Saturday, December 21, 2024

Latest Posts

ಜಿಲ್ಲಾ ಉಸ್ತುವಾರಿ ಸಚಿವರಿಂದ ಕೊವಿಡ್-19 ಪರಿಸ್ಥಿತಿ ಕುರಿತು ನಿರಂತರ ಮಾಹಿತಿ

- Advertisement -

ಕರ್ನಾಟಕ ಟಿವಿ : ಕೊವಿಡ್-19 ವೈರಾಣು ಸೋಂಕು ತಡೆಗೆ ದೇಶಾದ್ಯಂತ ಪ್ರಧಾನಿಗಳು ಲಾಕ್ ಡೌನ್ ಘೊಷಿಸಿದ್ದು. ಈ ಹಿನ್ನೆಲೆಯಲ್ಲಿ ರಾಜ್ಯದ ವಿಜಯಪುರ, ಗದಗ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ಇರುವ ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಸಿ.ಸಿ.ಪಾಟೀಲ ಅವರು ವಿಡಿಯೋ ತಂತ್ರಜ್ಞಾನ ಬಳಸಿ ವಿಜಯಪುರ, ಗದಗ ಜಿಲ್ಲೆಗಳಲ್ಲಿ ಕೊವಿಡ್-19 ನಿಯಂತ್ರಣ ಕುರಿತಂತೆ ಸತತ ನಿಗಾವಹಿಸಿದ್ದಾರೆ.

 ವಿಡಿಯೋ ಕಾನ್ಫರೆನ್ಸ್ ಮೂಲಕ ವಿಜಯಪುರ, ಗದಗ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿ.ಪಂ. ಸಿಇಓ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಜೊತೆ ದಿನವೂ ಎರಡು ಬಾರಿ ನಿಯಮಿತವಾಗಿ ಹಾಗೂ ಅಗತ್ಯ ಇರುವ ಸಂದರ್ಭದಲ್ಲಿ ತಾಲೂಕ್ ಮಟ್ಟದಲ್ಲಿ ತಹಶೀಲ್ದಾರ ಮತ್ತು ತಾಲೂಕ್ ಆರೋಗ್ಯಾಧಿಕಾರಿಗಳೊಂದಿಗೆ ಕೊವಿಡ್-19 ಪರಿಸ್ಥಿತಿ ಮಾಹಿತಿ ಪಡೆದು ಅಗತ್ಯದ ಸಲಹೆ, ಸೂಚನೆ ಹಾಗೂ ನಿರ್ದೇಶನ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರತಿಬಂಧಕಾಜ್ಞೆ ಪಾಲನೆ, ವಿದೇಶದಿಂದ ಹಾಗೂ ಕೋವಿಡ್-19 ಬಾಧಕ ಪ್ರದೇಶಗಳಿಂದ ಜಿಲ್ಲೆಗಳಿಗೆ ಆಗಮಿಸಿದವರ ಕುರಿತು ನಿರಂತರ ನಿಗಾ ವಹಿಸುವಿಕೆ, ನಗರ ನಗರ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ, ಕೊವಿಡ್ ಸೋಂಕು ತಡೆಯಲು ಜನ ಕೈಕೊಳಬೇಕಾದ ಕ್ರಮಗಳ ಕುರಿತು ಜಾಗೃತಿ, ಜನತೆ ಸದಾ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆಗೆ ಅವರಿಗೆ, ದಿನಸಿ, ಆವಶ್ಯಕ ವಸ್ತುಗಳ ಒದಗುವಿಕೆ, ರೈತರ ಬೆಳೆ ಮಾರಾಟಕ್ಕೆ ಅಗತ್ಯದ ಕ್ರಮ, ಬಡ ಮತ್ತು ಹೊರ ರಾಜ್ಯಗಳ ವಲಸೆ ಕಾರ್ಮಿಕರಿಗೆ ಅಗತ್ಯ ಅನುಕೂಲ ಆಹಾರ ಕಲ್ಪಿಸುವಿಕೆ, ಮುಂತಾದವುಗಳ ಕುರಿತು ಸಚಿವರು ಮಾಹಿತಿ ಪಡೆದು ಅಗತ್ಯದ ಸಲಹೆ ನಿರ್ದೇಶನ ನೀಡುತಿದ್ದಾರೆ.

- Advertisement -

Latest Posts

Don't Miss