ಡಿ.ಕೆ ಶಿವಕಮಾರ್ 2 ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎಂದ ಆರ್. ಅಶೋಕ್ ಹೇಳಿದ್ದಾರೆ. ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ಪೂರೈಸಿರುವ ಬಗ್ಗೆ ಪತ್ರಿಕೆಗಳ ಜಾಹೀರಾತಿನಲ್ಲಿ ಮುಖ್ಯಮಂತ್ರಿ ಫೋಟೋ ಇದೆ. ಡಿಸಿಎಂ ಫೋಟೋ ಇಲ್ಲ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್. ಕೆಲಸ ಒಬ್ಬರದು, ಲಾಭ ಇನ್ನೊಬ್ಬರದು ಎಂದು ಹೇಳಿರುವುದನ್ನು ನೋಡಿದರೆ ಕೆಲಸ ನನ್ನದು, ಓಸಿಯಾಗಿ ಸಿಎಂ ಆಗಿರುವುದು ನೀವು ಎಂದು ಸಿದ್ಧರಾಮಯ್ಯ ಅವರಿಗೆ ಹೇಳಿದಂತಿದೆ ಎಂದಿದ್ದಾರೆ.
ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಕುರ್ಚಿಗಾಗಿ ದೆಹಲಿ ಓಡಾಡ್ತಿರುವುದರಿಂದ ಆಡಳಿತದತ್ತ ಯಾರಿಗೂ ಗಮನವಿಲ್ಲ, ಇದರಿಂದಲೇ ಅಪರಾಧ ಪ್ರಕರಣಗಳು ಏರಿಕೆಯಾಗಿದೆ ಎಂದು ಅಶೋಕ್ ಆರೋಪಿಸಿದರು. ರಸ್ತೆ ಗುಂಡಿಗಳು ಮುಚ್ಚದಿದ್ದರೂ ದರೋಡೆಕೋರರು ಸುಲಭವಾಗಿ ಪರಾರಿಯಾದದ್ದು ಆಡಳಿತದ ಅಸಮರ್ಥತೆಯನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.
ಬೆಂಗಳೂರು ನಗರದಲ್ಲಿ ನಡೆದ 7 ಕೋಟಿಯ ಹಗಲು ದರೋಡೆ ಪ್ರಕರಣ ರಾಜ್ಯದ ಕಾನೂನು–ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂಬುದಕ್ಕೆ ಸಾಕ್ಷಿ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ. ಸರ್ಕಾರವೇ ಸತ್ತುಹೋಗಿದಂತೆ ವರ್ತಿಸುತ್ತಿದೆ. ಸರ್ಕಾರ ಬದುಕಿದ್ದರೆ ದರೋಡೆಕೋರರು ಹೆದರುತ್ತಿದ್ದರು ಎಂದು ಅವರು ಕಿಡಿಕಾರಿದರು.
ವರದಿ : ಲಾವಣ್ಯ ಅನಿಗೋಳ

