Technology news:
ಏರ್ ಟೆಲ್ ಪೋಸ್ಟ್ ಪೇಡ್ ಇದೀಗ ಗ್ರಾಹಕರಿಗೆ ಹೊಸ ರೀತಿಯ ಯೋಜನೆಗಳನ್ನ ನೀಡಿದೆ. ಈ ಯೋಜನೆ ಮಿಸ್ ಮಾಡ್ಕೊಳ್ಳಲೇ ಬೇಡಿ.ಡಿಸ್ನಿ+ ಹಾಟ್ಸ್ಟಾರ್, ಅಮೆಜಾನ್ ಪ್ರೈಮ್ ಸೇರಿದಂತೆ ಕೆಲವೊಂದು ಓಟಿಟಿ ಚಂದಾದಾರಿಕೆಯನ್ನು ಉಚಿತವಾಗಿ ಏರ್ಟೆಲ್ ತನ್ನ ಪ್ಲಾನ್ನೊಂದಿಗೆ ನೀಡುತ್ತಿದೆ. ಇದರಲ್ಲಿ ಪ್ರಿಪೇಯ್ಡ್ಗಿಂತ ಪೋಸ್ಟ್ಪೇಯ್ಡ್ ಯೋಜನೆ ಎಲ್ಲರ ಗಮನ ಸೆಳೆಯುತ್ತಿದೆ.
1,599 ರೂ. ಯೋಜನೆ ಪ್ರಕಾರವಾಗಿ: ಒಂದು ತಿಂಗಳ ಯೋಜನೆ . 250GB ಯೊಂದಿಗೆ ಈ ಯೋಜನೆ ಇದೆ. ಇದರಲ್ಲಿ ಅನಿಯಮಿತ ವಾಯಿಸ್ ಕರೆ ಸೌಲಭ್ಯ , ದಿನಕ್ಕೆ 100 ಎಸ್ಎಮ್ಎಸ್ ಉಚಿತ ಇದೆ. ಇದರಲ್ಲಿ ಮೂರು ಓಟಿಟಿಗೆ ಪ್ರವೇಶ ನೀಡಲಾಗಿದೆ. 6 ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ, ಒಂದು ವರ್ಷದ ಡಿಸ್ನಿ+ ಹಾಟ್ಸ್ಟಾರ್ ಮತ್ತು ನೆಟ್ಫ್ಲಿಕ್ಸ್ ಒಂದು ತಿಂಗಳ ಉಚಿತ ಚಂದಾದಾರಿಕೆ ನೀಡುತ್ತದೆ ಎನ್ನಲಾಗಿದೆ.
1,199 ರೂ. ಯೋಜನೆ ಪ್ರಕಾರವಾಗಿ: ಈ ಯೋಜನೆ ಒಂದು ತಿಂಗಳದ್ದಾಗಿದ್ದು ಒಟ್ಟು 150GB ಯೊಂದಿಗೆ ಬರುತ್ತದೆ. ಇದರಲ್ಲಿ ಅನಿಯಮಿತ ವಾಯಿಸ್ ಕಾಲ್ ಸೌಲಭ್ಯ, ದಿನಕ್ಕೆ 100 ಎಸ್ಎಮ್ಎಸ್ ಉಚಿತ ಇದೆ. ಮೂರು ಓಟಿಟಿಗೆ ಪ್ರವೇಶ ನೀಡಲಾಗಿದೆ. 6 ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ, ಒಂದು ವರ್ಷದ ಡಿಸ್ನಿ+ ಹಾಟ್ಸ್ಟಾರ್ ಮತ್ತು ನೆಟ್ಫ್ಲಿಕ್ಸ್ ಒಂದು ತಿಂಗಳ ಉಚಿತ ಚಂದಾದಾರಿಕೆ ನೀಡಲಾಗಿದೆ.
999 ರೂ. ಯೋಜನೆ ಪ್ರಕಾರವಾಗಿ: ಈ ಯೋಜನೆ ಒಂದು ತಿಂಗಳದ್ದಾಗಿದ್ದು ಒಟ್ಟು 100GB ಯೊಂದಿಗೆ ಇದೆ. ಇದರಲ್ಲಿ ಅನಿಯಮಿತ ವಾಯಿಸ್ ಕರೆ ಸೌಲಭ್ಯ, ದಿನಕ್ಕೆ 100 ಎಸ್ಎಮ್ಎಸ್ ಉಚಿತ ಇದೆ. ಅಷ್ಟೇ ಅಲ್ಲದೆ 6 ತಿಂಗಳ ಅಮೆಜಾನ್ ಪ್ರೈಮ್ ಮತ್ತು ಒಂದು ವರ್ಷದ ಡಿಸ್ನಿ+ ಹಾಟ್ಸ್ಟಾರ್ ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗಿದೆ.
499 ರೂ. ಯೋಜನೆ ಪ್ರಕಾರವಾಗಿ : ಈ ಯೋಜನೆ ಒಂದು ತಿಂಗಳದ್ದಾಗಿದ್ದು ಒಟ್ಟು 75GB ಯೊಂದಿಗೆ ಬರುತ್ತದೆ. ಇದರಲ್ಲಿ ಅನಿಯಮಿತ ವಾಯಿಸ್ ಕರೆ ಸೌಲಭ್ಯ, ದಿನಕ್ಕೆ 100 ಎಸ್ಎಮ್ಎಸ್ ಉಚಿತ ಇದೆ. ಅಷ್ಟೇ ಅಲ್ಲದೆ 6 ತಿಂಗಳ ಅಮೆಜಾನ್ ಪ್ರೈಮ್ ಮತ್ತು ಒಂದು ವರ್ಷದ ಡಿಸ್ನಿ+ ಹಾಟ್ಸ್ಟಾರ್ ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗಿದೆ.
ಹಿಂದುಳಿದ ವಿದ್ಯಾರ್ಥಿಗಳೇ ಗಮನಿಸಿ: ಅರಿವು ಶೈಕ್ಷಣಿಕ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