Wednesday, September 3, 2025

Latest Posts

ಹಾಸನದಲ್ಲಿ ಶುಂಠಿ ಬೆಳೆಗೆ ರೋಗಬಾಧೆ

- Advertisement -

ಹಾಸನ ಜಿಲ್ಲೆಯ ಹಳೇಬೀಡು ಭಾಗದಲ್ಲಿ, ಶುಂಠಿ ಬೆಳೆಗೆ ರೋಗ ಹರಡುತ್ತಿದೆ. ಗಿಡಗಳಲ್ಲಿ ಬಿಳಿ ಸುಳಿ ಕಾಣಿಸಿಕೊಂಡಿದ್ದು, ಹಳದಿ ಬಣ್ಣಕ್ಕೆ ತಿರುಗಿ ಕೊಳೆಯುತ್ತಿವೆ. ಬೆಂಕಿ ಬೆಳೆ ರೋಗದಿಂದಲೂ ಶುಂಠಿ ಬೆಳೆ ಹಾಳಾಗ್ತಿದೆ.

ಸಾಲ ಮಾಡಿ ಶುಂಠಿ ಬೆಳೆ ಹಾಕಿದ್ದಾಯ್ತು. ಕೈ ತುಂಬಾ ಹಣ ಗಳಿಸಿ, ಕೃಷಿಯಿಂದಲೇ ಬದುಕು ಕಟ್ಟಿಕೊಳ್ಳಲು ಹೊರಟ ರೈತರು ಕಂಗಾಲಾಗಿದ್ದಾರೆ. ರಾಜಗೆರೆ ಗ್ರಾಮದ ರೈತರು ಸಾಲದ ಹೊರೆಯಲ್ಲಿ ಮುಳುಗಿದ್ದಾರೆ. ರೈತ ದೇವರಾಜು ಎಂಬುವವರ ಕೂಲಿ ಜೀವನ ಮಾಡಿ ಜೀವನ ಸಾಗಿಸುತ್ತಿದ್ರು. ಅವರಿಗೆ 1.5 ಎಕರೆ ಪಿತ್ರಾರ್ಜಿತ ಆಸ್ತಿ ಇದೆ. ಈಗ ಶುಂಠಿ ಬೆಳೆಗೆ ಕೈ ಹಾಕಿ ನಷ್ಟಕ್ಕೆ ಸಿಲುಕಿದ್ದಾರೆ.

ಶುಂಠಿ ಕೃಷಿ ಪರಿಪೂರ್ಣವಾಗಿ ಮುಗಿಯಲು ಒಂದು ವರ್ಷಕ್ಕಿಂತ, ಹೆಚ್ಚಿನ ಸಮಯ ಬೇಕಾಗುತ್ತದೆ. ಬಿತ್ತನೆಯಿಂದ ಕಟಾವು ಮುಗಿಯುವವರೆಗೆ ಬಿಡುವಿಲ್ಲದಂತೆ ಕೆಲಸ ಮಾಡಬೇಕಾಗುತ್ತದೆ. ಶುಂಠಿ ಗಡ್ಡೆ ಕಟ್ಟಲು ಅನುಕೂಲವಾಗುವಂತೆ ಬೆಡ್‌ ಮಾಡಿ ಬಿತ್ತನೆ ಮಾಡಬೇಕು. ಆಗಾಗ್ಗೆ ಗಿಡಗಳಿಗೆ ಮಣ್ಣು ಏರಿಸಬೇಕು. ಕಳೆಯನ್ನು ಹಾಗಾಗ್ಗೆ ತೆಗೆಸಬೇಕು. ಸಕಾಲಕ್ಕೆ ಗೊಬ್ಬರ ಹಾಕಿ ಔಷಧ ಸಿಂಪಡಣೆ ಮಾಡ್ಬೇಕು.

