Sunday, December 22, 2024

Latest Posts

ಐಶ್ವರ್ಯ’ಲಕ್ಷ್ಮಿ’ ಸಂಕಷ್ಟದ ರಹಸ್ಯ..!

- Advertisement -

ಡಿಕೆಶಿ ಬೆನ್ನ ಹಿಂದೆಯೇ ಲಕ್ಷ್ಮೀಗೂ ಇ.ಡಿ ಕುಣಿಕೆ..! .. ದೊಡ್ಡದಾಗ್ತಿದೆ ಇ.ಡಿ ಹಿಟ್​​ ಲಿಸ್ಟ್ .. ಯಾರ್ಯಾರಿಗೆ ಬೀಸ್ತಾರೆ ಬಲೆ..? .. ಡಿಕೆಶಿ ಜೊತೆ ಲಕ್ಷ್ಮೀ ಹೆಬ್ಬಾಳ್ಕರ್ ದು ಏನ್ ವ್ಯವಹಾರ..? ಕನಕಪುರದ ಬಂಡೆ ಯಾಕಿಷ್ಟು ಟಾರ್ಗೆಟ್​..? ಡಿಕೆ ಶಿವಕುಮಾರ್  ನಂಬಿದ ವ್ಯಕ್ತಿಗಳೇ ಅವರಿಗೆ ಮುಳುವಾದ್ರಾ..? ಕನಕಪುರದ ಬಂಡೆ ಡಿಕೆಶಿ ಇಡಿ ಪ್ರಕರಣ ಅಷ್ಟು ಬೇಗ ಮುಗಿಯುವ ಲಕ್ಷಣಗಳೇ ಕಾಣಿಸ್ತಿಲ್ಲ.. ಯಾಕಂದ್ರೆ ಅವರ ಬೆಂಬಲಿಗರಿಗೂ ಇಡಿ ಬಲೆ ಬೀಸಿದೆ.. ಅದು ಒಂದಲ್ಲ ಎರಡಲ್ಲ 180ಕ್ಕೂ ಹೆಚ್ಚು ಮಂದಿಗೆ ಇಡಿ ಬಲೆ ಬೀಸಿದೆ..

ಲಕ್ಷ್ಮೀ ಹೆಬ್ಬಾಳ್ಕರ್​ಗೂ ಇ.ಡಿ ಬಲೆ ಬೀಸಿದ್ಯಾಕೆ..?

ವಾಯ್ಸ್ 3: ಹೌದು, ಡಿಕೆಶಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪುತ್ರಿ ಐಶ್ವರ್ಯರನ್ನ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ರು.. ದೆಹಲಿಯ ಇಡಿ ಕಚೇರಿಗೆ ಕರೆಸಿಕೊಂಡಿದ್ದ ಇಡಿ ಅಧಿಕಾರಿಗಳು ಡಿಕೆಶಿ ಮಗಳನ್ನ ಸತತ ಎರಡು ದಿನ ವಿಚಾರಣೆಗೊಳಪಡಿಸಿದ್ರು.. ಐಶ್ವರ್ಯ ಘೋಷಿತ ಆದಾಯವೇ 108 ಕೋಟಿಯಷ್ಟು ಇದ್ದು.. ಇಷ್ಟೊಂದು ಆಸ್ತಿ ಈ ವಯಸ್ಸಿಗೇ ನಿಮಗೆ ಹೇಗೆ ಬಂತು.. ನಿಮ್ಮ ತಂದೆ ಏನಾದ್ರೂ ನಿಮ್ಮ ಹೆಸರಲ್ಲಿ ಬೇನಾಮಿ ಆಸ್ತಿ ಇಟ್ಟಿದ್ದಾರಾ ಅನ್ನೋ ನಾನಾ ಪ್ರಶ್ನೆಗಳನ್ನ ಇಡಿ ಅಧಿಕಾರಿಗಳು ಐಶ್ವರ್ಯ ಮುಂದಿಟ್ಟಿದ್ರು ಎನ್ನಲಾಗಿದೆ. ಇಡಿ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟು ಬಂದಿರುವ ಡಿಕೆಶಿ ಪುತ್ರಿಗೆ ಮತ್ತೊಮ್ಮೆ ಕರೆದಾಗ ಬರಬೇಕು ಅನ್ನೋ ಸೂಚನೆಯನ್ನೂ ಕೊಡಲಾಗಿದೆ..

