State News: ಕಾಂಗ್ರೆಸ್ ಅಧಿಕಾರದ ಚಿಕ್ಕಾಣಿ ಹಿಡಿದಿದ್ದೇ ತಡ ಅನೇಕ ಗ್ಯಾರಂಟಿ ಯೋಜನೆಗೆ ಚಾಲನೆ ನೀಡುವುದರ ಜೊತೆಗೆ ಇದೀಗ ಸಮಗ್ರ ಬೆಂಗಳೂರು ಅಭಿವೃದ್ಧಿಗೆ ತಯಾರಾಗಿ ನಿಂತಿದೆ.
ಒಂದೆಡೆ ಸಿಎಂ ಸಿದ್ದರಾಮಯ್ಯ ಸಾರ್ವಜನಿಕರಿಗಾಗಿ ಟ್ವಿಟರ್ ಖಾತೆ ತೆರೆದು ಸಾರ್ವಜನಿಕರ ಕುಂದು ಕೊರತೆಗಳನ್ನು ಈ ಮೂಲಕವಾಗಿ ತಿಳಿಸಬಹುದು ಎಂಬುವುದಾಗಿ ಹೇಳಿದ್ರೆ ಡಿಸಿಎಂ ಡಿಕೆಶಿ ಕೂಡಾ ಇದೇ ಮಾರ್ಗ ಅನುಸರಿಸುತ್ತಿದ್ದಾರೆ. ಬ್ರಾಂಡ್ ಬೆಂಗಳೂರು ಎಂಬ ವೆಬ್ ಸೈಟ್ ಸಾರ್ವಜನಿಕರಿಗಾಗಿ ತೆರೆದಿದ್ದಾರೆ.
ಡಿಸಿಎಂ ಡಿಕೆಶಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ವಾಟ್ಸಾಪ್ ಹಾಗು ಹೊಸದೊಂದು ವೆಬ್ ಸೈಟ್ ಮೂಲಕವಾಗಿ ಉತ್ತಮ ಯೋಜನೆ ಕಂಡುಕೊಂಡಿದ್ದಾರೆ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ವಿಚಾರ ಹಂಚಿಕೊಂಡಿದ್ದಾರೆ.
ವಾಟ್ಸ್ಆಪ್ ಹಾಗು ವೆಬ್ ಸೈಟ್ ಮೂಲಕವಾಗಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾಗಿದೆ. ಹಾಗೆಯೆ ಇದಕ್ಕೆ ಕೊನೆಯ ದಿನಾಂಕ ಜುಲೈ 20 ಆಗಿದೆ.
ನಮ್ಮ ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗಾಗಿ ಸಾರ್ವಜನಿಕ ಸಲಹೆ ಬೇಕಿದೆ. ಆಸಕ್ತರು ವೆಬ್‌ಸೈಟ್‌ಗೆ ಲಾಗಿನ್ ಆಗಿ ನಿಮ್ಮ ಸಲಹೆಗಳನ್ನು ನಮಗೆ ಕಳಿಸಬಹುದು. ಅಥವಾ 9480685700 ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮಾಡಬಹುದು. ಸಲಹೆಗಳನ್ನು ಕಳಿಸಲು ಕೊನೆಯ ದಿನಾಂಕ ಜುಲೈ 20. ಹೆಚ್ಚಿನ ಮಾಹಿತಿಗೆ ಕರೆ ಮಾಡಿ ಟೋಲ್ ಫ್ರೀ ಸಂಖ್ಯೆ 1533. ಎಂಬುವುದಾಗಿ ತಮ್ಮ ಟ್ವಿಟರ್ ಖಾತೆ ಮೂಲಕ ತಿಳಿಸಿದ್ದಾರೆ. brandbengaluru.karnataka.gov.in
ನಮ್ಮ ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗಾಗಿ ಸಾರ್ವಜನಿಕ ಸಲಹೆ ಬೇಕಿದೆ. ಆಸಕ್ತರು https://t.co/wqSAJ1IElP ವೆಬ್‌ಸೈಟ್‌ಗೆ ಲಾಗಿನ್ ಆಗಿ ನಿಮ್ಮ ಸಲಹೆಗಳನ್ನು ನಮಗೆ ಕಳಿಸಬಹುದು.
ಅಥವಾ 9480685700 ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮಾಡಬಹುದು. ಸಲಹೆಗಳನ್ನು ಕಳಿಸಲು ಕೊನೆಯ ದಿನಾಂಕ ಜುಲೈ 20.
ಹೆಚ್ಚಿನ ಮಾಹಿತಿಗೆ ಕರೆ ಮಾಡಿ ಟೋಲ್… pic.twitter.com/j1zxYxA8pM— DK Shivakumar (@DKShivakumar) July 3, 2023
hubli Police- ಖಾಕಿಗೆ ತಲೆನೋವಾದ ವೈರಲ್ ವಿಡಿಯೋ: ಹೇಯ ಕೃತ್ಯ ಬಚ್ಚಿಟ್ಟರಾ ಪೋಲಿಸರು..?
Karemma G Nayak-ನನಗೆ ಬೆದರಿಕೆ ಕರೆಗಳು ಬರುತ್ತಿವೆ- ಭದ್ರತೆ ಒದಗಿಸಿ