ನಾವು ಜೆಡಿಎಸ್ ಪಕ್ಷದವರಿಗೆ ಈ ಹಿಂದೆ ಎಲ್ಲಾ ಸಪೋರ್ಟ್ ಮಾಡಿದ್ದೀವಿ, ಈಗಲೂ ಕೂಡ ಅವರಿಗೆ ಕೈ ಮುಗಿದು ಕೇಳಿದ್ದೇವೆ. ನಮ್ಮ ಎಸಿಸಿ ಮುಖಂಡರು ಹಾಗೂ ರೆಹಮಾನ್ ಸಹೇಬ್ರು ಕೂಡಾ ಹೋಗಿ ಕೇಳಿದ್ದಾರೆ. ಕೊನೆಗೆ ನೀವು ಇಂಡಿಪೆಂಡೆಂಟ್ ಅಗಿ ಹಾಕಿ, ನಾನು ಬೇಕಾದ್ರು ಇಂಡಿಪೆಂಡೆಂಟ್ ಆಗಿ ಹಾಕ್ತೀವಿ ಅಂತನೂ ಹೇಳಿದ್ವಿ. ಆದರೆ ಇವತ್ತು ಜೆಡಿಎಸ್ ಅವರ ಬಾಯಲ್ಲಿ ಏನೇನು ಪದಗಳ ನುಡಿಮುತ್ತು ಬಂದಿದೆ. ಅದಕ್ಕೆ ಸಾಕ್ಷಿಗಳು ಕೂಡ ಇದ್ದಾವೆ. ನಾವೇನು ಹೇಳಬೇಕಾಗಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.
ಇವತ್ತು ನಮ್ಮ ಪಕ್ಷದಲ್ಲಿ ನಾವೇಲ್ಲಾ ಕೂತು ಚರ್ಚೆ ಮಾಡಿ ಮಂಡ್ಯದ ಯುವಕ, ವಿದ್ಯಾವಂತ ಮನ್ಸೂರ್ ಖಾನ್ ಅವರಿಗ ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ. ಜೆಡಿಎಸ್ ಪಕ್ಷ ಜಾತ್ಯತೀತ ತತ್ವ ಉಳಿಸಿಕೊಳ್ಳಬೇಕು ಎನ್ನುವ ಆಸೆ ನಮಗೆ ಇದೆ. ದಯವಿಟ್ಟು ನಾವು ಹಳೆಯ ಎಲ್ಲಾ ವಿಷಯಗಳನ್ನು ಮರೆಯೋಣ ಎಂದು ಡಿಕೆ ಶಿವಕುಮಾರ್ ನಮೃತೆಯಿಂದ ಕೈಮುಗಿದು ಜೆಡಿಎಸ್ ಪಕ್ಷವನ್ನು ಬೇಡಿಕೊಂಡರು.