ಹೆಬ್ಬಾಳದ ಹೊಸ ಫ್ಲೈ ಓವರ್ ಮೇಲೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಓಡಿಸಿದ ಸ್ಕೂಟರ್ ಮೇಲೆ ಬರೋಬ್ಬರಿ ₹18,500 ರೂಪಾಯಿ ದಂಡ ವಿಧಿಸಲಾಗಿದೆ. ಆಗಸ್ಟ್ 5ರಂದು ಡಿಸಿಎ ಹೆಬ್ಬಾಳದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಫ್ಲೈಓವರ್ ವೀಕ್ಷಣೆಗೆ ಬಂದಿದ್ದರು.
ಅವರು BDA ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸುತ್ತಾ, ತಮ್ಮನ್ನು ಗುರುತಿಸದಂತೆ ಹೆಲ್ಮೆಟ್, ಕಪ್ಪು ಗ್ಲಾಸ್ ಧರಿಸಿ ಸವಾರಿ ಹೊರಟರು. ಒಂದು ಡಿಯೋ ಸ್ಕೂಟರ್‌ನಲ್ಲಿ ಫ್ಲೈಓವರ್ ಮೇಲಿನ ರಸ್ತೆ ಪರಿಶೀಲನೆಗಾಗಿ ಒಂದು ರೌಂಡ್ ಹೋಗಿ ಬಂದು ಎಲ್ಲರ ಗಮನ ಸೆಳೆದಿದ್ದಾರೆ.
ಆದರೆ ಈ ಸ್ಕೂಟರ್‌ನ ನಂಬರಿನಿಂದ ಒಂದು ಸುದ್ದಿಯಾಗಿದೆ. ಡಿಕೆ ಶಿವಕುಮಾರ್ ಅವರು ಬಳಸಿದ ಡಿಯೋ ಸ್ಕೂಟರ್‌ನ ನೋಂದಣಿ ಸಂಖ್ಯೆ KA04JZ2087. ಈ ಸ್ಕೂಟರ್ ಮೇಲೆ ಈಗಾಗಲೇ 34 ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆಯ ದಾಖಲೆಗಳಿವೆ. ಒಟ್ಟು ₹18,500 ದಂಡ ವಿಧಿಸಲಾಗಿದೆ.
ಈ ಹಿಂದೆ ಇದೇ ಸ್ಕೂಟರ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಇದರ ಮಾಲೀಕ ಪದೇ ಪದೇ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದ. ಅದರ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆದ್ರೆ, ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ಡಿಯೋ ಸ್ಕೂಟರ್ ಮೇಲೆ ಡಿಕೆ ಶಿವಕುಮಾರ್ ಅವರು ರೌಂಡ್ಸ್ ಹಾಕಿದ್ದಾರೆ. ಇದನ್ನೇ ಈಗ DK ಶಿವಕುಮಾರ್ ಅವರು ಬಳಸಿದ ಕಾರಣದಿಂದಾಗಿ ಇದು ಸುದ್ದಿಗೆ ಕಾರಣವಾಗಿದೆ.