ಶುಂಠಿ ಪಸಲು ಕೈಗೆ ಬರುವ ವೇಳೆಗೆ 1 ಎಕರೆಗೆ 10 ಲಕ್ಷ ರೂ. ವೆಚ್ಚವಾಗುತ್ತದೆ. ದೇವರಾಜು ಎಂಬುವರು 25 ಗುಂಟೆಯಲ್ಲಿ ಶುಂಠಿ ಬೆಳೆ ಹಾಕಲು, 2 ಲಕ್ಷ ರೂ. ಸಾಲದ ಹೊರೆ ಹೊತಿದ್ದಾರಂತೆ. ಬೇರೆ ಹೊಲದಲ್ಲಿ ಬೀನ್ಸ್‌ ಬೆಳೆದಿದ್ರು. ಮಳೆ ಹೆಚ್ಚಾಗಿ ಕಾಯಿ ಕಟ್ಟಿದ ಬೀನ್ಸ್‌ ಕೊಳೆತು ಹೋಗಿದೆ. ಇದೀಗ ಶುಂಠಿ ಬೆಳೆ ಕೂಡ ಕೈಕೊಟ್ಟಿದ್ದು, ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

ಹಳೇಬೀಡು ಭಾಗದಲ್ಲಿ ಎಕರೆಗಟ್ಟಲೇ ಗುತ್ತಿಗೆ ಜಮೀನುಗಳಲ್ಲಿ, ಶುಂಠಿ ಬೆಳೆ ಬೆಳೆಯಲಾಗಿದೆ. 1 ಎಕರೆಗೆ 60ರಿಂದ 80 ಸಾವಿರದವರೆಗೆ ಹಣ ಕೊಟ್ಟು ಜಮೀನುಗಳನ್ನು ಗುತ್ತಿಗೆ ಪಡೆಯಲಾಗಿದೆ. ಒಬ್ಬೊಬ್ಬ ರೈತರು 3ರಿಂದ 4 ಎಕರೆವರೆಗೆ ಜಮೀನು ಗುತ್ತಿಗೆ ಪಡೆದಿದ್ದಾರೆ. ಆದ್ರೀಗ ಸಾಲದ ಹೊರೆಯಲ್ಲಿ ಮುಳುಗುವಂತಾಗಿದೆ. ಶೀಘ್ರವೇ ಶುಂಠಿ ಬೆಳೆ ಹಾನಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತರು ಆಗ್ರಹಿಸುತ್ತಿದ್ದಾರೆ.

ಇನ್ನು, ಶುಂಠಿ ಬೆಳೆಗೆ ರೋಗ ಹರಡಿದ ನಂತರ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಮೊದಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಲಹೆ ಕೊಟ್ಟಿದ್ದಾರೆ. ವ್ಯಾಕ್ಸಿನ್‌ ರೀತಿಯಲ್ಲಿ ಪ್ರಾಪಿರೋನೋಜಲ್‌ ಔಷಧ ಸಿಂಪಡಣೆ ಮಾಡ್ಬೇಕು. ಶುಂಠಿ ಬೆಳೆಗೆ ಗಾಳಿಯಿಂದ ರೋಗ ಹರಡುತ್ತಿದೆ. ಬೀಜದಿಂದಲೂ ರೋಗ ಹರಡುವ ಸಾಧ್ಯತೆ ಇದ್ದು, ರೈತರು ರೋಗ ರಹಿತ ಬೀಜ ಆಯ್ಕೆ ಮಾಡಬೇಕು. ಮಳೆ ಹಾಗೂ ಶೀತದ ವಾತಾವರಣದಲ್ಲಿ, ರೋಗ ವ್ಯಾಪಕವಾಗಿ ಹರಡುತ್ತದೆ.

ರೋಗ ಬಂದ ಹೊಲದಿಂದ ಹರಿಯುವ ನೀರಿನಿಂದಲೂ ರೋಗ ಬರುತ್ತದೆ. ಹೀಗಾಗಿ ರೋಗ ಕಡಿಮೆಯಾಗುವ‌ ತನಕ ಪರ್ಯಾಯ ಬೆಳೆಗೆ ಆದ್ಯತೆ ನೀಡುವಂತೆ, ರೈತರಿಗೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

- Advertisement -

Latest Posts

Don't Miss