Thursday, May 30, 2024

Latest Posts

Divorce case: ಕುರ್‌ಕುರೆ ತಂದುಕೊಟ್ಟಿಲ್ಲವೆಂದು ಪತಿಗೆ ಡಿವೋರ್ಸ್ ಕೊಡಲು ರೆಡಿಯಾದ ಪತ್ನಿ

- Advertisement -

National News: ಪತಿ ಕುಡಿದು ಬಂದು ಕಿರುಕುಳ ನೀಡುತ್ತಾನೆ, ವರದಕ್ಷಿಣೆಗಾಗಿ ಪೀಡಿಸುತ್ತಾನೆ, ಬೇರೆ ಹೆಣ್ಣಿನ ಸಹವಾಸ ಮಾಡಿದ್ದಾನೆ. ಹೀಗೆ ಕಾರಣ ಹೇಳಿ ಡಿವೋರ್ಸ್ ಕೊಟ್ಟರೆ ಒಪ್ಪಬಹುದು. ಆದರೆ ಇಲ್ಲೋರ್ವ ಪುಣ್ಯಾತ್‌ಗಿತ್ತಿ ಪತಿ ಕುರ್‌ಕುರೆ ತಂದಿಲ್ಲವೆಂದು ಡಿವೋರ್ಸ್ ಕೊಡಲು ಹೊರಟಿದ್ದಾಳೆ.

ಉತ್ತರಪ್ರದೇಶದ ಆಗ್ರಾದಲ್ಲಿ ಈ ಘಟನೆ ನಡೆದಿದ್ದು, ಪತಿ 5 ರೂಪಾಯಿ ಬೆಲೆ ಬಾಳುವ ಕುರ್‌ಕುರೆ ತರಲಿಲ್ಲವೆಂದು ಪತಿಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಲ್ಲದೇ, ಪತಿಗೆ ಡಿವೋರ್ಸ್ ಕೊಡಲು ಮುಂದಾಗಿದ್ದಾಳೆ. ಈ ಕಾರಣಕ್ಕಾಗಿ ಆಕೆ ಒಂದೂವರೆ ತಿಂಗಳಿನಿಂದ ತಾಯಿಯ ಮನೆಯಲ್ಲಿದ್ದಾಳೆ.

ಇವರಿಬ್ಬರು 2023ರಲ್ಲಿ ವಿವಾಹವಾಗಿದ್ದರು. ಬೆಳ್ಳಿ ವ್ಯಾಪಾರಿಯಾಗಿದ್ದ ಪತಿ ಪತ್ನಿಯ ಪ್‌ರತೀ ಆದ್ಯತೆಗೂ ಗಮನ ಕೊಡುತ್ತಿದ್ದ. ಆದರೆ ಪತ್ನಿ ಆರೋಪ ಮಾಡುವುದೇನೆಂದರೆ, ನನಗೆ ಪತಿ ಹೊಡೆದಿದ್ದಾನೆ. ಅದಕ್ಕಾಗಿ ನಾನು ಅವನನ್ನು ಬಿಡಲು ನಿರ್ಧರಿಸಿದ್ದೇನೆ ಎಂದಿದ್ದಾರೆ. ಆದರೆ ಪತಿ, ನಾನು ಅವಳಿಗೆ ಹೊಡೆದಿಲ್ಲ. ಕುರ್‌ಕುರೆ ತಂದುಕೊಡದ ಕಾರಣ, ಆಕೆ ಜಗಳ ಮಾಡಿಕೊಂಡು ತವರು ಮನೆ ಸೇರಿದ್ದಾಳೆಂದು ಹೇಳಿದ್ದಾನೆ. ಸದ್ಯ ಈ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಪತಿ ಪತ್ನಿಯನ್ನು ಒಂದುಗೂಡಿಸಲು ಪ್ರಯತ್ನ ನಡೆಯುತ್ತಿದೆ.

ಕಿಡ್ನ್ಯಾಪ್‌ ಕೇಸ್ : ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಜಾಮೀನು ಮಂಜೂರು

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಅಧೋಗತಿಗೆ ಇಳಿದಿದೆ: ಪ್ರೀತಂಗೌಡ

ನಮ್ಮ ಶಾಸಕರು ಯಾರೂ ಮಾರಾಟವಾಗಲು ತಯಾರಿಲ್ಲ, ಆಪರೇಶನ್ ಕಮಲ ಬಿಜೆಪಿಯ ಹಗಲುಗನಸು: ಸಿಎಂ ಸಿದ್ದರಾಮಯ್ಯ

- Advertisement -

Latest Posts

Don't Miss