Saturday, July 27, 2024

Latest Posts

ಡಿಕೆಶಿ, ಹೆಚ್ಡಿಕೆ ದೋಸ್ತಿ, ಜೆಡಿಎಸ್ ಶಾಸಕರ ಮನಸ್ಸಿನಲ್ಲಿ ಕುಸ್ತಿ..!

- Advertisement -

ಕರ್ನಾಟಕ ಟಿವಿ : ದೋಸ್ತಿ ಸರ್ಕಾರ ಪತನದ ನಂತರ ಜೆಡಿಎಸ್-ಕಾಂಗ್ರೆಸ್ ನಾಯಕರು ಉತ್ತರ ಧ್ರುವ ದಕ್ಷಿಣ ಧ್ರುವದಂತಾಗಿದ್ದಾರೆ. ಆದ್ರೆ, ಕುಮಾರಸ್ವಾಮಿ ಡಿಕೆಶಿ ಮಾತ್ರ ಮತ್ತಷ್ಟು ಹತ್ತಿರವಾಗಿದ್ದಾರೆ. 14 ತಿಂಗಳು ಕುಮಾರಸ್ವಾಮಿ ಸಿಎಂ ಆಗಿ ಉಳಿಯಲು ಕಾರಣ ಪುಣ್ಯಾತ್ಮ ಡಿಕೆಶಿಯೇ ಕಾರಣ. ಹೀಗಾಗಿ ಗೌಡರ ಫ್ಯಾಮಿಲಿ ಡಿಕೆಶಿ ಬೆನ್ನಿಗೆ ಗಟ್ಟಿಯಾಗಿ ನಿಂತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಮುಂದೆ ಡಿಕೆಶಿ ಸಿಎಂ ಅಭ್ಯರ್ಥಿಯಾದರೆ ನಮ್ಮ ಪಾಡೇನು ಅಂತ ಜೆಡಿಎಸ್ ಶಾಸಕರು ಗೊಂದಲಕ್ಕೆ ಸಿಲುಕಿದ್ದಾರೆ. ಯಾಕೆಂದರೆ ಕುಮಾರಸ್ವಾಮಿಯನ್ನ ಸಿದ್ದರಾಮಯ್ಯ ಕಾಂಗ್ರೆಸ್ ಒಪ್ಪಲು ರೆಡಿ ಇಲ್ಲ. ಹೀಗಾಗಿ ಡಿಕೆಶಿ ಸಿಎಂ ಮಾಡಲು ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಕಾಂಗ್ರೆಸ್ ಗೆಲುವಿಗೆ ಕುಮಾರಸ್ವಾಮಿ ಅನುಕೂಲ ಮಾಡಿಕೊಡ್ತಾರಾ ಈ ರೀತಿಯ ಚರ್ಚೆ ಶುರುವಾಗಿದೆ..

ಚುನಾವಣೆ ವೇಳೆ ಕಾರ್ಯಕರ್ತರು ಏನ್ ಮಾಡ್ತಾರೆ..?

ಕುಮಾರಸ್ವಾಮಿ, ಡಿಕೆಶಿ ಒಕ್ಕಲಿಗರನ್ನ ಒಂದು ಮಾಡಿ ಹಳೇ ಮೈಸೂರಿನಲ್ಲಿ ದಿಗ್ವಿಜಯ ಸಾಧಿಸಲು ಲೆಕ್ಕಾಚಾರ ಹಾಕಿದ್ದಾರೆ. ಆದ್ರೆ ಹಾಲಿ ಜೆಡಿಎಸ್ ಶಾಸಕರು ಈಗ ಕುಮಾರಸ್ವಾಮಿ ನಡೆಯಿಂದ ಗೊಂದಲಕ್ಕೀಡಾಗಿದ್ದಾರೆ. ಡಿಕೆಶಿಯನ್ನ ಈಗ ಹೀರೋ ಅಂತ ಬಿಂಬಿಸಿ ಬೆಂಬಲಿಸಿದ್ರೆ ಮುಂದೆ ಡಿಕೆಶಿ ಸಿಎಂ ಅಭ್ಯರ್ಥಿ ಆದ್ರೆ ಚುನಾವಣೆ ವೇಳೆ ಬಹುತೇಕ ಜೆಡಿಎಸ್ ಮತ ಬ್ಯಾಂಕ್ ಕಾಂಗ್ರೆಸ್ ಗೆ ಬೀಳಲಿದೆ. ಆಗ ನಮ್ಮ ಪಾಡೇನು ಅಂತ ಜೆಡಿಎಸ್ ಶಾಸಕರು ಮಾತನಾಡಿಕೊಳ್ತಿದ್ದಾರೆ. ಜೆಡಿಎಸ್ ನಲ್ಲಿ ಉಳಿದಿರುವ 34 ಶಾಸಕರಲ್ಲಿ 25ಶಾಸಕರ ಕ್ಷೇತ್ರದಲ್ಲಿ ಪ್ರಬಲ ಎದುರಾಳಿ ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷದವರೆ. ಹೀಗಿರುವಾಗ ಕುಮಾರಸ್ವಾಮಿ ಈ ನಡೆ ಜೆಡಿಎಸ್ ಶಾಸಕರನ್ನ ಕಂಗಾಲಾಗುವಂತೆ ಮಾಡಿದೆ.

