Sandalwood-ಈ ಪಟ್ಟಣಕ್ಕೆ ಏನಾಗಿದೆ ? ಸಿನಿಮಾ

ಸಿನಿಮಾ ಸುದ್ದಿ: ಪ್ರತಿ ಸಿನಿಮಾದಲ್ಲಿ ಸಿನಿಮಾ ಆಂಭಕ್ಕೂ ಮುನ್ನ ಜಾಹಿರಾತುಗಳಲ್ಲಿ ಬರುತ್ತವೆ ನಿಮಗೆಲ್ಲ ಆ ಜಾಹಿರಾತು ಕಂಠಪಾಠ ಆಗಿರದೆ ಇರದು ‘ಈ ಪಟ್ಟಣಕ್ಕೆ ಏನಾಗಿದೆ’ ಎನ್ನುವ ಡೈಲಾಗ್ ಕೇಳಿರುತ್ತೀರಿ ಈಗ ಇದರ ಬಗ್ಗೆ ಯಾಕೆ ಆ ಮಾತು ಅಂತ ಕೇಳ್ತೀರಾ ಈಗ ಆ ಹೆಸೆರಿನಲ್ಲಿ ಒಂದು  ಸಿನಿಮಾ ಸಿದ್ದವಾಗಿದೆ . ಆದರೆ ಸೆನ್ಸಾರ್ ಮಂಡಳಿ ಈ ಸಿನಿಮಾಕೆ ಪ್ರಮಾಣ ಪತ್ರ ನೀಡಿಲ್ಲವಂತೆ ಅದಕ್ಕಾಗಿ ಹೈದ್ರಾಬಾದ್ ನಿಂದ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ ಕನ್ನಡ ಚಿತ್ರರಂಗದ ಸೆನ್ಸಾರ್ ಮಂಡಳಿಯಿಂದ ಸರ್ಟಿಫಿಕೇಟ್ ಸಿಕ್ಕಿಲ್ಲ ಅಂದರೆ ಆ ಸಿನಿಮಾದಲ್ಲಿ ಏನೋ ಇದೆ. ಅನಿಸ್ತಿದೆ.

‘ಈ ಪಟ್ಟಣಕ್ಕೆ ಏನಾಗಿದೆ’ ಸಿನಿಮಾಗೆ ರವಿ ಸುಬ್ಬರಾವ್ ಅವರು ನಿರ್ದೇಶನ ಮಾಡಿದ್ದಾರೆ. ಸೆನ್ಸಾರ್ ಸಮಸ್ಯೆ ಆಗುವಂಥದ್ದು ಈ ಚಿತ್ರದಲ್ಲಿ ಏನಿದೆ? ಈ ಪ್ರಶ್ನೆಗೆ ನಿರ್ದೇಶಕ ರವಿ ಸುಬ್ಬರಾವ್ ಉತ್ತರ ನೀಡಿದ್ದಾರೆ. ‘ಅನೇಕ ಸನ್ನಿವೇಶಗಳನ್ನು ನಾವು ನೈಜವಾಗಿ ಶೂಟ್​ ಮಾಡಿದ್ದೇವೆ. ಆದ್ದರಿಂದ ಕರ್ನಾಟಕದಲ್ಲಿ ನಮಗೆ ಸೆನ್ಸಾರ್ ಮಾಡಿಸಲು ಸಾಧ್ಯವಾಗಲಿಲ್ಲ. ಬಳಿಕ ನಾವು ಹೈದರಾಬಾದ್​​ನಲ್ಲಿ ಸಿನಿಮಾದ ಸೆನ್ಸಾರ್ ಮಾಡಿಸಿದೆವು. ಅಲ್ಲಿನ ಸೆನ್ಸಾರ್ ಬೋರ್ಡ್​ ಸದಸ್ಯರು ಕೆಲವು ಕಡೆಗಳಿಗೆ ಕತ್ತರಿ ಹಾಕಲು ಸೂಚಿಸಿ, ಎ ಪ್ರಮಾಣಪ್ರತ್ರ ನೀಡಿದ್ದಾರೆ’ ಎಂದಿದ್ದಾರೆ ರವಿ ಸುಬ್ಬರಾವ್.

ರವಿ ಸುಬ್ಬರಾವ್ ಅವರು ತಮ್ಮ ರಿಯಲ್​ ಲೈಫ್​ನಲ್ಲಿ ನೋಡಿದ ಅನೇಕ ಘಟನೆಗಳನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ‘ಈ ಪಟ್ಟಣಕ್ಕೆ ಏನಾಗಿದೆ’ ಎಂಬ ಶೀರ್ಷಿಕೆ ಕೂಡ ಡಿಫರೆಂಟ್​ ಆಗಿದ್ದು, ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ರಾಧಿಕಾ ರಾಮ್ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅವರ ಪಾತ್ರ ತುಂಬ ಬೋಲ್ಡ್​ ಆಗಿದೆ. ಅನಿಲ್ ಸಿ.ಜೆ. ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಇದು ಸಿನಿಮಾದ ಮೊದಲ ಭಾಗವಾಗಿದ್ದು  ಈಗಾಗಲೆ ಇದು ಬಿಡುಗಡೆಗೆ ಸಿದ್ದವಾಗಿದೆ.

Village visit: ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಸಂತೋಷ್ ಲಾಡ್

Shivalinge gowda: ಹಾಸನ ಜಿ.ಪಂ. ಸಭಾಂಗಣದಲ್ಲಿ ಕೆಡಿಪಿ ಸಭೆ

Chandradrona hill: ಚಂದ್ರದ್ರೋಣ ಪ್ರವಾಸಕ್ಕೆ ನಿಷೇಧ ಹೇರಿದ ಜಿಲ್ಲಾಡಳಿತ

 

About The Author