ನಮ್ಮ ಪಕ್ಷಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಹಿರಿಮೆ ಇದೆ: ಡಿಕೆಶಿ

ನಮ್ಮ ಪಕ್ಷಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಹಿರಿಮೆ ಇದೆ ಎಂಬುವುದಾಗಿ ಬಾವುಟ ವಿಚಾರದ ವಾಗ್ವಾದದ ವಿಚಾರವಾಗಿ ಡಿಕೆಶಿ ಉತ್ತರ ನೀಡಿದ್ದಾರೆ

ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿವರಿಗೆ ಪ್ರತಿ ಹೇಳಿಕೆ ನೀಡಿದ್ದಾರೆ. ಸ್ವಾತಂತ್ರ್ಯ ಅನ್ನೋದು ಒಂದು ಪಕ್ಷದ ಸೊತ್ತಲ್ಲ. ಇದು ಇಡೀ ದೇಶವೇ ಸಂಭ್ರಮಿಸುವ ವಿಚಾರ ಹಾಗೆಯೇ ನಮ್ಮ ಪಕ್ಷ ಸ್ವಾತಂತ್ರ್ಯ ಕಾರ್ಯಕ್ರಮವನ್ನು ಯಾವುದೇ ಕಾರಣಕ್ಕೂ ವಿರೋಧಿಸಿಲ್ಲ. ನಮ್ಮ ಪಕ್ಷಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹಿರಿಮೆ ಇದೆ. ನಮ್ಮ ಪ್ರಶ್ನೆ ಇರುವುದು ಬಾವುಟ ಮಾರಾಟ ಮಾಡಬಾರದು ಎಂಬುವುದಷ್ಟೇ ಎಂಬುವುದಾಗಿ ಸಿಎಂ ಬೊಮ್ಮಾಯಿಗೆ ಸ್ಟಷ್ಟತೆ ನೀಡಿದ್ದಾರೆ.

About The Author