ಬಿಜೆಪಿ, ಕಾಂಗ್ರೆಸ್ ಕಡೆ ಜೆಡಿಎಸ್ ನಾಯಕರ ಚಿತ್ತ..!

ಜೆಡಿಎಸ್ ನಾಯಕರು ಭವಿಷ್ಯದ ದೃಷ್ಟಿಯಿಂದ ಯಾವ ಪಕ್ಷ ಸೇರಬೇಕು ಅನ್ನುವ ಗೊಂದಲಕ್ಕೆ ಬಿದ್ದಿದ್ದಾರೆ. ಮೈಸೂರಿನ ಜಿ.ಟಿ ದೇವೇಗೌಡರ ಹೆಜ್ಜೆ ಬಹುತೇಕ ಬಿಜೆಪಿ ಕಡೆ ಇದ್ರೆ ಸಾರಾ ಮಹೇಶ್ ಕಾಯ್ದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಸಾರಾ ಮಹೇಶ್ ಬಹುತೇಕ ಕುಮಾರಸ್ವಾಮಿ ಜೊತೆ ಉಳಿಯುವ ಸಾಧ್ಯತೆ ಇದೆ. ಇನ್ನು ಮಂಡ್ಯದ ಜೆಡಿಎಸ್ ಶಾಸಕರಿಗೆ ಎದುರಾಳಿ ಕಾಂಗ್ರೆಸ್ ಪಕ್ಷ ಹೀಗಾಗಿ 7 ಜೆಡಿಎಸ್ ಶಾಸಕರು ಕಾಂಗ್ರೆಸ್ ಕಡೆ ಮುಖ ಮಾಡೋದು ಡೌಟು, ಒಂದಷ್ಟು ಶಾಸಕರು ಒಳಗೊಳಗೆ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಮೊನ್ನೆ ಕೆಆರ್ ಎಸ್ ಗೆ ಬಾಗಿನ ಅರ್ಪಿಸುವಾಗ ಜೆಡಿಎಸ್ ಶಾಸಕರು ಗೈರಾಗ್ತಾರೆ ಅಂತಾನೆ ಎಲ್ರೂ ಭಾವಿಸಿದ್ರು. ಆದ್ರೆ ಕ್ಷೇತ್ರದ ಅನುದಾನ, ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಜೊತೆ ಉತ್ತಮ ಬಾಂಧವ್ಯ ಹೊಂದಲು ಮುಂದಾಗಿದ್ದಾರೆ. ಜಿಲ್ಲೆಯ ಎಲ್ಲಾ ಶಾಸಕರು ಯಡಿಯೂರಪ್ಪ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ಇನ್ನು ಟಿ. ನರಸೀಪುರ ಶಾಸಕರ ಎದುರಾಳಿ ಕಾಂಗ್ರೆಸ್ ನ ಹೆಚ್.ಸಿ ಮಹದೇವಪ್ಪ ಈ ಹಿನ್ನೆಲೆ ಜೆಡಿಎಸ್ ಶಾಸಕ ಅಶ್ವಿನ್ ಕುಮಾರ್ ಕಮಲ ಪಕ್ಷದ ಕಡೆ ಕಣ್ಣಿಟ್ಟಿದ್ದಾರೆ.

ರಾಮನಗರ ಜೆಡಿಎಸ್ ನಾಯಕರು ಸಹ ಗೊಂದಲದಲ್ಲಿ..!

