ಮುಂಬೈ : ರಾಜೀನಾಮೆ ನೀಡರುವ ಶಾಸಕರನ್ನ ವಾಪಸ್ ಕರೆತರಲು ಡಿಕೆಶಿ ಮುಂಬೈಗೆ ಹಾರಿದ್ದಾರೆ.. ನಾವು ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯೋದಿಲ್ಲ ಅಂತ ಕಡ್ಡಿತುಂಡಾದಂತೆ ಹೇಳಿದ್ರು ಡಿ.ಕೆ ಶಿವಕುಮಾರ್ ತಮ್ಮ ಹಠವನ್ನ ಮಾತ್ರ ಬಿಟ್ಟಿಲ್ಲ. ಜೆಡಿಎಸ್ ಶಾಸಕರಾದ ಶಿವಲಿಂಗೇಗೌಡ, ಜಿ.ಟಿ ದೇವೇಗೌಡರ ಜೊತೆ ಶಾಸಕರನ್ನ ಕರೆತರಲು ಡಿಕೆಶಿ ಮುಂದಾಗಿದ್ದಾರೆ.
ಹೋಟೆಲ್ ಒಳಗಡೆ ಡಿಕೆಶಿ ಬಿಡದಂತೆ ಪತ್ರ..!
ಇನ್ನು ಹೋಟೆಲ್ ನಲ್ಲಿರು ಶಾಸಕರು ನಮಗೆ ಭದ್ರತೆ ಬೇಕಿದೆ. ನಾವು ಯಾವುದೇ ಕಾರಣಕ್ಕೂ ಡಿಕೆಶಿವಕುಮಾರ್ ಭೇಟಿಯಾಗಲ್ಲ. ಅವರನ್ನ ಹೋಟೆಲ್ ಒಳಗೆ ಬಿಡದಂತೆ ಮುಂಬೈ ಪೊಲೀಸರಿಗೆ ರಾಜೀನಾಮೆ ನೀಡಿರುವ ಶಾಸಕರು ಪತ್ರ ಬರೆದಿದ್ದಾರೆ.. ಈ ಹಿನ್ನೆಲೆ ಹೋಟೆಲ್ ನಲ್ಲಿ ನೂರಾರು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.. ಶಾಸಕರೇ ಭದ್ರತೆ ಕೋರುವುದರ ಜೊತೆಗೆ ಡಿಕೆಶಿಯನ್ನ ಳಗೆ ಬಿಡದಂತೆ ಮನವಿ ಮಾಡಿರುವ ಹಿನ್ನೆಲೆ ಹೋಟೆಲ್ ಒಳ ಪ್ರವೇಶಿಸಲು ಯತ್ನಿಸಬಹುದು. ಈ ವೇಳೆ ಭಾರೀ ಹೈಡ್ರಾಮಾ ನಡೆಯುವ ಸಾಧ್ಯತೆ ಇದೆ..