ಹಲವು ಸಂಕ್ರಮಣಗಳು ಉರುಳಿದರೂ ಸಂಪುಟ ಪುನಾರಚನೆಗೆ ಹಿಡಿದ ‘ಗ್ರಹಣ’ ಬಿಟ್ಟಿಲ್ಲ. ದಾವೋಸ್ ಆರ್ಥಿಕ ಶೃಂಗಸಭೆ ಮುಗಿಸಿ ಇಂದು ಬೆಂಗಳೂರಿಗೆ ಮರಳುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದಿನ ರಾಜಕೀಯ ನಡೆ ಏನು ಎಂಬುದು ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಸಂಪುಟ ಪುನಾರಚನೆ ಹಾಗೂ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ತಣ್ಣಗಾಗದ ನಡುವೆಯೇ, ಡಿಕೆಶಿ ವಾಪಸಾತಿಯ ಬಳಿಕ ಹೊಸ ರಾಜಕೀಯ ದಾಳ ಉರುಳಿಸುವ ಸಾಧ್ಯತೆ ಬಗ್ಗೆ ಪಕ್ಷದೊಳಗೆ ಚರ್ಚೆ ಜೋರಾಗಿದೆ. ಸಂಪುಟ ಪುನಾರಚನೆ ವಿಳಂಬವಾಗಿರುವುದು ಡಿಸಿಎಂ ಪಾಲಿಗೆ ತಾತ್ಕಾಲಿಕ ನೆಮ್ಮದಿ ನೀಡಿದ್ದರೆ, ನಾಯಕತ್ವ ಬದಲಾವಣೆ ಕುರಿತ ಊಹಾಪೋಹಗಳು ಸಿಎಂ ಪಾಳೆಯಕ್ಕೂ ಸಂತಸ ತಂದಿದೆ.
ಆದರೆ, ದಾವೋಸ್ ಪ್ರವಾಸದ ಅವಧಿಯಲ್ಲಿಯೂ ಡಿಕೆಶಿ ‘ನಾಯಕತ್ವ’ ಮತ್ತು ‘ನಂಬಿಕೆ’ಯ ಮಾತುಗಳನ್ನಾಡಿರುವುದು ರಾಜಕೀಯ ಅರ್ಥಕಥನಗಳಿಗೆ ಕಾರಣವಾಗಿದೆ. ಹಾಗಾದ್ರೆ ಡಿಕೆಶಿ ಹೊಸ ದಾಳಕ್ಕೆ ಸಿದ್ಧತೆ ನಡೆಸಿದ್ದಾರೆ? ಅನ್ನೋ ಪ್ರಶ್ನೆ ಮೂಡಿದೆ. ಯಾವಾಗಲೂ ನಂಬಿಕೆ, ವಿಶ್ವಾಸವಿದೆ. ನಾನು ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸುವವನು. ಕಠಿಣ ಪರಿಶ್ರಮ ಯಾವಾಗಲೂ ತಳಹದಿ. ಅದರಲ್ಲಿ ನಂಬಿಕೆ ಇಟ್ಟಿದ್ದೇನೆ’ ಎಂದಿದ್ದಾರೆ.
ಅಲ್ಲದೆ, ಪಕ್ಷ ತೀರ್ಮಾನ ಕೈಗೊಳ್ಳುತ್ತದೆ. ನಮ್ಮೆಲ್ಲರ ನಡುವೆ ನಡೆದಿರುವ ಒಪ್ಪಂದ. ಮಾಧ್ಯಮದ ಮುಂದೆ ಮಾತನನಾಡಲ್ ಎಂದೂ ಹೇಳಿದ್ದಾರೆ. ಚಂದ್ರನ ಬೆಳದಿಂಗಳು.. ಯಶಸ್ಸು.. ಅತ್ತ ಅಣ್ಣ ದಾವೋಸ್‌ನತ್ತ ತೆರಳುತ್ತಿದ್ದಂತೆ ಇತ್ತ ತಮ್ಮ ಡಿ.ಕೆ. ಸುರೇಶ್ ಅವರು ‘ಅಣ್ಣನ ಹಣೆಯಲ್ಲಿ ಬರೆದಿದ್ದರೆ ಸಿಎಂ ಆಗುತ್ತಾರೆ. ಮಾತು ಕೊಟ್ಟಿದ್ದೀರಿ, ಅಧಿಕಾರ ಬಿಟ್ಟುಕೊಡಿ ಎಂದು ಕೇಳುವುದು ಕಷ್ಟ ರಾಜಕೀಯದಲ್ಲಿ ಅಧಿಕಾರ, ತಾಳ್ಮೆ ಎರಡೂ ಶಾಶ್ವತವಲ್ಲ’ ಎಂದಿದ್ದರು.
ಶನಿವಾರ ತಮ್ಮ ‘ಎಕ್ಸ್’ ಖಾತೆಯಲ್ಲಿ ಮತ್ತೊಂದು ಪೋಸ್ಟ್ ಹಾಕಿರುವ ಸುರೇಶ್, ‘ಪ್ರಯತ್ನವೆಂಬ ಚಂದ್ರನನ್ನು ಬೆಳಗಿಸಿದರೆ ಯಶಸ್ಸೆಂಬ ಬೆಳದಿಂಗಳು ಸಿಗುತ್ತದೆ’ ಎನ್ನುವ ಮೂಲಕ ಹೊಸ ಕುತೂಹಲ ಹುಟ್ಟಿಸಿದ್ದಾರೆ. ಇನ್ನು ಶುಕ್ರವಾರ, ತಾಳೆ ಅಸಹಾಯಕತೆ ಎಂದುಕೊಳ್ಳಬಾರದು, ತಾಳ್ಮೆಯ ಹಿಂದಿನ ತಯಾರಿ ಬಹಳ ಗಟ್ಟಿಯಾಗಿ ರುತ್ತದೆ ಎಂದು ಮಾರ್ಮಿ ಕವಾಗಿ ಪೋಸ್ಟ್ ಹಾಕಿದ್ದರು. ಇನ್ನು ಡಿಸಿಎಂ ಬೆಂಗಳೂರಿಗೆ ಬಂದ ಬಳಿಕ ಪ್ರವಾಸ ಬಗ್ಗೆ ವಿಷಯ ಹಂಚಿಕೊಳ್ಳಲಿದ್ದಾರೆ. ಈ ವೇಳೆ ಅಧಿಕಾರದ ಬಗ್ಗೆ ಹೊಸ ರಾಜಕೀಯ ದಾಳ ಉರುಳಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.



