DK Shivakumar: ಪಂಚಾಯ್ತಿ ಮತ್ತು ಪಾಲಿಕೆ ಚುನಾವಣೆಗೆ ತಯಾರಾಗಿ

ಬೆಂಗಳೂರು: ನಮ್ಮ ಮುಂದಿನ ಸವಾಲು ಜಿಲ್ಲಾ, ತಾಲೂಕು ಪಂಚಾಯ್ತಿ ಹಾಗೂ ಪಾಲಿಕೆ ಚುನಾವಣೆ. ಪಾಲಿಕೆ ಚುನಾವಣೆ ವಿಚಾರದಲ್ಲಿ ನಿನ್ನೆ ನ್ಯಾಯಾಲಯದ ಅವಧಿ ಮುಗಿದಿದೆ. ಈ ವಿಚಾರವಾಗಿ ನಾವು ಸಹಿ ಮಾಡಿದ್ದೇವೆ. ಬಿಜೆಪಿ ಸರ್ಕಾರ 243 ವಾರ್ಡ್ ಗಳನ್ನು ಮಾಡಿದ್ದು, ಕಾನೂನು ರೀತಿಯ ವ್ಯತ್ಯಾಸಗಳಿದ್ದವು. ನಾವು ಅದನ್ನು ಸರಿ ಮಾಡಲಿದ್ದೇವೆ. ಇದಕ್ಕಾಗಿ ಪ್ರತ್ಯೇಕ ಸಮಿತಿ ರಚಿಸಿದ್ದೇವೆ. 225 ವಾರ್ಡ್ ರಚನೆಗೆ ತೀರ್ಮಾನ ಮಾಡಲಾಗಿದೆ.

ಮುಂದಿನ ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು. ನಂತರ ಅದನ್ನು ನ್ಯಾಯಾಲಯಕ್ಕೆ ನೀಡುತ್ತೇವೆ. ನಾವು ಯಾವುದೇ ಕ್ಷಣದಲ್ಲಿ ಚುನಾವಣೆ ಬಂದರೂ ಎದುರಿಸಲು ಸಿದ್ಧರಿರಬೇಕು.ಇನ್ನು ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ವಿಚಾರವಾಗಿ ನಾವು ಪ್ರಿಯಾಂಕ ಖರ್ಗೆ ಅವರಿಗೆ ಹೇಳಿದ್ದು, ಅವರು ಕೂಡ ಸಮಿತಿ ರಚನೆ ಮಾಡಿದ್ದಾರೆ. ಈ ಎರಡೂ ಚುನಾವಣೆಗಳಿಗೆ ನ್ಯಾಯಾಲ ಅನುಮತಿ ನೀಡಿದರೆ ನಾವು ಚುನಾವಣೆ ಮಾಡಲು ಸಿದ್ಧ. ಇದರಿಂದ ಹಿಂದೆಸರಿಯುವ ಪ್ರಶ್ನೆ ಇಲ್ಲ.

ರಾಜೀವ್ ಗಾಂಧಿ ಅವರು 74ನೇ ತಿದ್ದುಪಡಿ ಮೂಲಕ ನೀಡಿರುವ ಮಾರ್ಗದರ್ಶನದಂತೆ ನಾವು ನಡೆಯುತ್ತೇವೆ. ಕೆಲವರು ಸಂಸತ್ ಚುನಾವಣೆ ನಂತರ ಈ ಚುನಾವಣೆ ಮಾಡಿ ಎಂದು ಸಲಹೆ ನೀಡುತ್ತಿದ್ದಾರೆ. ಆದರೆ ನಾವು ಮಾತ್ರ ನ್ಯಾಯಾಲಯದ ಅನುಮತಿ ಸಿಕ್ಕರೆ ಚುನಾವಣೆ ಮಾಡುತ್ತೇವೆ. ನೀವು ನಿಮ್ಮ ವಾರ್ಡ್ ಹಾಗೂ ಬ್ಲಾಕ್ ಗಳಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು.

Rules : ಮಣಿಪಾಲದಲ್ಲಿ ವಾರಾಂತ್ಯ ಪಬ್, ಕ್ಲಬ್ ಗಳಿಗೆ ಕಟ್ಟುನಿಟ್ಟಿನ ಕ್ರಮ ಜಾರಿ

Cow : ಕೆಸರಿನಲ್ಲಿ ಹೂತುಹೋಗಿದ್ದ ಹಸುವನ್ನು ರಕ್ಷಿಸಿದ ಬೈಕ್ ಸವಾರರು..!

Congress Leader : ಕಾಂಗ್ರೆಸ್ ಮುಖಂಡನ ಸಾವು, ಹತ್ಯೆ ಶಂಕೆ..?!

About The Author