Banglore News:
ಬೆಂಗಳೂರಿನ ಅಂಬೇಡ್ಕರ್ ಭಾರತ್ ಜೋಡೋ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪಕ್ಷದ ಒಳಗಿನ ತಮ್ಮ ವಿರೋಧಿಗಳ ವಿರುದ್ಧ ಚಾಟಿ ಬೀಸಿದ್ದಾರೆ. ಜೊತೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಪರೋಕ್ಷವಾಗಿ ಸವಾಲು ಹಾಕಿದ್ದಾರೆ. ನೇರ ನೇರವಾಗಿ ಪಕ್ಷದ ಕೆಲವು ನಾಯಕರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದ ಶಿಸ್ತು ಪಾಲನೆಗೆ ಸವಾಲು ಹಾಕುವಂತೆ ಕೆಲವು ಶಾಸಕರ ಹಾಗೂ ನಾಯಕರ ನಡೆ ಪ್ರಶ್ನಿಸಿದ್ದಾರೆ. ಪಾರ್ಟಿ ಪ್ರೆಸಿಡೆಂಟ್ ನಾನೇ. ಹಾಗಾಗಿ ರಾಜ್ಯ ಕಾಂಗ್ರೆಸ್‍ನಲ್ಲಿ ಎಲ್ಲವೂ ನನ್ನದೆ ಎಂಬಂತೆ ನಿನ್ನೆ ಮಾತನಾಡಿದ್ದಾರೆ. ಕೆಲವರು ನನಗೆ ಸಹಕರಿಸುತ್ತಿಲ್ಲ ಎನ್ನುವ ಮೂಲಕ ಸಿದ್ದರಾಮಯ್ಯರನ್ನು ಕೆಣಕಿದ್ದಾರೆ. ಪದೇ ಪದೇ ಹೈಕಮಾಂಡ್, ಪಕ್ಷ ನಿಷ್ಠೆಯ ಕುರಿತು ಮಾತನಾಡಿ ಸಿದ್ದರಾಮೋತ್ಸವ ಸೇರಿದಂತೆ ಸಾಕಷ್ಟು ವಿಚಾರಗಳನ್ನು ಪರೋಕ್ಷವಾಗಿ ಟೀಕಿಸಿ ವಿರೋಧಿಗಳಿಗೆ ಸವಾಲು ಹಾಕಿದ್ದಾರೆ. ಇದನ್ನೆಲ್ಲಾ ನೋಡಿದರೆ ಎಐಸಿಸಿಯ ಭಾರತ್ ಜೋಡೋಗಿಂತ ರಾಜ್ಯ ಕಾಂಗ್ರೆಸ್‍ನಲ್ಲಿ ಕಾಂಗ್ರೆಸ್ ಜೋಡೋ ಹೆಚ್ಚು ಅಗತ್ಯ ಎಂಬಂತಿದೆ ಎಂದು ಹೇಳಿದ್ದಾರೆ.
ಪ್ರಾಣಿಗಳಿಗೆ ಹರಡುತ್ತಿವೆ ವಿಚಿತ್ರ ಸೋಂಕು…! ಬನ್ನೇರುಘಟ್ಟ ಉದ್ಯಾನವನದಲ್ಲಿ 3 ಹುಲಿಗಳ ಸಾವು..!