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಲ್ಲಿ ಕುಮಾರಸ್ವಾಮಿ 21 ಸಾವಿರ ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿದರು. ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಡಿಕೆಶಿ ವಿರುದ್ಧ ಜೆಡಿಎಸ್ ಪ್ರಬಲವಲ್ಲದ ಅಭ್ಯರ್ಥಿ ಹಾಕಿದ್ರೆ ರಾಮನಗರದಲ್ಲಿ ಕುಮಾರಸ್ವಾಮಿ ವಿರುದ್ಧ ಪ್ರಬಲವಲ್ಲದ ಅಭ್ಯರ್ಥಿ ಹಾಕಿ ಪರಸ್ಪರ ಗೆಲುವಿಗೆ‌ ಸುಲಭ ಮಾಡಿಕೊಂಡಿದ್ರು. ಆದ್ರೆ ಮುಂಬರುವ ಚುನಾವಣೆಯಲ್ಲಿ ಇದು ಸಾಧ್ಯನಾ ಅಂತ ನೋಡ್ಬೇಕು. ಒಂದು ವೇಳೆ ರಾಮನಗರ, ಕನಕಪುರದ, ಚನ್ನಪಟ್ಟಣದಲ್ಲಿ ಸಾಧ್ಯವಾದರೂ ಮಾಗಡಿ ಶಾಸಕ ಮಂಜು ವಿರುದ್ಧ ಬಾಲಕೃಷ್ಣ ಸ್ಪರ್ಧೆ ಮಾಡ್ತಾರೆ. ಈ ಕ್ಷೇತ್ರದಲ್ಲಿ ಕಾರ್ಯಕರ್ತರಲ್ಲಿ ಗೊಂದಲವಾಗೋದು ಗ್ಯಾರಂಟಿ.

ಡಿಕೆಶಿ ಸಿಎಂ ಮಾಡಲು ಜೆಡಿಎಸ್ ತನ್ನ ಶಾಸಕರಿಗೆ ಹಿನ್ನಡೆ ಮಾಡುತ್ತಾ..?

ಪ್ರಸ್ತುತ ಕುಮಾರಸ್ವಾಮಿ-ಡಿಕೆಶಿ ಬಾಂಧವ್ಯ ಜೆಡಿಎಸ್ ಶಾಸಕರ ಗೊಂದಲವನ್ನ ಹೆಚ್ಚಳ ಮಾಡ್ತಿದೆ. ರಾಜ್ಯದಲ್ಲಿ ಯಾವಾಗ ಬೇಕಾದರೂ ಮಧ್ಯಂತರ ಚುನಾವಣೆ ಬರಬಹುದು. ಹೀಗಾಗಿ ಸಿದ್ದರಾಮಯ್ಯ ಎಲ್ಲರಿಗೂ ಸಿದ್ದರಾಗುವಂತೆ ಸೂಚನೆ ಕೊಟ್ಟಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ದೇವೇಗೌಡ, ಕುಮಾರಸ್ವಾಮಿ ವಿರುದ್ಧ ರಣಕಹಳೆ ಮೊಳಗಿಸಿಯಾಗಿದೆ. ಒಂದು ವೇಳೆ ಡಿಕೆಶಿ ವಿಧಾನಸಭಾ ಚುನಾವಣಾ ವೇಳೆ ಜೈಲಿಗೆ ಹೋಗದೆಇದ್ರೆ ಕಾಂಗ್ರೆಸ್ ನಿಂದ ಸಿಎಂ ಅಭ್ಯರ್ಥಿಯಾಗೋದು ಗ್ಯಾರಂಟಿ.

ಇಂಥಹ ಸಂದರ್ಭದಲ್ಲಿ ಗೌಡರ ಗೊಂದಲಕಾರಿ ನಡೆ ಜೆಡಿಎಸ್ ಗೆ ಮಾರಕವಾಗುವ ಮುನ್ಸೂಚನೆ ಕೊಡ್ತಿರೊದಂತು ಸತ್ಯ.

ನಿಮ್ಮ ಪ್ರಕಾರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಎಷ್ಟು ಸ್ಥಾನ ಗಳಿಸುತ್ತೆ..? ಜೆಡಿಎಸ್ ಸ್ಥಾನಗಳೆಷ್ಟು..? ಡಿಕೆಶಿ ಸಿಎಂ ಆಗ್ತಾರಾ ಅನ್ನೋದನ್ನ ಕಾಮೆಂಟ್ ಮಾಡಿ.

- Advertisement -

Latest Posts

Don't Miss