- Advertisement -
Banglore news:
ಬಿಜೆಪಿಯವರು ಜನಸ್ಪಂದನೆಗೂ ಮೊದಲು ಜಲಸ್ಪಂದನೆ ಮಾಡಲಿ ಎಂಬುವುದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಛೇರಿಯಲ್ಲಿ ಮಾತನಾಡಿದ ಅವರು ನಗರದಾದ್ಯಂತ ಮಹಾಮಳೆಯಿಂದಾಗಿ ಜನರ ಜೀವನವೇ ಅಸ್ತವ್ಯಸವ್ತವಾಗಿದೆ. ಹೀಗಿರುವಾಗ ಸರಕಾರ ಇವರಿಗೆ ನೆರವಾಗಬೇಕು. ಜನರ ಸಮಸ್ಯೆಯನ್ನು ಪರಿಹಾರ ಮಾಡಬೇಕು. ಅದು ಬಿಟ್ಟು ಇಂತಹ ಸಮಯದಲ್ಲಿ ಜನಸ್ಪಂದನೆ ಕಾರ್ಯಕ್ರಮ ಮಾಡುವುದು ಸರಿಯಲ್ಲ ಎಂದರು. ಜೊತೆಗೆ ಕೆಲವೆಡೆ ಸರಕಾರ ಬೋಟ್ ಗಳ ಮೂಲಕ ಜನರನನ್ನು ರಕ್ಷಿಸುತ್ತಿದೆ. ಇದು ಒಳ್ಳೆಯ ವಿಚಾರ ಆದರೆ ಅನೇಕ ಕಡೆಗಳಲ್ಲಿ ಜನರು ಮನೆಯಿಂದ ಹೊರಬಾರಲಾರದೆ ಸಂಕಷ್ಟದಲ್ಲಿದ್ದಾರೆ ಅವರಿಗೆ ಸಹಾಯವಾಗಲಿ ಎಂದು ಡಿಕೆಶಿ ಹೇಳಿಕೆ ನೀಡಿದ್ದಾರೆ.
- Advertisement -