Friday, August 29, 2025

Latest Posts

ಮಾಧ್ಯಮ ಸ್ನೇಹಿತರು ಏನೇನೋ ಸೃಷ್ಟಿ ಮಾಡಿದ್ದಿರಿ – ಡಿಕೆ ಶಿವಕುಮಾರ್

- Advertisement -

‘ನಾನು ಪಕ್ಷದ ಅಧ್ಯಕ್ಷನಾಗಬೇಕು ಅಂತಾ ಎಂ.ಬಿ ಪಾಟೀಲ್ ಸೇರಿದಂತೆ ಎಲ್ಲ ನಾಯಕರು ಸೂಚಿಸಿದ್ದಾರೆ. ಪಕ್ಷದ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ’ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ಸದಾಶಿವನಗರದಲ್ಲಿರುವ ಎಂಬಿ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಉಭಯ ನಾಯಕರು ಮಾಧ್ಯಮಗಳ ಮುಂದೆ ಮಾತನಾಡಿದರು. ಈ ವೇಳೆ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು…

‘ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ರಾಜ್ಯಕ್ಕೆ ವೀಕ್ಷಕರು ಆಗಮಿಸಿದ್ದರು. ನನಗೆ ಗೊತ್ತಿಲ್ಲದೆ ಎಂ.ಬಿ ಪಾಟೀಲ್ ಸೇರಿದಂತೆ ಶೇ.99ರಷ್ಟು ಭಾಗ ಬಹುತೇಕ ಎಲ್ಲರೂ ಡಿಕೆ ಶಿವಕುಮಾರ್ ಅಧ್ಯಕ್ಷರಾಗಬೇಕು ಎಂದು ಸೂಚಿಸಿದ್ದಾರೆ. ಇದು ಸತ್ಯ.

ಮಾಧ್ಯಮ ಸ್ನೇಹಿತರು ಏನೇನೋ ಸೃಷ್ಟಿ ಮಾಡಿದ್ದಿರಿ. ನಮ್ಮಲ್ಲಿ ಯಾವುದೇ ರೀತಿಯ ಸ್ಪರ್ಧೆ, ಭಿನ್ನಾಭಿಪ್ರಾಯ ಇರಲಿಲ್ಲ. ಪಾಪ ನಿಮಗೆ ಯಾರೋ ಮಾಹಿತಿ ನೀಡಿದ್ದಾರೆ ಅಂತಾ ನೀವು ಸುದ್ದಿ ಮಾಡಿದ್ದೀರಿ. ಈ ಊಹಾಪೋಹಗಳಿಗೆ ಸೂಕ್ತ ಕಾಲದಲ್ಲಿ ತೆರೆ ಎಳೆಯಬೇಕು ಎಂಬುದು ನಮ್ಮ ಅಭಿಪ್ರಾಯ. ಹೀಗಾಗಿಯೇ ಇವತ್ತು ಈ ಬಗ್ಗೆ ಮಾತನಾಡುತ್ತಿದ್ದೇವೆ.

ನಮ್ಮಲ್ಲಿ ಯಾವುದೇ ವ್ಯಕ್ತಿಗತ ವಿಚಾರವಿಲ್ಲ. ಸಿದ್ಧಾಂತದ ಆಧಾರದ ಮೇಲೆ ನಾವು ಪಕ್ಷದಲ್ಲಿ ಇದ್ದೇವೆ. ಅವರ ತಂದೆ ಇದ್ದಾಗ ನಾನು ಶಾಸಕನಾಗಿದ್ದೆ. ಆನಂತರ ಅವರು ಶಾಸಕರಾಗಿ ದೊಡ್ದ ಜವಾಬ್ದಾರಿ ಅಲಂಕರಿಸಿದ್ದಾರೆ. ನಾವು ತೆಗೆದುಕೊಂಡಿದ್ದೇವೆ.

ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು, ಜನರ ಭಾವನೆಗೆ ತಕ್ಕಂತೆ ರಾಜ್ಯವನ್ನು ಅಭಿವೃದ್ಧಿಯತ್ತ ನಡೆಸುವುದು ನಮ್ಮ ಗುರಿ.’ ಎಂದು ಡಿಕೆ ಶಿವಕುಮಾರ್ ಹೇಳಿದ್ರು.

https://www.youtube.com/watch?v=yLqaB7qKwag
- Advertisement -

Latest Posts

Don't Miss