Friday, April 18, 2025

Latest Posts

ಕಟ್ಟಡ ಕಾರ್ಮಿಕರಿಗೆ ಆರೋಗ್ಯ ಕಿಟ್ ವಿತರಣೆ

- Advertisement -

www.karnatakatv.net :ಗುಂಡ್ಲುಪೇಟೆ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಇಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಶಾಸಕ ನಿರಂಜನ್ ಕುಮಾರ್ ಆರೋಗ್ಯ ಕಿಟ್ ವಿತರಿಸಿದರು.

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮಂಡಳಿ ವತಿಯಿಂದ ಇಂದು ಕಟ್ಟಡ ಕಾರ್ಮಿಕರಿಗೆ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಆರೋಗ್ಯ ಕಿಟ್ ವಿತರಿಸಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಯಲ್ಲಿ ಈ ಕಾರ್ಯಕ್ರಮದಲ್ಲಿ ಕಿಟ್ ವಿತರಣೆ ಬಳಿಕ ಮಾತನಾಡಿದ ಶಾಸಕ ನಿರಂಜನ್, ಕಾರ್ಮಿಕ ಇಲಾಖೆ ವತಿಯಿಂದ ಅಸಂಘಟಿತ ಕಾರ್ಮಿಕರಿಗೆ ಲಭ್ಯವಿರುವ ಸವಲತ್ತುಗಳ ಕುರಿತು ಅರಿವು ಮೂಡಿಸಬೇಕಿದೆ. ಇದರಿಂದ ಸರ್ಕಾರದ ಯೋಜನೆಗಳು ಬಡ ಕಾರ್ಮಿಕರಿಗೆ ಸುಲಭವಾಗಿ ತಲುಪುತ್ತವೆ, ಇದಲ್ಲದೆ ಇಲಾಖೆಯಿಂದ ಕಾರ್ಮಿಕರ ಕುಟುಂಬ ವರ್ಗಕ್ಕೂ ಸಹಕಾರಿಯಾಗಲಿದೆ.  ಈ ನಿಟ್ಟಿನಲ್ಲಿ ಕಾರ್ಮಿಕರು ತಪ್ಪದೇ ನೋಂದಣಿ  ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ಶಿವನಾಗಪ್ಪ, ಉಪಾಧ್ಯಕ್ಷೆ ರತ್ನಮ್ಮ, ಸದಸ್ಯರು, ಪುರಸಭಾ ಅಧ್ಯಕ್ಷ ಪಿ.ಗಿರೀಶ್, ನಿಟ್ರೆ ನಾಗರಾಜಪ್ಪ ಹಾಗೂ ಮಾಜಿ ಅಧ್ಯಕ್ಷರುಗಳಾದ ಶಿವಮಾದಪ್ಪ, ಮೃತ್ಯುಂಜಯ, ಪ್ರಭುಸ್ವಾಮಿ, ಇತರರು ಹಾಜರಿದ್ದರು.

ಕರ್ನಾಟಕ ಟಿವಿ- ಗುಂಡ್ಲುಪೇಟೆ

- Advertisement -

Latest Posts

Don't Miss