ಡಿಕೆಶಿ ಮಗಳನ್ನ ವಿಚಾರಣೆ ಮಾಡಿ ಮೂರು -ನಾಲ್ಕು ದಿನಗಳ ಬಳಿಕ ಡಿಕೆಶಿ ಆಪ್ತೆ, ಬೆಳಗಾವಿಯ ಕಾಂಗ್ರೆಸ್​ ಪ್ರಭಾವಿ ನಾಯಕಿ ಶಾಸಕಿ  ಲಕ್ಷ್ಮೀ ಹೆಬ್ಬಾಳ್ಕರ್​ಗೂ ಇಡಿ ಕಂಟಕ ಶುರುವಾಗಿದೆ.. ನನಗೂ ಇಡಿ ನೋಟಿಸ್ ಬರುತ್ತೆ ಅನ್ನೋ ಯಾವ ನಿರೀಕ್ಷೆಯಲ್ಲೂ ಇರದ ಹೆಬ್ಬಾಳ್ಕರ್​ ಏಕಾಏಕಿ ಇಡಿ ನೋಟಿಸ್​ ಕಂಡು ದಂಗಾಗಿದ್ದಾರೆ.. ತಮ್ಮ ವಕೀಲರ ಮೂಲಕ ಇಡಿಗೆ ಒಂದಿಷ್ಟು ಮನವಿಯನ್ನೂ ಮಾಡಿದ್ರು.. ಬೆಳಗಾವಿಯಲ್ಲೇ ವಿಚಾರಣೆ ಮಾಡಿ, ಬೆಂಗಳೂರಿನಲ್ಲಾದ್ರೂ ವಿಚಾರಣೆ ಮಾಡಿ ಅಂತ ಲಕ್ಷ್ಮೀ ಹೆಬ್ಬಾಳ್ಕರ್​ ಮನವಿ ಮಾಡಿದ್ರು.. ಆದ್ರೂ ಇಡಿ ಅಧಿಕಾರಿಗಳು ಸ್ಪಂದಿಸಿಲ್ಲ.. ಹೀಗಾಗಿ ಕೊನೆಗೂ ಲಕ್ಷ್ಮೀ ಹೆಬ್ಬಾಳ್ಕರ್​ ಬೇರೆ ದಾರಿಯಿಲ್ಲದೆ ದೆಹಲಿಗೆ ಹೋಗಿ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ..

ಯೆಸ್​.. ಯಾವಾಗ ಡಿಕೆಶಿ ಪ್ರಕರಣ ಸಂಬಂಧ ಲಕ್ಷ್ಮೀ ಹೆಬ್ಬಾಳ್ಕರ್​ಗೂ ಡ್ರಿಲ್ ಶುರುವಾಯ್ತೋ ಇದು ಖಂಡಿತ ಇಲ್ಲಿಗೇ ಮುಗಿಯೋದಿಲ್ಲ ಅನ್ನೋದು ಅರ್ಥವಾಗಿತ್ತು.. ಹಾಗಾದ್ರೆ ಇಡಿ ಅಧಿಕಾರಿಗಳಿಗೆ ಸಿಕ್ಕಿರೋ ಮಾಹಿತಿಯಾದ್ರೂ ಏನು.. ಡಿಕೆಶಿ ಪ್ರಕರಣಕ್ಕೂ ಲಕ್ಷ್ಮೀಗೂ ಇರೋ ಲಿಂಕ್​ ಏನು ಅನ್ನೋ ನಾನಾ ಪ್ರಶ್ನೆಗಳು.. ನಾನಾ ಅನುಮಾನಗಳು ಹುಟ್ಟಿಕೊಂಡಿವೆ.. ಅನುಮಾನಗಳು ಏನೇ ಇದ್ರೂ ಮೇಲ್ನೋಟಕ್ಕೆ ಸ್ಪಷ್ಟವಾಗೋದು ಏನಪ್ಪ ಅಂದ್ರೆ, ಡಿಕೆಶಿ ಬೆಂಬಲಿಗರನ್ನೇ ಇಡಿ ಅಧಿಕಾರಿಗಳು ಟಾರ್ಗೆಟ್​ ಮಾಡಿದ್ದಾರೆ ಅನ್ನೋದು.. ಸ್ವತಃ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ಹೇಳೋ ಪ್ರಕಾರ ಇದು ರಾಜಕೀಯ ಕುತಂತ್ರವಂತೆ..

ನಿಮ್ಮ ಪ್ರಕಾರ ಪುತ್ರಿ ಐಶ್ವರ್ಯಾ, ಆಪ್ತೆ ಲಕ್ಷ್ಮೀ ಹೆಸರಿನ ವ್ಯವಹಾರವೇ ಡಿಕೆಶಿಗೆ ಮುಳುವಾಗ್ತಿದೆಯಾ..? ಅಥವಾ ಮೋದಿ-ಅಮಿತ್ ಶಾ ಸೇಡಿನ ರಾಜಕಾರಣ ಮಾಡ್ತಿದ್ದಾರಾ..? ಈ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ

- Advertisement -

Latest Posts

Don't Miss