂಬಿಕೊAಡು ಸಖತ್ ಫ್ಯಾಂಟಮ್ ಲೋಕವನ್ನ ಸಖತ್ ಇಷ್ಟ ಪಡ್ತಿದ್ದಾರೆ. ಮೊದಲ ದಿನ ವರ್ಲ್ಡ್ವೈಡ್ ವಿಕ್ರಾಂತ್ ರೋಣನ ಬಾಕ್ಸಾಫೀಸ್ ಕಲೆಕ್ಷನ್ 35 ಕೋಟಿ ಆಗಿದ್ರೆ, 2ನೇ ದಿನವೂ ಅದೇ ರೀತಿ ಕಲೆಕ್ಷನ್‌ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿದೆ ಎಂಬ ಮಾಹಿತಿಯಿದೆ.