ಕರ್ನಾಟಕ ಟಿವಿ : ಕೊನೆಗೂ ಕನಕಪುರದ ಬಂಡೆ ಡಿಕೆ ಶಿವಕುಮಾರ್ ತಿಹಾರ್ ಜೈಲು ಪಾಲಾಗಿದ್ದಾರೆ. ಮೊನ್ನೆ 14 ದಿನ ನ್ಯಾಯಾಂಗ ಬಂಧನಕ್ಕೆ ಇಡಿ ಕೋರ್ಟ್ ಆದೇಶ ಮಾಡಿದ್ರು. ಆರೋಗ್ಯ ಸಮಸ್ಯೆಯಿಂದ ಆರ್.ಎಂ.ಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ರು. ನಿನ್ನೆ ಬೇಲ್ ಅಪ್ಲಿಕೇಷನ್ ವಿಚಾರಣೆಗೆ ಬಂದರೂ ಇಡಿ ಪರ ವಕೀಲ ಗೈರಾದ ಹಿನ್ನೆಲೆ ಇಂದಿಗೆ ಕೋರ್ಟ್ ಬೇಲ್ ಅಪ್ಲಿಕೇಷನ್ ಮುಂದೂಡಿತ್ತು.
ವಿಫಲವಾಯಿತು ಜೈಲು ಪಾಲಾಗೋದರಿಂದ ತಪ್ಪಿಸಿಕೊಳ್ಳುವ ಡಿಕೆಶಿ ಪ್ಲಾನ್
ಡಿಕೆ ಶಿವಕುಮಾರ್ ವಕೀಲ ಅಭಿಷೇಕ್ ಮನು ಸಿಂಘ್ವಿ ನ್ಯಾಯಾಧೀಶ ಬಳಿ ಆರೋಗ್ಯದ ವಿಚಾರ ಇಟ್ಟುಕೊಂಡೆ ಬೇಲ್ ಗೆ ಪ್ರಯತ್ನಿಸಿದ್ರು. ಶತಾಯಗತಾಯ ತಿಹಾರ್ ಜೈಲಿಗೆ ಹೋದ್ರೆ ಡಿಕೆಶಿ ಜೈಲು ಸೇತಿದ್ರು ಅನ್ನುವ ಕಳಂಕದಿಂದ ಬಚಾವ್ ಆಗಲು ಭಾರೀ ಪ್ರಯತ್ನಿಸಿದರು. ಆದ್ರೆ, ಡಿಕೆಶಿ ಟೀಂ ಪ್ರಯತ್ನ ಫಲಿಸದೇ ಕೊನೆಗೂ ತಿಹಾರ್ ಜೈಲು ಪಾಲಾಗಿದ್ದಾರೆ.
ನಿಮ್ಮ ಪ್ರಕಾರ ಡಿಕೆ ಶಿವಕುಮಾರ್ ಆಸ್ತಿ ಪ್ರಮಾಣಿಕ ಸಂಪಾದನೆಯಾ..? ಅಮಿತ್ ಶಾ, ಮೋದಿ ಸೇಡಿನ ರಾಜಕಾರಣ ಮಾಡ್ತಿದ್ದಾರಾ..? ಕಾಮೆಂಟ್ ಮಾಡಿ