ಬೆಂಗಳೂರು : ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಲಾಕ್ ಡೌನ್ ಘೊಷಣೆ ಮಾಡಿದ ಮರುದಿನದಿಂದಲೇ ಆರ್ ಎಸ್ ಎಸ್ ಕಾರ್ಯಕರ್ತರು ಕೂಲಿ ಕಾರ್ಮಿಕರು, ಬಡವರಿಗೆ ದಿನಸಿಗಳನ್ನ ಸಂಗ್ರಹಿಸಿ ಹಂಚುವ ಕೆಲಸಕ್ಕೆ ಮುಂದಾಗಿದ್ರು.. ಮರುದಿನ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರ್ ಎಸ್ ಎಸ್ ನವರಿಗೊಂದು ನ್ಯಾಯ ನಮಗೊಂದು ನ್ಯಾಯಾನ.. ಇವರಿಗೆ ಯಾರು ಪರ್ಮಿಷನ್ ಕೊಟ್ಟಿದ್ದು ಬೀದಿಬೀದಿಯಲ್ಲಿ ಕಲೆಕ್ಷನ್ ಮಾಡಿ ಜನರಿಗೆ ಹಂಚಲು.. ನಾವು ಬೀದಿಗಿಳಿದ್ರೆ ಏನಾಗುತ್ತೆ ಗೊತ್ತಾ ಅಂತ ಆರ್ ಎಸ್ ಎಸ್ ವಿರು್ದ್ಧ ಹರಿಹಾಯ್ದಿದ್ರು.. ಇನ್ನೂ ಮುಂದಕ್ಕೆ ಹೋಗಿ ಆರ್ ಎಸ್ ಎಸ್ ವಸೂಲಿ ಸಂಘಟನೆ ಅಂತ ಟೀಕೆ ಮಾಡಿದ್ರು..
ಇದೀಗ ಹಸಿದವರ ನೆರವಿಗೆ ನಿಂತ ಕಾಂಗ್ರೆಸ್..!
ಕಳೆದ ಎರಡು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಎಂಎಲ್ ಎ ಹಾಗೂ ಎಂಎಲ್ ಸಿಗಳು ತಲಾ ಒಂದು ಲಕ್ಷವನ್ನ ಕಾಂಗ್ರೆಸ್ ಕೊರೋನಾ ಪರಿಹಾರ ನಿಧಿಗೆ ಕೊಡಬೇಕು ಅಂತ ಕೇಳಿದ್ರು.. ಅದರಂತೆ ಕಾಂಗ್ರೆಸ್ ಶಾಸಕರು ಒಂದೊಂದು ಲಕ್ಷವನ್ನ ನೀಡ್ತಿದ್ದಾರೆ.. ಈ ನಡುವೆ ಕಾಂಗ್ರೆಸ್ ನಿಂದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದಲ್ಲಿ ಕೊರೊನಾ ತಡೆಗೆ ವಿಶೇಷ ಟಾಸ್ಕ್ ಫೋರ್ಸ್ ಸಹ ಮಾಡಿದ್ರು.. ಇದೀಗ ಕಾಂಗ್ರೆಸ್ಶಾಸಕ ಮೂಲಕ ಹಸಿದವರಿಗೆ ಅನ್ನ ಹಾಕಿಸುವ ಕೆಲಸಕ್ಕೆ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ.. ಕಾಂಗ್ರೆಸ್ ನಾಯಕರು ಸಹ ಆರ್ ಎಸ್ ಎಸ್ ಮಾದರಿಯಲ್ಲಿ ದಿನಸಿ ಹಾಗೂ ಆಹಾರ ವಿತರಿಸುವ ಕೆಲಸಕ್ಕೆ ನಿಧಾನವಾಗಿ ಮುಂದಾಗಿದ್ದಾರೆ.. ಆದ್ರೆ, ಆರ್ ಎಸ್ ಎಸ್ ಕಾರ್ಯಕರ್ತರು ಮಾತ್ರ ಡಿಕೆ ಶಿವಕುಮಾರ್ ಯಾವ ಆರೋಪಗಳಿಗೂ ಉತ್ತರ ಕೊಟ್ಟಿಲ್ಲ.. ಈ ಬಗ್ಗೆ ಆರ್ ಎಸ್ ಎಸ್ ಕಾರ್ಯಕರ್ತರನ್ನ ಮಾತನಾಡಿಸಿದ್ರೆ. ನಮ್ಮ ಕೆಲಸ ನಾವು ಮಾಡ್ತೀವಿ ಯಾರ ಬಗ್ಗೆ ಬಗ್ಗೆನೂ ಮಾತನಾಡಲ್ಲ ಅಂತಾರೆ.. ವಾಸ್ತವವಾಗಗಿ ಡಿಕೆ ಶಿವಕುಮಾರ್ ಸಹ ಕಾಲೇಜು ದಿನಗಳಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರಾಗಿದ್ರು.. ಬೆಂಗಳೂರಿನ ರಾಜಾಜಿಜನಗರದಲ್ಲಿ ಆರ್ ಎಸ್ ಎಸ್ ಶಾಖೆಯಲ್ಲಿ ಭಾಗವಹಿಸಿದ್ದಾರೆ..
ಕೊರೋನಾ ಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಯಾರು ಬೇಕಾದರೂಹಸಿದವರಿಗೆ ಅನ್ನ ಹಾಕಲಿ.. ಒಳ್ಳೆಯ ಕೆಸಲ ಮಾಡೋಕೆ ಯಾವ ಪಕ್ಷವಾದರೇನು..? ಸಹಾಯ ಮಾಡಲು ಪಕ್ಷ, ಜಾತಿ, ಧರ್ಮ ಸಂಘಟನೆ ಯಾರಾದರೇನು.. ಹಸಿದವರ ಹೊಟ್ಟೆ ತುಂಬಿಸಿದರೆ ಸಾಕು..